ನವ ಭಾರತ ನಿರ್ಮಾಣದ ಕನಸಿಗೆ ಸ್ಫೂರ್ತಿ ಇಂದಿನ ಭಾರತ – ಈರಣ್ಣ ಕಡಾಡಿ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಮೂಡಲಗಿ: ಇತಿಹಾಸವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ, ಸ್ವಾತಂತ್ರದ ಅಮೃತ ಮಹೋತ್ಸವದ ಅಮೃತಗಳಿಗೆಯ ಹೊಸ್ತಿಲಲ್ಲಿ ನಿಂತಿರುವ ದೇಶವಾಸಿಗಳು ಮಾಡಬೇಕಾದ ಯೋಚನೆ, ಯೋಜನೆಯ ಜೊತೆಗೆ ಅನ್ಯ ದೇಶಗಳು ಭಾರತವನ್ನು ನೋಡುತ್ತಿರುವ ಸ್ವರೂಪದ ಬಗ್ಗೆಯೂ ನಾವು ಹೇಳಬೇಕಿದೆ. ಹಿಂದಿನ ಸಿಹಿ-ಕಹಿ, ಸರಿ-ತಪ್ಪುಗಳನ್ನು ಮೆಲಕು ಹಾಕುತ್ತಾ, ಮುಂದೆ ಆಗಬೇಕಿರುವ ಪ್ರಸ್ತುತ ನವ ಭಾರತ ನಿರ್ಮಾಣದ ಕನಸು ಹೊತ್ತ ಕಂಗಳಿಗೆ ಸ್ಪೂರ್ತಿಯ ಜೊತೆಗೆ ಒಂದು ಆಶಾವಾದವೂ ಮೂಡಿದೆ ಎಂದು ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ರವಿವಾರ ಆ. 15 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಇದರ ಆಡಳಿತ ಮಂಡಳಿ ಕಛೇರಿ ಮೇಲೆ 75ನೇ ಸ್ವಾತಂತ್ರೋತ್ಸದ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು ನವಭಾರತದ ಪರಿಕಲ್ಪನೆಯ ಕನಸನ್ನು ಹೊತ್ತು ಮುನ್ನಡೆದಿರುವ ದೇಶದ ಈಗಿನ ಸಮರ್ಥ ನಾಯಕತ್ವವು ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಚೀನಾ, ಪಾಕಿಸ್ತಾನದ ವೈರತ್ವವನ್ನೇ ಸೇತುವಾಗಿಸಿಕೊಂಡು ಇಂದು ಕಮ್ಯೂನಿಷ್ಟ್ ರಾಷ್ಟ್ರಕ್ಕೆ ತಕ್ಕ ಉತ್ತರ ನೀಡುತ್ತಿದೆ. ನಮ್ಮ ಯೋಧರಿಗೆ ಬುಲೇಟ್ ಪ್ರೋಪ್ ಜಾಕೆಟ್ ಕೂಡ ಇಲ್ಲದ ಆ ಕಷ್ಟದ ಸಮಯವನ್ನು ದಾಟಿ ಬಂದಾಗಿದೆ. ಸೈನಿಕರು ಗಡಿ ಕಾಯುತ್ತಾರೆ, ಆಡಳಿತ ನಡೆಸುವರು ಗಾಜಿನ ಮನೆಯಲ್ಲಿ ಕುಳಿತಿರ್ತಾರೆ ಎನ್ನುವ ಮಾತು ಇದೀಗ ಸುಳ್ಳಾಗಿದೆ. ಸ್ವತಃ ಪ್ರಧಾನಿಗಳೇ ಈಗ ಯೋಧರ ಬಳಿ ತೆರಳಿ ದೀಪಾವಳಿ ಆಚರಿಸುವ ಭಾವನಾತ್ಮಕ ಕ್ಷಣಗಳನ್ನು ಕಣ್ತುಂಬಿಕೊಂಡಾಗಿದೆ ಎಂದರು

- Advertisement -

ಸಹಕಾರಿಯ ಉಪಾಧ್ಯಕ್ಷ ರಾಜಪ್ಪ ಗೋಸಬಾಳ ನಿರ್ದೇಶಕರಾದ ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ ಸಿದ್ದಪ್ಪ ಹೆಬ್ಬಾಳ, ಸಹದೇವ ಹೆಬ್ಬಾಳ, ಬಾಳಪ್ಪ ಸಂಗಟಿ, ಮಾರುತಿ ಮಕ್ಕಳಗೇರಿ, ಪ್ರಮುಖರಾದ ಅಡಿವೇಪ್ಪ ಕುರಬೇಟ, ಶಂಕರ ಗೋರೋಶಿ, ತುಕಾರಾಮ ಪಾಲ್ಕಿ, ಗುರುನಾಥ ಮದಬಾಂವಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಗೋಪಾಲ ಜಾಲರ, ಬಸವರಾಜ ದಾಸನಾಳ, ಮಲ್ಲಪ್ಪ ಹೆಬ್ಬಾಳ, ಪ್ರ.ವ್ಯವಸ್ಥಾಪಕರಾದ ಹಣಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕರು ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜಿನಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!