ದೇವರಿಗಿಂತ ದೊಡ್ಡವರು ಗುರುಗಳು

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

ಒಂದೊಂದು ಮನೆ, ಹಳ್ಳಿ,ಗ್ರಾಮ,ಪಟ್ಟಣ,ಜಿಲ್ಲೆ, ರಾಜ್ಯ,ದೇಶ ವಿದೇಶದವರೆಗೆ ಒಂದೇ ದೇವರು ಅನೇಕ ರೂಪದಲ್ಲಿ ಅವತರಿಸಿ ಭಕ್ತರ ಬೇಡಿಕೆಗಳನ್ನು ಪೂರೈಸಿ ಕೊಡುತ್ತಿದ್ದರೂ ಭಕ್ತರಿಗೆ ದೇವರು ಕಾಣುತ್ತಿಲ್ಲ, ಸಮಸ್ಯೆ ಬೆಳೆಯುತ್ತಿದೆ, ಬೇಡಿಕೆಗಳಿಗೆ ಕೊನೆಯಿಲ್ಲವಾಗುತ್ತಿದೆ.

ಹಾಗಾದರೆ ದೇವರಿಲ್ಲವೆ? ಅಥವಾ ದೇವರನ್ನು ಮಾನವ ತಿಳಿದು ನಡೆದಿರೋದೆ ತಪ್ಪೆ? ಚರಾಚರದಲ್ಲಿಯೂ ಅಡಗಿರುವ ದೈವ ಶಕ್ತಿಯನ್ನುnಜ್ಞಾನ ಚಕ್ಷುವಿನಿಂದ ನೋಡಿ ದೈವಭಕ್ತಿ,ಶಕ್ತಿ,ಜ್ಞಾನವನ್ನು ಬೆಳೆಸಿಕೊಂಡವರು ಈಗ ದೇವರಾಗಿದ್ದಾರೆಂದರೆ‌ ದೇವರು ಹಲವರು.

ಒಬ್ಬ ದೇವರನ್ನು ಹಲವು ನಾಮಗಳಿಂದ ಮಾನವ ಪೂಜಿಸಿರೋದು ಅವನೊಳಗಿದ್ದ ಅಸಂಖ್ಯಾತ ಶಕ್ತಿಯ ಮೂಲಕ. ಅಂದರೆ ದೈವ ಶಕ್ತಿ ಯ ಒಂದು ಕಣವನ್ನು ಬೆಳೆಸಿಕೊಳ್ಳಲು ದೈವಗುಣವಿರಬೇಕು. ಆ ಗುಣವನ್ನು ಶಿಕ್ಷಣದಿಂದ ಬೆಳೆಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಜನಸಾಮಾನ್ಯರೊಳಗಿರುವ ಆ ಶಕ್ತಿಯನ್ನು ಅರಿತು ಅದಕ್ಕೆ ತಕ್ಕಂತೆ ಶಿಕ್ಷಣ ನೀಡುವ ಗುರುವೇ ದೈವ.

- Advertisement -

ದೇವರಿಗಿಂತ ದೊಡ್ಡವರು ಗುರುಗಳು. ಗುರುವಿಲ್ಲದೆ ಗುರಿಯಿಲ್ಲ ಎನ್ನುವಂತೆ ಪ್ರತಿಯೊಬ್ಬರಲ್ಲೂ ಅಡಗಿರುವ ಜೀವಾತ್ಮನ ಗುರಿ ಪರಮಾತ್ಮನ ಕಡೆಗೆ ನಡೆದು ಮುಕ್ತಿ ಪಡೆಯೋದಾಗಿದ್ದರೆ ಭೂಮಿಯಲ್ಲಿ ಯಾರೂ ಇರುತ್ತಿರಲಿಲ್ಲ.ಹೀಗಾಗಿಯೇ ಭೂಮಿಯಲ್ಲಿ ಅಸುರರಿಗೆ ಜೀವನ ನಡೆಸಲು ಅವಕಾಶ ನೀಡಿರೋದು.ಅಸುರರ ಸಂಖ್ಯೆ ಬೆಳೆದಂತೆ ಅಧರ್ಮ ಹೆಚ್ಚಾಗುತ್ತದೆ.

ಭೂಮಿಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯತೆ ಬೆಳೆದಂತೆಲ್ಲಾ ಭೂಮಿ ನಡುಗಿ,ಭೂ ಕಂಪ ಪ್ರವಾಹ,ಪ್ರಳಯಗಳಂತಹ ಪ್ರಕೃತಿ ವಿಕೋಪಗಳಿಂದ ಜನರ ಜೀವ ಹೋಗುತ್ತದೆ. ಇಲ್ಲಿ ಪ್ರತಿಯೊಬ್ಬರೊಳಗೂ ಇರೋ ಶಕ್ತಿ ಒಂದೇ.ಆದರೂ ಅದರಿಂದ ಹುಟ್ಟಿದ ಅನೇಕ ಶಕ್ತಿಗಳನ್ನು ಒಂದಾಗಿಸಲು ಯಾರಿಗೂ ಸಾಧ್ಯವಿಲ್ಲ.

ಹೀಗಾಗಿ ಕಾಲಕ್ರಮೇಣ ಭೂಮಿಯ ಸತ್ಯ, ಸತ್ವ ಇಳಿಮುಖವಾಗಿ ಅಧರ್ಮ, ಅನ್ಯಾಯ, ಅಸತ್ಯದ ರಾಜಕೀಯವೇ ಮೇಲುಗೈ ಸಾಧಿಸಿ,ಭೌತಿಕಾಸಕ್ತಿ ಹೆಚ್ಚಾಗಿ ಮಾನವ ತನ್ನ ಒಳಗಿದ್ದ ದೇವರನ್ನು ಬಿಟ್ಟು ಹೊರಬಂದು ಎಲ್ಲಾ ಕಡೆಯಲ್ಲಿಯೂ ದೇವಸ್ಥಾನ ಕಟ್ಟುತ್ತಾ ಮಾನವರ ಕಲ್ಯಾಣಕ್ಕಾಗಿ ಧರ್ಮ ಕಾರ್ಯ ನಡೆಸುತ್ತಾ ಮುಂದೆ ಮುಂದೆ ಬಂದರೂ, ಹಿಂದಿರುಗಿ ಹೋಗೋ ಮಾರ್ಗ ಮುಚ್ಚಿಹೋದಾಗ ಹಿಂದಿನದನ್ನು ನೆನಪಿಸಿಕೊಂಡು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಬದಲಾವಣೆ ಅಸಾಧ್ಯ.

ಶ್ರೀ ರಾಮನಂತೆ,ಶ್ರೀ ಕೃಷ್ಣ ನಿರಲಿಲ್ಲ. ಆದರೆ ಶ್ರೀ ರಾಮನ ಅದ್ವೈತ ತತ್ವದಿಂದ ಧರ್ಮಸ್ಥಾಪನೆ ಮಾಡಿದ್ದನ್ನು ಈಗ ಜನರು ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಶ್ರೀ ಕೃಷ್ಣನ ರಾಜಕೀಯ ತಂತ್ರಗಾರಿಕೆಯನ್ನು ಹೆಚ್ಚು ಬಳಸುತ್ತಾರೆ. ಆದರೆ, ನಮ್ಮೊಳಗೇ ಅಡಗಿರುವ‌ ‌ದೈವಶಕ್ತಿಯಿಂದ ನಾವೇ ದೂರವಿರುವ ಸತ್ಯವನ್ನು ಒಪ್ಪಿಕೊಳ್ಳದೆ ನಾನೇ ದೇವರು ಎನ್ನುವವರಿದ್ದಾರೆ. ಇಲ್ಲಿ ದೈವತ್ವ ಕ್ಕೆ ಸತ್ಯದ ನಡೆನುಡಿಯ ಅಗತ್ಯವಿದೆ. ರಾಜಕೀಯದಲ್ಲಿ ಇದು ಇಲ್ಲದ ಕಾರಣ ನಮ್ಮ ರಾಜಕೀಯ ಸಹಕಾರದಿಂದ.

