ಪುಸ್ತಕದ ಹೆಸರು: ಚನ್ನಬಸಪ್ಪ ಕರಾಳೆ(ಲಿಂಗಾಯತ ರೆಜಿಮೆಂಟ್ ಸ್ಥಾಪಕ). ಲೇಖಕರು:ಡಾ.ಎಂ.ಬಿ.ಹೂಗಾರ ಪ್ರಕಾಶಕರು:ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ. ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ ಗದಗ ಪುಟಗಳು:160 ಬೆಲೆ:150
ಚನ್ನಬಸಪ್ಪ ಕರಾಳೆ ಅವರ ಮನೆತನದ ಆಗರ್ಭ ಶ್ರೀಮಂತಿಕೆ ವೈಭವ ರಾಜಮರ್ಯಾದೆ ಏನೆಲ್ಲ ಇದ್ದರೂ, ಅಹಂಕಾರದ ಮದ ನೆತ್ತಿಗೇರದೇ ಸದು ವಿನಯಶಾಲಿಯಾಗಿಯೇ ಕೊನೆವರೆಗೂ ಉಳಿದವರು ಶ್ರೀ ಚನ್ನಬಸಪ್ಪ ಕರಾಳೆಯವರು. ನಾಡು ಭೀಕರ ಬರಕ್ಕೆ ಈಡಾಗಿ ತತ್ತರಿಸಿದಾಗ ಅಲ್ಲಲ್ಲಿ ಅನ್ನ ಛತ್ರಗಳನ್ನು ಪ್ರಾರಂಭಿಸಿ ಸಹಸ್ರಾರು ಬಡಜನರ ಹಸಿವೆ ಹಿಂಗಿಸಿದ ಪುಣ್ಯಾತ್ಮರು ದಾಸ್ಯ ಮನೋಭಾವದ ಸಂಕೇತವಾಗಿದ್ದ ‘ರಾವ್ ಸಾಹೇಬ’ ಪದವಿಯನ್ನು ಬ್ರಿಟಿಷ್ ಸರಕಾರಕ್ಕೆ ಮರಳಿಸಿ, ಸ್ವಾಭಿಮಾನ ಮೆರೆದ ಈ ಮಹನೀಯರದ್ದು ಶರಣ ಸಮ್ಮತ ಜೀವನ. ಕಾಗವಾಡದ ಡಾ.ಎಂ.ಬಿ. ಹೂಗಾರ ಅವರಿಗೆ ಗ್ರಂಥ ದಾಸೋಹಗೈದ ಅಕ್ಷಯ ಬಾಬುರಾವ ಯರಝರ್ವಿ ಧರ್ಮಪತ್ನಿ ಶ್ರೀಮತಿ.ಜಯಪ್ರಿಯಾ ತಂದೆ ಬಸವರಾಜ ಸಿಂಧೂರ ಇವರಿಗೆ ಹಾರೈಸಿದ್ದಾರೆ.
ಲೇಖಕರಾದ ಡಾ.ಎಂ.ಬಿ.ಹೂಗಾರ ಅವರು ವಿಜಯಪುರದ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರು ಶ್ರೀ.ರಾಜೇಂದ್ರ ಕರಾಳೆಯವರ ಮನೆಗೆ 07/09/2012 ರಂದು ದಯಮಾಡಿಸಿದ್ದರು. ಕರಾಳೆ ಅವರು ಸುಮಾರು 300 ವರ್ಷಗಳ ಇತಿಹಾಸದ ಸಂಪುಟಗಳನ್ನು ದಾಖಲೆ ಪತ್ರಗಳು ಕೈಬರಹ ಓಲೆಗಳು, ಭಾವಚಿತ್ರದ ಸಂಕಲನಗಳು, ವಸ್ತು ಒಡವೆಗಳು ಕರಾಳೆಯವರು ಬಳಸುತ್ತಿದ್ದ ಆಭರಣಗಳು, ಸಂದೂಕ ಪೆಟ್ಟಿಗೆಗಳು ಅವರು ದಾನಗೈದ ದಾನಪತ್ರಗಳು ಗಮನಿಸಿ ಇದನ್ನು ಗ್ರಂಥವಾಗಿ ಪ್ರಕಟಿಸಿ ಎಂದಾಗ ಇವರು ಇದನ್ನು ಕೈಗೆತ್ತಿಗೊಂಡರು.
