ಹಣಮಾಪುರ: ಪ್ರವಾಹ ಪೀಡಿತ ಪ್ರದೇಶ ಘೋಷಿಸಲು ಒತ್ತಾಯ

Must Read

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಸಮೀಪ ಹರಿಯುವ ಇಂದ್ರವೇಣಿ ಹಳ್ಳಕ್ಕೆ ಸತತ ಮಳೆಯಿಂದ ಮೇಲಿಂದ ಮೇಲೆ ಪ್ರವಾಹ ಬರುತ್ತಿದ್ದು, ಹಳ್ಳದ ಪಕ್ಕದಲ್ಲಿರುವ ವಾರ್ಡ್ 12ರ ಹಣಮಾಪೂರ ಪ್ರದೇಶವು ಪ್ರವಾಹ ಪೀಡಿತವಾಗಿ ಸಾಕಷ್ಟು ನಷ್ಟವಾಗುತ್ತಲಿದೆ. ಹಣಮಾಪೂರ ಪ್ರದೇಶವನ್ನು ಪ್ರವಾಹ ಪೀಡಿತ ಪ್ರದೇಶವೆಂದು ಪರಿಗಣಿಸಿ ಪರಿಹಾರ ಘೋಷಿಸಬೇಕು ಎಂದು ಅಲ್ಲಿಯ ಸಾರ್ವಜನಿಕರು ಮೂಡಲಗಿ ತಹಶೀಲ್ದಾರ್ ಅವರಿಗೆ ಸೋಮವಾರ ಮನವಿ ನೀಡಿ ಆಗ್ರಹಿಸಿದ್ದಾರೆ.

ಪ್ರತಿ ವರ್ಷವೂ ಅನಾವೃಷ್ಟಿಯಿಂದ ಇಂದ್ರವೇಣಿ ಹಳ್ಳಕ್ಕೆ ನೆರೆ ಬಂದು ಬೆಳೆಗಳಿಗೆ ಮತ್ತು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗುತ್ತಲಿದೆ. ಕಲ್ಲೋಳಿಯ ವಾರ್ಡ್ ನಂ. 12ರ ಪ್ರದೇಶವಾದ ಹಣಮಾಪೂರ ಪ್ರದೇಶವನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಮತ್ತು ಜನರಿಗೆ ಆಗಿರುವ ಹಾನಿಗೆ ಪರಿಹಾರ ಘೋಷಿಸಬೇಕು ಎಂದು ಅಶೋಕ ಆಡಿನವರ ಜಿಲ್ಲಾಧಿಕಾರಿಗಳಲ್ಲಿ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು.

ಈರಣ್ಣ ಕುಂಬಾರ, ಪವಾಡಿ ಕುಂಬಾರ, ಶಾನೂರ ಕುಂಬಾರ, ಈರಣ್ಣ ನಂದಗಾಂವಿ, ರಾಘು ಆಡಿನವರ, ಅಶೋಕ ಆಡಿನವರ, ಶಿವಾನಂದ ಆಡಿನವರ, ಮಲ್ಲಪ್ಪ ಕಟ್ಟಿ, ಹಣಮಂತ ದಾಸನ್ನವರ ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group