ಶಾಲಾ ಆವರಣದಲ್ಲಿ ಗಿಡ ಮರ ನೆಡುವುದು ತುಂಬಾ ಅವಶ್ಯಕ – ದಬಾಡಿ

Must Read

ಮೂಡಲಗಿ: ಸರಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ, ಶಾಲಾ ಆವರಣ, ದೈವತ್ವವಿರುವ ಕ್ಷೇತ್ರಗಳು, ಪರಿಸರದಲ್ಲಿ ಗಿಡ ಮರ ಹಾಗೂ ಸಸ್ಯಗಳನ್ನು ನೆಟ್ಟು ಪೋಷಿಸುವದು ಅತ್ಯವಶ್ಯಕವಾಗಿದೆ ಎಂದು ಮೂಡಲಗಿ ಸಮೂಹ ಸಂಪನ್ಮೂಲ ವ್ಯಕ್ತಿ ಸಮೀರಅಹ್ಮದ ದಬಾಡಿ ಹೇಳಿದರು.

ಅವರು ಪಟ್ಟಣದ ಸಮೂಹ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಕೊರೋನಾ ಹಾಗೂ ಆಕಾಲಿಕ ಮಳೆಯಿಂದಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಕುಂಠಿತವಾಗುತ್ತಿದೆ. ಬಿಡುವಿನ ಸಮಯದಲ್ಲಿ ಕಚೇರಿ ಸೌಂದರ್ಯ ಹಾಗೂ ಕಚೇರಿಯ ಮುಂದೆ ಸುಂದರವಾಗಿ ಕಾಣಲು ಅಲ್ಪ ಸ್ವಲ್ಪ ಕಾರ್ಯಚಟುವಟಿಕೆ ಮಾಡಲಾಗಿದೆ. ಬೇಗನೆ ಶೈಕ್ಷಣಿಕ ಕಾರ್ಯಗಳು ಪ್ರಾರಂಭವಾಗುವದಿದೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಡ್ವಿನ್ ಪರಸಣ್ಣವರ, ಮೂಡಲಗಿ ಸಮೂಹದ ಪ್ರಧಾನ ಗುರುಗಳಾದ ಎಸ್.ವಿ ಸೋಮವ್ವಗೋಳ, ಎಮ್.ಮಂಜುನಾಥ, ಎಸ್.ಎಚ್ ಯಡ್ರಾಂವಿ, ಬಿ.ಎಚ್ ಹುಲ್ಯಾಳ, ಎನ್.ಎಮ್ ಬಾಗವಾನ, ಎಸ್.ಬಿ ಕಳ್ಳಿಗುದ್ದಿ, ಎಸ್.ಎಸ್ ಕುಲಕರ್ಣಿ, ಎಸ್.ವ್ಹಿ ಕೋಪರ್ಡೆ ಮತ್ತಿತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group