ಶಕ್ತಿಹೀನಶರೀರವಾಗುತ್ತಿದೆ. ದೇಹಕ್ಕೆ ನೀಡುವ ಆಹಾರದಿಂದ ದೇಹ ಬೆಳೆಸಿಕೊಂಡರೆ ಆತ್ಮಕ್ಕೆ ನೀಡುವ‌ ಸಾತ್ವಿಕ ಶಿಕ್ಷಣ ಆತ್ಮಜ್ಞಾನ ಹೆಚ್ಚಿಸುತ್ತದೆ. ದೇಶದತುಂಬಾ ದೇವಸ್ಥಾನ ದೇಶದ ತುಂಬಾ ಧರ್ಮ,ಪಂಗಡ,ಜಾತಿ, ನ್ಯಾಯಾಲಯ ಶಿಕ್ಷಣ ಸಂಘ,ಸಂಸ್ಥೆಗಳು, ಮಠ,ಮಂದಿರಗಳಿದ್ದರೂ ಯಾಕೆ ದೇಶದ ಜನತೆಯ ಬಡತನದ ಸಮಸ್ಯೆ ಬೆಳೆದಿದೆ? ಕಾರಣವಿಷ್ಟೆ. ಬಡತನವನ್ನು ಹಣದಿಂದ ಅಳೆಯಲಾಗಿ ಬಡವರ ಹೆಸರಲ್ಲಿ ಸಾಲ ಮಾಡಿ , ಬಡವರನ್ನು ರಾಜಕೀಯಕ್ಕೆ ಎಳೆದುಕೊಂಡು ,ದೇವರ ಹೆಸರಿನಲ್ಲಿ ವ್ಯವಹಾರ ನಡೆಸಿಕೊಂಡು ಸತ್ಯವನ್ನು ಹಿಂದಿಟ್ಟುಕೊಂಡು ತತ್ವಕ್ಕೆ ಬದಲಾಗಿ ತಂತ್ರದಿಂದ ಜನರ ದಾರಿ ತಪ್ಪಿಸುವ ಶಿಕ್ಷಣ ನಮ್ಮೊಳಗಿದೆ. ತತ್ವಜ್ಞಾನದಿಂದ ಜೀವನ ನಡೆಸಲು ಸ್ವತಂತ್ರ ಜ್ಞಾನ ಬೇಕು.ಅವರವರ ಮೂಲ ಧರ್ಮ ಕರ್ಮ ತಿಳಿದು ಅದರ ಪ್ರಕಾರ ಶಿಕ್ಷಣ ಪಡೆದು ಸ್ವತಂತ್ರ ಜೀವನ ನಡೆಸುತ್ತಿದ್ದ ಹಿಂದಿನ ಮಹಾತ್ಮರುಗಳು, ಜ್ಞಾನಿಗಳು, ಕಲಾವಿದರು, ಸಾಹಿತಿಗಳು ಇಂದಿನ ಪಠ್ಯಪುಸ್ತಕದಿಂದ ಹೊರಬಂದು, ಹೊರಗಿನ ಕಾರ್ಯಕ್ರಮದ ಇತಿಹಾಸ ಪುರಾಣ ಕಾಲದ ಮಹಾತ್ಮರ ಸಾಲಿನಲ್ಲಿದ್ದು ಮಧ್ಯವರ್ತಿಗಳ ಪ್ರವಚನ ಭಾಷಣದ ಮೂಲಕ ಅವರ ಜೀವನ ಚರಿತ್ರೆ ತಲುಪಿದೆ.

ಆದರೆ ತಲುಪಿಸುತ್ತಿರುವವರ ಖಾಸಗಿ ಜೀವನ ಶೈಲಿ ಮಹಾತ್ಮರಂತೆ ಇದೆಯೆ? ಪ್ರಶ್ನೆಗೆ ಉತ್ತರ ಕೆಲವರಿದ್ದಾರೆ. ಹಲವರಿಗೆ ಇದು ಅಸಾಧ್ಯವೆನಿಸಿದೆ. ಅಸಾಧ್ಯವೆನಿಸಿದರೆ ಅದು ಬೇರೆಯವರಿಗೂ ಅಸಾಧ್ಯವೆ. ನಮ್ಮ ಮಕ್ಕಳಿಗೆ ಸಾಧ್ಯವಾಗುತ್ತದೆ ನನಗೆ ಸಾಧ್ಯವಿಲ್ಲ ಎನ್ನುವಾಗ ನಾನು ಮಕ್ಕಳಿಗಿಂತ ದೊಡ್ಡವನಾಗೋದಿಲ್ಲ.

