spot_img
spot_img

ಇಂದು ಕಾರ್ಗಿಲ್ ವಿಜಯ ದಿವಸ್; ಗೆಲುವು ತಂದುಕೊಟ್ಟ ಯೋಧರ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ

Must Read

spot_img
- Advertisement -

ಹೊಸದಿಲ್ಲಿ: ಇಂದು ಕಾರ್ಗಿಲ್​ ವಿಜಯ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ಅಂದು ಕಾರ್ಗಿಲ್ ಯುದ್ಧ ದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

ಕಾರ್ಗಿಲ್​ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ಶೌರ್ಯ, ತ್ಯಾಗವನ್ನು ನೆನಪಿಸಿಕೊಂಡ ಅವರು, ಅಂದಿನ ಯೋಧರ ಧೈರ್ಯ ಇಂದೂ ಕೂಡ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಕಾರ್ಗಿಲ್​ ವಿಜಯ ದಿವಸ್​​​ದ ಈ ದಿನದಂದು ನಾವು ಅಂದು ಹೋರಾಡಿದ ಯೋಧರ ತ್ಯಾಗ, ಶೌರ್ಯವನ್ನು ನೆನಪಿಸಿಕೊಳ್ಳಬೇಕು. ಅಂದು ರಾಷ್ಟ್ರರಕ್ಷಣೆಗಾಗಿ ಜೀವವನ್ನೇ ಸಮರ್ಪಿಸಿದವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದ್ದಾರೆ.

- Advertisement -

ಈ ಬಾರಿ ಕಾರ್ಗಿಲ್​ ವಿಜಯ್​ ದಿವಸ್​ದ 22ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಅಮೃತ ಮಹೋತ್ಸವ ಅಂದರೆ ಜನರ ಚಳವಳಿಯನ್ನಾಗಿ ಆಚರಿಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ರಾಷ್ಟ್ರೀಯ ಅನುಷ್ಠಾನ ಸಮಿತಿ ನಿರ್ವಹಣೆ ಮಾಡಲಿದೆ.

- Advertisement -
- Advertisement -

Latest News

ಗ್ರಾಮೀಣ ಭಾಗದಲ್ಲಿ ಎಂಇಎಸ್ ಕಾಲೇಜಿನ ಶೈಕ್ಷಣಿಕ ಕಾರ್ಯ ಶ್ಲಾಘನೀಯವಾಗಿದೆ –

ಮಿಜರೋರಾಂ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರೊ. ಕೆ. ವಿದ್ಯಾಸಾಗರ ರಡ್ಡಿ ಅಭಿಪ್ರಾಯ ಮೂಡಲಗಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಲ್ಲಿ ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group