ಕರಾಳೆ ಮನೆತನವು ವಿಜಾಪುರ ಜಿಲ್ಲೆಗೆ ಸಂಬಂಧಪಟ್ಟಿದ್ದು, ಈ ಮನೆತನದ ಮೂಲ ಪುರುಷರು ಕ್ರಿ.ಶ.1126 ರಲ್ಲಿ ನಿಂಬರಗಿಯಲ್ಲಿ ವಾಸವಾಗಿದ್ದರು. ಮೂಲಪುರುಷ ಬಸಪ್ಪ ನಿಂಬರಗಿಯ ದೇವಗತಿಯು ಇವರದಾಗಿತ್ತು. ಕಲ್ಯಾಣ ಕ್ರಾಂತಿ ಆದಾಗ ನಿಂಬರಗಿಯ ದೇಸಗತಿಯನ್ನು ತೊರೆದು ಗೋದಿಬನ್ನೂರಲ್ಲಿ ಬಂದು ನೆಲೆ ಊರುತ್ತಾರೆ. ಬರುವಾಗ ತಮ್ಮ ಮೂಲ ಪುರುಷನ ಕೊರಳಿನಲ್ಲಿ ಚೌಕಿ (ಗುಂಡಗಡಗಿ) ತೆಗೆದುಕೊಂಡು ಬಂದರು. ಅದರ ವೈಶಿಷ್ಟ್ಯವೇನೆಂದರೆ ಅದು ಈಗಿನ ಗುಂಡಗಡಿಗೆಯ ಹಾಗೂ ಗೋಲಾಕಾರವಾಗಿ ಇರದೆ ಇಷ್ಟಲಿಂಗ ಸ್ವರೂಪದಲ್ಲಿ ಬಾಣ ಹಾಗೂ ಪೀಠಗಳನ್ನು ಒಳಗೊಂಡಿದೆ. ಇಂದಿಗೂ ಜತನವಾಗಿ ಇಟ್ಟಿದ್ದಾರೆ. ಇದು ಅತೀ ಪುರಾತನ ಕಾಲದ್ದೆಂದು ಗೊತ್ತಾಗುತ್ತದೆ.
ಗೋದಿ ಬನ್ನುರಲ್ಲಿ ಬಸಪ್ಪನ ಪುತ್ರ ಮಲ್ಲಪ್ಪ ಇರುವಾಗ ಚನಬಸಪ್ಪ ಜನಿಸುತ್ತಾನೆ. ನಂತರ ನಾಲ್ಕು ತಲೆಮಾರಿನಲ್ಲಿ ಸಾತವೀರಪ್ಪ, ಚನವೀರಪ್ಪಾ, ಮಹಾರುದ್ರಪ್ಪ, ಮಲ್ಲಪ್ಪ, ಚನಬಸಪ್ಪ ಈ ಪುತ್ರ ಸಂತತಿಯಿಂದಾಗಿ ಬಳ್ಳಿ ಹಬ್ಬುತ್ತದೆ. 1630 ರಲ್ಲಿ ಚನಬಸಪ್ಪ ಸಂಕೇಶ್ವರಕ್ಕೆ ಬರುತ್ತಾನೆ. ಪು.ಸಂ:01 ಇವರಿಗೆ ಏಳುಜನ ಮಕ್ಕಳು ಒಂದು ಹೆಣ್ಣು ಮಗಳು ಎಂಟು ಜನ ಮಕ್ಕಳನ್ನು ಕಟ್ಟಿಕೊಂಡು ಬಾಳುತ್ತಾರೆ. ಸಾತಪ್ಪ 1680 ಸಂಕೇಶ್ವರದಲ್ಲಿ ನೆಲೆಯಾಗಿ ಸಾತಪ್ಪ ಹಾಗೂ ಅವರ ಮಗ ಮಹಾರುದ್ರಪ್ಪ ಯಕ್ಸಂಬಾಕ್ಕೆ ಬಂದು ನಿಲ್ಲುತ್ತಾರೆ. 1750 ರಲ್ಲಿ ದುಡಿಮೆಯಿಂದ, ಬುದ್ಧಿಶಕ್ತಿಯಂದ ಯಕ್ಸಂಬಾದಲ್ಲಿ ನೆಲೆ ನಿಲ್ಲುತ್ತಾರೆ. 