ಹೀಗಾಗಿ ನಾವು ದೊಡ್ಡವರೆನ್ನಿಸಿಕೊಳ್ಳಲು ವಯಸ್ಸಿಗಿಂತ ಜ್ಞಾನ ಮುಖ್ಯ. ಹಿಂದೆ ಎಷ್ಟೋ ಅಸುರಪುತ್ರರಲ್ಲಿ ದೈವಗುಣವಿತ್ತು.ಕಾರಣ ಅವರಿಗೆ ನೀಡಿದ ಶಿಕ್ಷಣದ ಪ್ರಭಾವ. ಉದಾಹರಣೆಗೆ ಹಿರಣ್ಯಕಶ್ಯಪು ಪ್ರಹ್ಲಾದರ ಕಥೆ ಎಲ್ಲರಿಗೂ ತಿಳಿದಿದೆ. ಇನ್ನು ದಶರಥನಿಗಿಂತ ಶ್ರೀ ರಾಮಚಂದ್ರ ದೇವರಾಗಿ ಜನಸಾಮಾನ್ಯರೊಳಗಿರೋದು ಶ್ರೀ ರಾಮನ ತತ್ವಜ್ಞಾನ. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಜಗತ್ತಿಗೆ ಪ್ರಸಿದ್ದರಾಗಿರೋದು ಅವರ ದೇಶಭಕ್ತಿಯಿಂದ, ದೇವರ ಭಕ್ತರಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷ ಶಕ್ತಿ ಕಾಣಬಹುದು.

ಒಟ್ಟಿನಲ್ಲಿ ನಮ್ಮೊಳಗಿನ ಒಂದು ಸಣ್ಣ ಬಿಂದುವಿನ ದೈವಕಣವನ್ನು ಬೆಳೆಸಿಕೊಳ್ಳಲು ಮನಸ್ಸು ಮುಖ್ಯ. ಮನಸ್ಸು ತಡೆಹಿಡಿದುಕೊಂಡು ಜೀವನ ನಡೆಸಲು ತಪಸ್ಸು,ಧ್ಯಾನ ಯೋಗ,ಜಪದ ಅಗತ್ಯವಿದೆ. ಸಂಸಾರಕ್ಕೆ ಬಂದ ಮೇಲೆ ಇತರರ ಮನಸ್ಸೂ ಜೊತೆಗೆ ಸೇರಿ ಇನ್ನಷ್ಟು ಗೊಂದಲ ಕ್ಕೆ  ಎಳೆಯುತ್ತದೆ ಹೀಗಾಗಿ ಮನೆಯೊಳಗೆ ದೇವರ ಪೂಜೆ, ಧ್ಯಾನ,ಭಜನೆ, ಸತ್ಸಂಗ, ದಾನ, ಧರ್ಮ ಹೆಚ್ಚಾಗುತ್ತಾ ಹೋಯಿತು.

ಹೀಗೇ ಕುಟುಂಬಗಳ ಒಗ್ಗಟ್ಟಿಗಾಗಿ ಬೆಳೆಸಿದ ದೇವರನ್ನು ಮಾನವ ವ್ಯವಹಾರಕ್ಕೆ ಎಳೆದು ಹಣದ ಲಾಭ ನಷ್ಟದ ಕಡೆಗೆ ಭೌತಿಕಾಸಕ್ತಿ ಹೆಚ್ಚಾಗುತ್ತಾ ಕಲಿಗಾಲದವರೆಗೆ ದೇವತೆಗಳು ಬಂದಿದ್ದಾರೆ. ಆದರೆ ಇಲ್ಲಿ ಹಿಂದಿನ ಉದ್ದೇಶ ತಿಳಿಸದೆ ಹಿಂದಿನ ಪುರಾಣ ತಿಳಿಸುವ ಕಥೆ ಕೇಳುತ್ತಾ ತಮ್ಮ ಜೀವದ ವ್ಯಥೆಗೆ ಪರಿಹಾರ ಕಂಡುಕೊಳ್ಳಲು ರಾಜಕೀಯದ ಕಡೆಗೆ ಮುಖ ಮಾಡಿದವರು ಬೆಳೆದಂತೆಲ್ಲಾ ಸಮಸ್ಯೆಯ ಮೂಲ ಬೆಳೆಸಿದರೆ ಸಮಸ್ಯೆಗೆ ಪರಿಹಾರವಿಲ್ಲ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!