ಕವನ: ಸ್ವಾತಂತ್ರ್ಯ

Must Read

ಸ್ವಾತಂತ್ರ್ಯ

ಯಾರಿಗಿದೆ?ಎಲ್ಲಿದೆ? ಸ್ವಾತಂತ್ರ್ಯ
ಇರುವುದೆಲ್ಲವೂ ನಮಗೆ ಪಾರತಂತ್ರ್ಯ
ಬದುಕು ಕಟ್ಟಬೇಕು ನಾವು ನಮ್ಮಗಳ
ಮೇಲೆ ಸ್ವಾತಂತ್ರ್ಯದ ವಿಜಯದ ಮೇಲೆ

ಸ್ವಾತಂತ್ರ್ಯವಿರುವುದು ಪೋಲಿಸರ
ಗುಂಡು ಲಾಠಿಗಳಲಿ ವಂಚಕರ ಕೈಗಳಲಿ
ಬಡವನ ಕಣ್ಣೀರು ಒರೆಸದ ಸಾಲದ
ಶೂಲದಲಿ ಹರಿದ ತಿನ್ನುವ ಮೃಗಗಳಲಿ

ರೈತನ ಶರಣಾಗತಿಯ ನೇಣು ಹಗ್ಗದಲಿ
ಬಿಗಿದ ಕುತ್ತಿಗೆಯಲಿ ಸ್ವಾತಂತ್ರ್ಯ ಬಂತು
ನಿತ್ಯ ನಿರಂತರ ಗುಂಡಿಗೆ ಎದೆಯೊಡ್ಡುವ
ವೀರ ಯೋಧರ ಕಫನಿನಲಿ ಬಂತು ಸ್ವಾತಂತ್ರ್ಯ

ತುಂಡುಡುಗೆಯನುಟ್ಟು ಕಂಡ ಕಂಡವರ
ದಾಹಕ್ಕೆ ಆಸರೆಯಾಗಿ ನೀರೆರೆಯುವ
ರಕ್ತ ದೇಹಿಗಳ ಕಾಮುಕರ ಕಣ್ಣಲ್ಲಿ
ಬಂತು ವಿಕೃತ ಮನದ ಸ್ವಾತಂತ್ರ್ಯ

ಹಿಡಿಯುಂಡು ಖಂಡುಗ ಕೊಟ್ಟವರು
ಗೋರಿಯಾದರು ಖಂಡುಗವನುಂಡು
ಹಿಡಿಕೊಟ್ಟವರು ದಾನಿಗಳಾದರು
ಎಲ್ಲಿಗೆ ಬಂತು ಈ ಸ್ವಾತಂತ್ರ್ಯ

ಬದುಕಿನ ಆಶಾ ಗೋಪುರ ಕಳಚಿ
ಬೀಳುವ ಮುನ್ನ ನನ್ನೆದೆಯಾಳದಲಿ
ಬಿಕ್ಕಿ ಬಿಕ್ಕಿ ಅತ್ತ ಕಣ್ಣೀರು ಕೋಡಿಯಾಗಿ
ಹರಿದು ಹೃದಯ ಸಾಗರ ಸೇರಿತು

ಯಾರಿಗೆ ಬೇಕಿತ್ತು ಈ ಸ್ವಾತಂತ್ರ್ಯ
ಕಿತ್ತು ತಿನ್ನುವ ರಣಹದ್ದುಗಳೇ
ಮತ್ತೆ ಬರುವೆವು ನಾವು ನಮ್ಮ
ನವ ಬದುಕ ಕಟ್ಟಿಕೊಂಡು
ನವ ಕನಸು ಕಟ್ಟಿಕೊಂಡು

ಶ್ರೀ ಇಂಗಳಗಿ ದಾವಲಮಲೀಕ

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group