1780 ರಲ್ಲಿ ಮಹಾರುದ್ರಪ್ಪನವರ ಮಗ ಚನವೀರಪ್ಪನವರು ಊರಿಗೆ ಹೊಂದಿಕೊಂಡು ವ್ಯಾಪಾರ ಮಾಡುತ್ತಾ, ಇವರಿಗೆ ಒಬ್ಬ ಮಗ ಸಾತವೀರಪ್ಪ. ಇವರ ಮಡದಿ ಗಂಗವ್ವ ಜೊತೆ ದಾಂಪತ್ಯ ಜೀವನ ಸಾಗಿಸುತ್ತಿರುವಾಗ ಒಂದು ಪವಾಡ ನಡೆಯುತ್ತದೆ. ಯಕ್ಸಂಬಾ ಗ್ರಾಮದಲ್ಲಿ ಬಣಜಿಗ ಸಮಾಜಕ್ಕೆ ಸೇರಿದ ಮನಕಾಳೆ ಎಂಬ ಆಗರ್ಭ ಶ್ರೀಮಂತ ಮನೆತನ ಅವರ ಮನೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಂಬಿ ಇತ್ತು. ಪ್ರತಿವರುಷ ಯುಗಾದಿಗೆ ಊರಿನ ಸ್ವಾಮಿಗಳನ್ನು ಶ್ರೀಶೈಲಕ್ಕೆ ಕಂಬಿ ಹೊತ್ತು ಕಳುಹಿಸಿಕೊಡುತ್ತಾರೆ. ಅಲ್ಲಿ ದರ್ಶನ ಅಭಿಷೇಕ ಮಾಡಿ ತಿರುಗಿ ಬಂದ ನಂತರ ಮೊದಲೇಶಿ ಜಾಗರಣೆ ಹಾಗೂ ಐದೇಶಿ ಮಾಡುವ ಸಂಪ್ರದಾಯವಿತ್ತು. ಮೊದಲೇಶಿ ಜಾಗರಣೆಯ ನಸುಕಿನ ಜಾವದ ಮಂಗಳಾರತಿ ಆಗುತ್ತದೆ. ನಂತರ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಂಬಿಯನ್ನು ತಿರುಗಿ ಅವರ ಮನೆಗೆ ದೀ ನಡಿಗೆ ಮುತ್ತೈದೆಯರಿಂದ ಪ್ರವೇಶ ಮಾಡಿ ತುಂಬಿದ ಅಡಿಷೇರನ್ನು ಕಂಬಿಹೊತ್ತು ಸ್ವಾಮಿಗಳು ಉರುಳಿಸಿ, ದೇವರನ್ನು ಪ್ರತಿಷ್ಠಾನ ಮಾಡುವ ಸದ್ಗತಿ ಇದೆ. ಹೀಗೆ ನಡೆಯುತ್ತಿರಲಾಗಿ ಒಂದು ವರುಷ ಶ್ರೀಶೈಲಕ್ಕೆ ದೇವರನ್ನು ಕಳುಹಿಸಿ ಮೊದಲೇಶ ಜಾಗರಣೆಯನ್ನು ಮಾಡಿ ಕಂಬಿ ದೇವರನ್ನು ಮರಳಿ ಮನಕಾಳಿಯವರ ಮನೆಗೆ ಒಯ್ಯುವ ಸಂದರ್ಭದಲ್ಲಿ ಮನಕಾಳೆಯವರ ಮನೆಯಲ್ಲಿ ನಡೆದ ಅಹಿತಕಾರಿ ಘಟನೆಯಿಂದ ಕಂಬಿ ಹೊತ್ತು ಸ್ವಾಮಿಗಳ ಮೈಯಲ್ಲಿ ದೇವರು ಬಂದು ಕಂಬಿ ದೇವರನ್ನು ಹೊತ್ತು ಓಡುತ್ತಾ ಸಾತವೀರಪ್ಪ ಕರಾಳೆಯವರ ಮನೆ ಪ್ರವೇಶ ಮಾಡುತ್ತಾರೆ. ಬೆಲ್ಲದ ಪ್ರಸಾದ ಪನಿವಾರವನ್ನು ಹಂಚುತ್ತಾರೆ. ಅಂದಿನಿಂದ ಮನೆ ದೇವರಿಗಾಗಿ ಇಂದಿನವರೆಗೂ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಂಬಿಯ ಖಾಯಂ ವಾಸವು ಇವರ ಮನೆಯಲ್ಲಿ ಇದೆ.
