ನವ ಭಾರತ ಕಟ್ಟೋಣ.ಹೊಸ ಪ್ರಗತಿಗೆ ನಾಂದಿ ಹಾಡೋಣ – ಆನಂದ ಮಾಮನಿ

Must Read

ಸವದತ್ತಿ – “ಸ್ವಾತಂತ್ರ್ಯ ಎಂದ ಕೂಡಲೇ ನೆನಪಾಗುವ ಶಬ್ಧಗಳೆಂದರೆ ಹೋರಾಟ, ಪ್ರಾಣಾಹುತಿ, ತ್ಯಾಗ, ಹಾಗೂ ಬಲಿದಾನ. ಇಲ್ಲಿ ಎಲ್ಲ ವಿಧದಲ್ಲೂ ಹೋರಾಟದ ಹಾದಿ ಸಾಗಿ ಬಂದಿದೆ. ಪ್ರತಿಯೊಬ್ಬ ಮಹನೀಯರು ಗೌರವಕ್ಕೆ ಪಾತ್ರರು. ಈ ಮಣ್ಣಿನ ಸಂಸ್ಕೃತಿಯ.

ಈ ನೆಲದ ಆಚಾರ ವಿಚಾರಗಳಿಗೆ ಅನುಗುಣವಾಗಿ ಹೋರಾಡಿದ ಎಲ್ಲರನ್ನೂ ನೆನೆಯುವ ಜೊತೆಗೆ 75 ನೇ ವರ್ಷದ ಅಮೃತಮಹೋತ್ಸವ ದೇಶಕ್ಕೆ ಹೊಸ ಕಳೆಯನ್ನು ನೀಡುವತ್ತ ಗಮನ ಹರಿಸಬೇಕು. ನವ ಭಾರತ ಕಟ್ಟೋಣ ಹೊಸ ಪ್ರಗತಿಗೆ ನಾವೆಲ್ಲ ನಾಂದಿ ಹಾಡೋಣ.ಭಾರತ ಪ್ರಗತಿ ಪಥದತ್ತ ಸಾಗುತ್ತಿದೆ.

ಕೋರೋನಾ ಸಂಕಷ್ಟದ ಈ ಕಾಲದಲ್ಲಿ ಶಿಕ್ಷಣ ಇಲಾಖೆಯ ಎಲ್ಲ ಶಿಕ್ಷಕ ಶಿಕ್ಷಕಿಯರು ತಂತ್ರಜ್ಞಾನ ಬಳಸಿಕೊಂಡು ಬೋಧನೆಯತ್ತ ತೊಡಗಿರುವರು.ಮುಂಬರುವ ದಿನಗಳಲ್ಲಿ ಮುಖಾಮುಖಿ ತರಗತಿಗಳು ಆರಂಭಗೊಂಡು ಶೈಕ್ಷಣಿಕ ಚಟುವಟಿಕೆಗಳು ಸಾಗಲಿ ಎನ್ನುವ ಆಶಾವಾದ ಹೊಂದೋಣ” ಎಂದು ವಿಧಾನ ಸಭಾ ಉಪಸಭಾಪತಿ ಮತ್ತು ಶಾಸಕ ಆನಂದ ಮಾಮನಿ ಕರೆ ನೀಡಿದರು.

ಅವರು ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ. ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ ಬಿ.ಐ.ಇ.ಆರ್.ಟಿ.ಗಳಾದ ಎಸ್.ಬಿ.ಬೆಟ್ಟದ.ವೈ.ಬಿ.ಕಡಕೋಳ.ಎಂ.ಎಂ.ಸಂಗಮ.ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ.ಡಾಟಾ ಎಂಟ್ರಿ ಆಪರೇಟರ್ ಮಲ್ಲಿಕಾರ್ಜುನ ಹೂಲಿ. ಪ್ರಧಾನ ಗುರುಗಳಾದ ಎಂ.ಬಿ.ಕಮ್ಮಾರ. ಶಿಕ್ಷಕರಾದ ಎಸ್.ಎಚ್.ಕರಿಗಾರ, ಎಮ್.ಜಿ.ದೊಡಮನಿ, ಪಿ.ಎಸ್.ಶಿಂಧೆ, ಆರ್.ಬಿ.ಐಹೊಳೆ, ಎಮ್.ಎಮ್.ಮಾಟೊಳ್ಳಿ.ಬಿ.ಎಸ್.

ದೊಡ್ಡಕಲ್ಲಣ್ಣವರ ಗುರುಮಾತೆಯರಾದ ಜೆ.ಸಿ.ಗುಂಡಾರ, ಜಿ.ಕೆ.ಕೆಂಪಯ್ಯನವರ, ಬಿ.ಕೆ.ಸಂತಿ, ಎಸ್.ಎಸ್.ಮಿರ್ಜಿ, ವಿ.ಆರ್.ಗೊರಗುದ್ದಿ, ಎನ್.ಆರ್.ಜಂಬೂನವರ ಗಣೈರಾದ ಬಸವರಾಜ ಶಿಂತ್ರಿ.ಮಾಧ್ಯಮ ಪ್ರತಿನಿಧಿಗಳಾದ ಗಿರೀಶ ರೇವಡಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಎಂ.ಬಿ.ಕಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಸ್.ಶಿಂಧೆ ಸ್ವಾಗತಿಸಿದರು. ಎಸ್.ಎಚ್.ಕರಿಗಾರ ನಿರೂಪಿಸಿದರು.ಎಮ್.ಜಿ.ದೊಡಮನಿ ವಂದಿಸಿದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group