ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

Must Read

ಮೂಡಲಗಿ – ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ದಿ. ೩೦ ರಂದು ಪುರಸಭೆಯ ಎದುರಿಗೆ ಇರುವ ಕಟ್ಟಡದ ಮೂರನೇ ಮಹಡಿಯಲ್ಲಿ ಜರುಗಲಿದೆ.

ಸಮಾರಂಭದ ಸಾನ್ನಿಧ್ಯವನ್ನು ದತ್ತಾತ್ರಯ ಶ್ರೀಪಾದ ಬೋಧ ಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ, ಕಿತ್ತೂರ ರಾಣಿ ಚನ್ನಮ್ಮಾ ಬ್ಯಾಂಕಿನ ಸಂಸ್ಥಾಪಕ ಡಾ.ವಿಶ್ವನಾಥ ಸಾಧುನವರ ಆಗಮಿಸಲಿದ್ದಾರೆ.

ಹಾಗೆಯೇ ಅತಿಥಿಗಳಾಗಿ ತಹಶೀಲ್ದಾರ ಡಿ ಜೆ ಮಹಾತ್, ಬಿಇಒ ಅಜಿತ್ ಮನ್ನಿಕೇರಿ, ಇಒ ಸಂದೀಪ ಚೌಗಲಾ, ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೂಡ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಹೆಸ್ಕಾಮ್ ಅಧಿಕಾರಿ ಎಮ್ ಎಸ್ ನಾಗನ್ನವರ, ಪಿಎಸ್ ಐ ಎಚ್ ವೈ ಬಾಲದಂಡಿ, ಕುಲಗೋಡ ಪಿಎಸ್ ಐ ಹಣಮಂತ ನಿರಳೆ, ಸಾಹಿತಿ ಸಂಗಮೇಶ ಗುಜಗೊಂಡ ಹಾಗೂ ಪತ್ರಕರ್ತರಾದ ಬಾಲಶೇಖರ ಬಂದಿ, ಎಲ್ ವಾಯ್ ಅಡಿಹುಡಿ, ಶಿವಾನಂದ ಮುಧೋಳ ಹಾಗೂ ಅಕಬರ ಪೀರಜಾದೆ ಆಗಮಿಸಲಿದ್ದಾರೆ.

ಸಹೃದಯ ಪತ್ರಕರ್ತರು, ಸಾಹಿತಿಗಳು, ಓದುಗರು ಸಮಾರಂಭಕ್ಕೆ ಆಗಮಿಸಬೇಕೆಂದು ಸಂಘದ ಕಾರ್ಯದರ್ಶಿ ಮಲ್ಲು ಬೋಳನವರ ಹಾಗೂ ಸಂಘದ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group