1975ರಲ್ಲಿ ಸಂಸ್ಕೃತ ಪಾಠಶಾಲೆಯನ್ನು ದಾನಿಗಳಿಂದ ಕೊಟ್ಟ ಹಣಕ್ಕೆ ಬಡ್ಡಿಯನ್ನು ಶಿಕ್ಷಕರಿಗೆ ಪಗಾರ ನೀಡಿ ಪ್ರಾರಂಭಿಸುತ್ತಾರೆ. ಇದಕ್ಕೆ ಕಮೀಟಿ ಇರುತ್ತದೆ. ಚನವೀರಪ್ಪನವರು ಶ್ರೀಶೈಲಕ್ಕೆ ಹೋದಾಗ ಪಾತಾಳ ಗುಹೆಯಲ್ಲಿ ಸ್ನಾನ ಮಾಡುವ ಸಮಯದಲ್ಲಿ ಕೈಯೊಳಗಿನ ಇಷ್ಟ ಲಿಂಗ ಜಾರಿ ಬೀಳುತ್ತದೆ. ಅದು ಒಂದು ರೀತಿ “ಲೋಕದ ಸಖ್ಯ ಸಾಕು ಬಾ ಸ್ವರ್ಗಕ್ಕೆ” ಎಂದಂತಿತ್ತು. ಲಿಂಗ ಹುಡುಕಲು ನೀರಿಗೆ ಧುಮುಕಿದಾಗ ತಿರುಗಣಿ ಮಡವಿನೊಳಗೆ ಸಿಕ್ಕು ದೇಹ ಬಿಡುತ್ತಾರೆ. ಶತ ವರ್ಷ ತುಂಬು ಬಾಳನ್ನು ಬಾಳಿದರು. ಸಾತವೀರಪ್ಪನ ಮಗ ಮಲ್ಲಪ್ಪ 1860-1899 ಸಾತವೀರಪ್ಪನು ತಮ್ಮ ಮಗ ಮಲ್ಲಪ್ಪನ ಹೆಗಲಿಗೆ ವಹಿಸಿ ಸದಲಗಾ ಬೀಗರಾದ ಚನವೀರಪ್ಪ ಹಾಲಪ್ಪನವರ ಮತ್ತು ಧರ್ಮ ಪತ್ನಿ ಗುರವ್ವಾ ಇವರ ಮಗಳಾದ ಕಾಶವ್ವನ ಜೊತೆ ಲಗ್ನವಾಗುತ್ತದೆ. ಲಗ್ನವಾದ ಒಂದು ವರುಷದಲ್ಲಿ ಗಂಡು ಮಗು ಜನಿಸುತ್ತದೆ. ಅವನಿಗೆ ಚನಬಸಪ್ಪ ಎಂಬ ನಾಮಕರಣ ಮಾಡುತ್ತಾರೆ. 1890 ರಲ್ಲಿ ಎರಡನೇ ಮಗ ಜನಿಸುತ್ತಾನೆ. ಇವನಿಗೆ ಸಾತಪ್ಪ ಎಂದು ನಾಮಕರಣ ಮಾಡುತ್ತಾರೆ. ಆದರೆ ಬಹಳ ದಿನ ಇರುವುದಿಲ್ಲ. ಚನ್ನಬಸಪ್ಪ ಸಾತಪ್ಪನ ತಾಯಿಯಾದ ಕಾಶವ್ವ ಲಿಂಗೈಕ್ಯರಾದ ನಂತರ ಮಲ್ಲಪ್ಪನವರು ಲಿಂಗೈಕ್ಯರಾದರು. ಪು.