ಮೈಸೂರು – ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠದ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞೆ ಹಾಗೂ ಅನುಗ್ರಹದಿಂದ ಮೇ 16ರಿಂದ 22ರವರೆಗೆ ಕರ್ನಾಟಕದ ಸುಪ್ರಸಿದ್ದ ವಿದ್ವಾಂಸರಾದ ಪಂಡಿತ್ ಶ್ರೀ ಬಾದರಾಯಣಾಚಾರ್ಯರಿಂದ ಅಖಂಡ ಭಾಗವತ ಸಪ್ತಾಹವನ್ನು ಏರ್ಪಡಿಸಲಾಗಿದೆ.
ಮೇ 16ರಂದು ಬೆಳಿಗ್ಗೆ 7.30ಕ್ಕೆ ಶಾಸ್ತ್ರೋಕ್ತವಾದ ಸಪ್ತಾಹ ಕ್ರಮದಲ್ಲಿ ಕಲಶಸ್ಥಾಪನೆ ನಂತರ ಬೆಳಿಗ್ಗೆ 8.30ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 3.30ರಿಂದ 6ರವರೆಗೆ ಭಾಗವತ ಉಪನ್ಯಾಸ ಆಯೋಜಿಸಲಾಗಿದೆ.
ಮೇ 23ರಂದು ಗುರುವಾರ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ 7.30ಕ್ಕೆ ಶ್ರೀ ವೆಂಕಟೇಶ್ವರ ದೇವರಿಗೆ ನಿರ್ಮಾಲ್ಯ ವಿಸರ್ಜನೆ ನಂತರ ಕಲಶಾಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ನಾರಾಯಣ ಮಂತ್ರ ಮತ್ತು ಅಷ್ಟಾಕ್ಷರ ಮಹಾಮಂತ್ರದ ಹೋಮ ಶ್ರೀಮದ್ಭಾಗವತ ಮಂಗಳ ಮಹೋತ್ಸವ ನಡೆಯಲಿದೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಠದ ವ್ಯವಸ್ಥಾಪಕ ಪಂಡಿತ್ ಹೇಮಂತಾಚಾರ್ ಗುಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 8147205326 ಸಂಪರ್ಕಿಸಬಹುದು.