ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ; ಪಂಚಮಸಾಲಿ ಸಮಾಜದ ಎಚ್ಚರಿಕೆ

Must Read

ಮೂಡಲಗಿ – ಯಡಿಯೂರಪ್ಪ ಅವರು ತಮ್ಮ ಕಾಲಾವಧಿಯಲ್ಲಿ ಪಂಚಮಸಾಲಿ ಜನಾಂಗಕ್ಕೆ ೨ ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಕೆಲವು ರಾಜಕೀಯದಿಂದಾಗಿ ಅಧಿಕಾರ ಕಳೆದುಕೊಂಡರು.

ಈಗ ಬಸವರಾಜ ಬೊಮ್ಮಾಯಿಯವರು ಆರು ತಿಂಗಳಲ್ಲಿ ಮೀಸಲಾತಿ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು.

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ನಾಯಕರ ವಿರುದ್ಧ ಯಡಿಯೂರಪ್ಪ ಕುತಂತ್ರ ನಡೆಸಿ ಅವರಿಗೆ ಸಚಿವ ಸ್ಥಾನ ಸಿಗದಂತೆ ನೋಡಿಕೊಂಡರು ಅದಕ್ಕಾಗಿ ಯಡಿಯೂರಪ್ಪನವರಿಗೆ ಧಿಕ್ಕಾರ ಹೇಳುತ್ತೇವೆ ಎಂದರು.

ಪತ್ರಕರ್ತ ಮಲ್ಲು ಬೋಳನವರ ಮಾತನಾಡಿ, ಬಸವರಾಜ ಪಾಟೀಲ ಯತ್ನಾಳರಂಥ ಪಂಚಮಸಾಲಿ ನಾಯಕರನ್ನು ತುಳಿಯುವ ಕೆಲಸ ಮಾಡಿದ್ದರಿಂದ ಯಡಿಯೂರಪ್ಪ ನವರ ಅಧಿಕಾರ ಹೋಗಿದೆ. ಈಗ ಬೊಮ್ಮಾಯಿಯವರು ನಮ್ಮ ಸಮಾಜದ ಮಕ್ಕಳಿಗೆ ೨ಎ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಮತ್ತೆ ನಮ್ಮ ಶಕ್ತಿ ತೋರಿಸುತ್ತೇವೆ. ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಬಸಪ್ರಭು ನಿಡಗುಂದಿ, ವಿರುಪಾಕ್ಷ ಮುಗಳಖೋಡ, ಮಹಾದೇವ ಗೋಕಾಕ, ಪರಶುರಾಮ ಗೋಕಾಕ, ರುದ್ರಪ್ಪಾ ಬಳಿಗಾರ, ಗುರುಲಿಂಗಪ್ಪ ಗೋಕಾಕ, ಬಸವರಾಜ ಕುರುಬಗಟ್ಟಿ, ಚಿನ್ನಪ್ಪಾ ಬಳಿಗಾರ, ರವಿ ಮಹಾಲಿಂಗಪೂರ ಇದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group