ಸಂ:02 ಚನ್ನಬಸಪ್ಪ ಯಕ್ಸಂಬಾದಲ್ಲಿ 1886ರಲ್ಲಿ ಜನಿಸಿದರು. ಸೋದರ ಮಾವನ ಸಂಸ್ಕಾರದ ವ್ಯಾಪಕ ವಹಿವಾಟು ಮಾಡುವ ವಿಧಾನವನ್ನು ಸೂಕ್ಷ್ಮವಾದ ವ್ಯವಹಾರ ಜ್ಞಾನವನ್ನು ಪಡೆದುಕೊಂಡರು. 1905ರಲ್ಲಿ ಕಲ್ಲೋಳ್ಳಿಯ ಗೌಡರ ಮನೆತನದ ಕಲ್ಲಪ್ಪನನ್ನು ಚನ್ನಬಸಪ್ಪನಿಗೆ, ಸಾತಪ್ಪನಿಗೆ ಗಡಹಿಂಗ್ಲಜರ ದಡ್ಡಿ ಮನೆತನದ ಚನ್ನಕ್ಕನೊಂದಿಗೆ ಲಗ್ನಮಾಡಿದರು. ಸಾತಪ್ಪನ ಪತ್ನಿ ಚನ್ನಕ್ಕ ಬಾಲ್ಯದಲ್ಲೇ ಲಗ್ನವಾಗುವುದು, ಇವಳು 1863 ರಲ್ಲಿ ಬಂದು 1941 ರಲ್ಲಿ ಬಂದು ಬಾವಿ ತೆಗೆದು ಲೋಕಾರ್ಪಣೆ ಮಾಡಿದಳು. ಶಿವಲಿಂಗವ್ವ ಎರಡನೇ ಪತ್ನಿ ಶಿವಲಿಂಗವ್ವ ಗಡಹಿಂಗ್ಲಜರ ಅಪ್ಪಯ್ಯ ಗೋಡಖಿಂಡೆ ಇವರ ಸಹೋದರಿ ಮೊದಲ ಪತ್ನಿ ಕಲ್ಲವ್ವ ಶೀವಾಧೀನರಾಗಿದ್ದರಿಂದ ಶಿವಲಿಂಗವ್ವಳನ್ನು ಲಗ್ನವಾಗುತ್ತಾರೆ. ಒಮ್ಮೆ ಇವರ ಮನೆಗೆ ಅಥಣಿಯ ಶ್ರೀ ಮುರುಘೇಂದ್ರ ಸ್ವಾಮಿಗಳು ಬಂದಾಗ ಊಟಕ್ಕೆ ಮಾವಿನ ಸೀಕರಣಿ ಮಾಡುತ್ತಾರೆ. ತಪ್ಪಿ ಓಟಿ (ಗೊರಟಿ) ತಾಟಿನಲ್ಲಿ ಹಾಕಲಾಗಿ ಎಲ್ಲರೂ ಚಿಂತಿತರಾಗುತ್ತಾರೆ. ಕಾರಣ ಸ್ವಾಮಿಗಳ ಊಟದಲ್ಲಿ ನಾನು ಬಡಿಸಹಾಗಿರಲಿಲ್ಲ. ಆದರೆ ಆ ಗೊರಟು ಕರಗಿ ನೀರಾಗುತ್ತಿದೆ. ಇದು ಪವಾಡವೇ ಸರಿ.
ವ್ಯಕ್ತಿಯಾಗಿ ಚನ್ನಬಸಪ್ಪ ಚಿಕ್ಕೋಡಿಗೆ ಮಾಮಲೇದಾರ ಆಗಿದ್ದರು . ಸಿಟ್ಟಿನ ಹಾಗೂ ಧರ್ಮದ ಗಡಸು ಸ್ವಭಾವದವರಾಗಿದ್ದರು. ಒಮ್ಮೆ ಚನ್ನಬಸಪ್ಪನವರು ತಮ್ಮ ಬಳಗದವರೊಂದಿಗೆ ಭೇಟ್ಟಿ ನೀಡಿ ಅವರಿಗೆ ಒಮ್ಮೆ ಬುದ್ಧಿ ಕಲಿಸಿದರು. ಅಂದಿನಿಂದ ಅವರು ತಮ್ಮ ಬದಲಾವಣೆ ಮಾಡಿಕೊಂಡರು. ಒಮ್ಮೆ ಇವರ ಹೊಲದಲ್ಲಿ ರಾಶಿ ಮಾಡುವಾಗ 6ಚೀಲ ಬೇರೆ ಬಣವೆ ಕೆಳಗೆ ಮುಚ್ಚಿ ಇಟ್ಟಿರುತ್ತಾರೆ. ಜೋಳವನ್ನು ಇವರು ಹೋಗಿ ಯಾರು ಮುಚ್ಚಿ ಇಟ್ಟಿರುವಿರಿ ಎಂದಾಗ ಇಬ್ಬರು ರೈತರು ನಮ್ಮಿಂದ ತಪ್ಪಾಗಿದೆ ಎಂದಾಗ ಇವರಿಗೆ ಸ್ವತಃ ಮನೆಗೆ ಹೋಗಿ ಅವನಿಗೆ ಮೂರು ಇನ್ನೊಬ್ಬ ರೈತನಿಗೆ ಮೂರು ಚೀಲ ಮುಟ್ಟಿಸುತ್ತಾರೆ ಎಂದು ಈಗಲೂ ಜನ ಹೇಳುವರು. ಇವರ ಮನೆಯಲ್ಲಿ “ಗಣಮಾತ್ರಾ” ಎನ್ನುವ ಒಂದು ಲಿಂಗದಂತಹ ಕಪ್ಪು ಬಣ್ಣದ ಗಟ್ಟಿಯಾದ ಮಾತ್ರಿಕೆ ಇತ್ತು. ಅದನ್ನು ಸಾಣೆಯ ಕಲ್ಲಿನ ಮೇಲೆ ತೇಯ್ದು ಅದರ ಗಂಧವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಸಾವು ಸಮೀಪಿಸುತ್ತಿರುವ ಹಾಗೂ ಮಾತು ಬಾರದ ವ್ಯಕ್ತಿಯ ನಾಲಿಗೆಗೆ ಅದನ್ನು ಸವರಿದರೆ, ಆ ವ್ಯಕ್ತಿಯು ಮತ್ತೇ ಸ್ವಲ್ಪ ಹೊತ್ತು ಮಾತನಾಡುವ ಶಕ್ತಿಯನ್ನು ಪಡೆದು ತನ್ನ ಕೊನೆಯ ಇಚ್ಛೆ, ಸ್ವಲ್ಪ ಹೊತ್ತು ಮಾತನಾಡುವ ಶಕ್ತಿಯನ್ನು ಪಡೆದು ಬಯಕೆಗಳನ್ನು ಹೇಳಬಲ್ಲನಾಗುತ್ತಿದ್ದನು. ಅಲ್ಲದೇ ಆಯುರ್ವೇದದಿಂದ ಜ್ವರದ ಮಾತ್ರೆಗಳನ್ನು ಜನರಿಗೆ ನೀಡುತ್ತಿದ್ದರು. ಒಮ್ಮೆ ಯಕ್ಸಂಬಾಕ್ಕೆ ಜಿಟ್ಟೆಗಳು ಆವರಿಸಿದ್ದವು. ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಬೆಳಗಾವಿಗೆ ಬಂದಾಗ ಅವರಿಗೆ ಭೆಟ್ಟಿ ಆಗಿ ಗೇಮೆಕ್ಷನ್ ಅನ್ನುವ ಕೀಟನಾಶಕ ಪೌಡರನ್ನು ರೈತಾಪಿ ಜನರು ಅದನ್ನು ಸಾಮೂಹಿಕವಾಗಿ ಸಿಂಪಡಿಸಿದರು. ಆಗಿನ ಕಲೆಕ್ಟರ್ ರಾಮಚಂದ್ರನ್ ಅವರಿಗೆ ಸೂಚಿಸುತ್ತಾರೆ. ಏಳು ಟ್ರಕ್ ಪುಡಿ ರವಾನೆ ಮಾಡಿ ಎಲ್ಲರೂ ಸಿಂಪಡಿಸಲಾಗಿ ಇದುವರೆಗೂ ಚಿಟ್ಟೆ ಮಾಯಮಾಗಿವೆ. ಮುಂದಿನ ಭಾಗದಲ್ಲಿ ಜಿನ್ನಿಂಗ್ ಫ್ಯಾಕ್ಟರಿ, ಆಸ್ತಿ ಪಾಸ್ತಿ, ಸ್ವಂತಮನೆ ಬದಲಾದ ಸಿಂಧೂರ ಲಕ್ಷಣ ಕರುಣಾಮಯಿ, ಧಾರ್ಮಿಕ ಜೀವನ ಯಡೂರಿನ ಪತ್ರಗಳು, ನೀಡಸೋಸಿಮಠದ ಪತ್ರಗಳು, ಚಿತ್ರದುರ್ಗಮಠದ ಪತ್ರಗಳು, ಶ್ರೀ.ಮ.ನಿ.ಪ್ರ. ಮೃತ್ಯುಂಜಯ ಸ್ವಾಮಿಗಳು, ಶ್ರೀ.ಮುರಘಾಮಠದ ಪತ್ರಗಳು, ಬೇಳೂರು ವಿರಕ್ತಮಠದ ಪತ್ರಗಳು, ನಿಪಕ್ಷಪಾತಿ ಸಾಮಾಜಿಕ ಸೇವೆ, ಆರ್ಥಿಕ ನೆರವು, ಪು.ಸಂ:03
ಪ್ರಾಮಾಣಿಕತೆ, ಸ್ಯಾನೇಟರಿ ಕಮೀಟಿ, ಅಖಿಲ ಭಾರತೀಯ ಕಾಂಗ್ಸೇಸ ಕಮೀಟಿ ಅಭಿನವಾ ಪತ್ರಗಳು ಗರಡಿಮನೆ ನರೆವು, ಶೈಕ್ಷಣಿಕ ಕಾಳಜಿ, ಶಿಕ್ಷಣಿ ಪ್ರೇಮಿ, ರಾಜಕೀಯ ನಿಲುವು, ಲಿಂಗಾಯತ ಸಮಾಜಕ್ಕೆ ವಿನಂತಿ, ಶಾಸ್ತ್ರ ವಂಶಾವಳಿ ಒಡನಾಟ. ಮಹತ್ವದ ಪತ್ರಗಳು ಯಕ್ಸಂಬಾ ಜನರ ಮಾನಪತ್ರಗಳು, ದಾನಪತ್ರಗಳು, ಡಾ.ಅಂಬೇಡ್ಕರ ಭೇಟಿ, ಸಾಂಸ್ಕøತಿಕ ಒಲವು, ವಿದ್ಯುತ್ ಸೌಕರ್ಯ ಡಿಸ್ಟ್ರೀಕ್ಟ್ ಲೋಕಲ್ ಬೋರ್ಡದ ಅಧ್ಯಕ್ಷರು ಲಿಂಗಾಯತ ಯುದ್ಧ ಪರಿಷತ್ತಿನ ರೂವಾರಿ ಇವೆ. 1959 ರಲ್ಲಿ ದಿ.ಜನತಾ ಶಿಕ್ಷಣ ಸಂಸ್ಥೆಯ ಹೆಸರಿನ ಶಿಕ್ಷಣ ಸಂಸ್ಥೆಯು ಪ್ರಾರಂಭವಾಯಿತು. ತಮ್ಮ ಮಾಲ್ಕಿಯ 5 ಎಕರೆ ಜಮೀನಿನಲ್ಲಿ ಅವರು ಶಿಕ್ಷಣ ಸಂಸ್ಥೆಯನ್ನು ಕಟ್ಟಿದರು. ಇದಕ್ಕೆ ಶಿವರಾಯ ಭೀಮ ಜೊಲ್ಲೆ, ಶಂಕರ ರಾಮಾಕೇಂದಾಳೆ, ಸಿದ್ದಪ್ಪ ಅಪ್ಪಣ್ಣ ಕಬಾಡೆ, ಅವಬಾ ಲಕ್ಷ್ಮಣ ಖೋತ, ಮಲ್ಲಪ್ಪ ಸಾವಂತಪ್ಪ ನಾಯಿಕ, ಸದಾಶಿವ ಮಹಾದೇವ ಬಾಗೇವಾಡಿ ಇವರು ಕಮೀಟಿ ರಚನೆ ಮಾಡಿ ಪ್ರಾರಂಭ ಮಾಡಿದರು. 8/6/1959 ರಲ್ಲಿ ಜಿಲ್ಲೆಯ ಕಲೆಕ್ಟರರಾದ ಎನ್ ರಾಮಚಂದ್ರರಾವ ಅವರಿಂದ ಪ್ರಾರಂಭೋತ್ಸವ ಮಾಡಿಸಿದರು. ದಿ.ಜನತಾ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಕನ್ನಡ ಕಾನ್ವೆಂಟ್ ಮಾದರಿ ಶಾಲೆ, ಮಾಧ್ಯಮಿಕ ಶಾಲೆ, ಪದವಿ ಪೂರ್ವ ವಿದ್ಯಾಲಯ, ಮತ್ತು ಪದವಿ ಮಹಾವಿದ್ಯಾಲಯವನ್ನು ಇದು ಹೊಂದಿದೆ. ಗಡಿಭಾಗದಲ್ಲಿ ಉತ್ತಮ ಶಿಕ್ಷಣವನ್ನು ಪೂರೈಸುವಲ್ಲಿ ಈ ಶಿಕ್ಷಣ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ. ಅವರ ವಂಶದ ಕುಡಿಯಾದ ಚನಬಸಪ್ಪ ಉರ್ಫ ರಾಜೇಂದ್ರ ಕರಾಳೆ ಮತ್ತು ಸಂಜೀವ ಕರಾಳೆಯವರು ಅದನ್ನು ಮುನ್ನಡೆಸಿಕೊಂಡು ಸಾಗಿದ್ದಾರೆ. 1500 ಜನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 70 ಜನ ನುರಿತ ಶಿಕ್ಷಕರು ಸೇವೆಗೈಯುತ್ತಿದ್ದಾರೆ. ಒಂದು ಅಂದಾಜು ಪ್ರಕಾರ ಐವತ್ತು ಕೋಟಿ ರೂ ಮೌಲ್ಯದ ಆಸ್ತಿಯನ್ನು ಶಿಕ್ಷಣ ಸಂಸ್ಥೆಗಾಗಿ ಇವರು ದಾನ ಮಾಡಿದ್ದು, ಅವರ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ಮಾಡಬೇಕಾದ ಕಾರ್ಯ ಹಲವು ಇದ್ದರೂ, ದೇಹವೂ ಅದನ್ನು ಪೂರೈಸುತ್ತಿದೆಯೋ, ಇಲ್ಲವೋ ಎಂಬ ಸಂದೇಹ ಸಾಮಾನ್ಯವಾಗಿ ಎಲ್ಲರಿಗೂ ಕಾಡುವಂತೆ, ಬಹುಶಃ ಇವರಿಗೂ ಕಾಡಿರಬೇಕು. ನಮ್ಮ ಜನಪದ ಹೆಣ್ಣುಮಕ್ಕಳು ಹಾಡುವ ಈ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತದೆ. “ಆಗ್ಯಾವ ನಮ್ಮ ಜ್ವಾಳಾ ಉಳಿದಾವ ನಮ್ಮ ಹಾಡ” ಎನ್ನುವಂತೆ ಇವರು ಮಾಡುವ ವಿಧಾಯಕ ಕಾರ್ಯಗಳು ಇನ್ನೂ ಇದ್ದರೂ, ಕಾಲ ಅವರಿಗೆ ಗೊತ್ತಿಲ್ಲದಂತೆ ಅವರನ್ನು ಕರೆಯಲು 06/10/1959 ರಂದು ವೃದ್ಧಾಪ್ಯದಿಂದ ನಮ್ಮನ್ನು ಅಗಲಿದರು.
ಎಂ.ವೈ.ಮೆಣಸಿನಕಾಯಿ #7360 ಸೆಕ್ಟರ್ ನಂ:10 ಆಂಜನೇಯನಗರ ಬೆಳಗಾವಿ-17 ದೂ:9742192615