ಮಕ್ಕಳಿಗೆ ದೇಶಸೇವೆ, ಪೋಷಕರ ಸೇವೆ ಕಲಿಸುವ ಅಗತ್ಯವಿದೆ

Must Read

ವಿಶ್ವಕ್ಕೆ ಮಾತೆಯಂತಿರುವ ನಮ್ಮ ಭಾರತ ಎಲ್ಲರಿಗೂ ಆಶ್ರಯಕೊಡಲು ಮುಂದಾಗುತ್ತದೆ. ಆದರೆ ನಮ್ಮಲ್ಲೇ ಇರುವ ಮಕ್ಕಳಿಂದ ಆಶ್ರಯ ಪಡೆಯಲಾಗದೆ ಆಶ್ರಮ ಸೇರುವ ಸ್ಥಿತಿಗೆ ಬಂದಿರುವವರೊಮ್ಮೆ ಯೋಚಿಸಿದರೆ ನಾವು ನಮ್ಮ ಮಕ್ಕಳಿಗಾಗಿ ಎಷ್ಟೋ ಸೇವೆ ಮಾಡಿದ್ದರೂ ಮಕ್ಕಳು ಯಾಕೆ ದೇಶಸೇವೆಗೆ ನಿಲ್ಲಲಿಲ್ಲ?

ಕೊನೆಪಕ್ಷ ಪೋಷಕರ ಸೇವೆಗಾದರೂ ನಿಂತರೆ ಉತ್ತಮ. ಯಾವುದೂ ಅತಿ ಆಗಬಾರದೆನ್ನುವುದು ಸತ್ಯ. ನಾವು ದೇಶದ ಒಳಗಿದ್ದು ವಿದೇಶಿಗಳನ್ನೂ ಕರೆತಂದು ಅವರ ವ್ಯವಹಾರ, ಶಿಕ್ಷಣ,ಬಂಡವಾಳದಿಂದ ಮಕ್ಕಳನ್ನು ಬೆಳೆಸಿ ಆಸ್ತಿ ಮಾಡಿದರೆ ಅದನ್ನು ಅನುಭವಿಸಲು ಮಕ್ಕಳೇ ಕೊನೆಗಾಲದಲ್ಲಿ ಇಲ್ಲದೆ ವಿದೇಶಗಳಿಗೆ ವಲಸೆ ಹೋಗಿ ನೆಲೆಸಿರೋದರ ಹಿಂದೆ ಆಧ್ಯಾತ್ಮ ಕಾರಣ ತಿಳಿದಾಗಲೇ ಕರ್ಮಕ್ಕೆ ತಕ್ಕಂತೆ ಪ್ರತಿಫಲ ಎನ್ನಬಹುದು.

ಎಲ್ಲರಿಗೂ ಈ ಸ್ಥಿತಿ ಬರೋದಿಲ್ಲ.ಬಂದಿಲ್ಲ ಕಾರಣವಿಷ್ಟೆ ನಮ್ಮ ಮಕ್ಕಳಿಗೆ ದೇಶಭಕ್ತಿಯನ್ನು ಬೆಳೆಸಿರೋದು. ಶಿಕ್ಷಣ ವಿದೇಶದ್ದಾದರೂ ಸಂಸ್ಕಾರ, ಸಂಸ್ಕೃತಿ, ಭಾಷೆಯ ಬಗ್ಗೆ ಪೋಷಕರಲ್ಲಿದ್ದ ವಿಶ್ವಾಸ,ಜ್ಞಾನಶಕ್ತಿಯ ಪ್ರಭಾವದಿಂದ ಮಕ್ಕಳು ಅಷ್ಟು ಬೇಗ ದೂರ ಹೋಗುವುದು ಕಷ್ಟ. ಕೆಲವರು ಸಾಕಷ್ಟು ಸಾಲ ಮಾಡಿ ಶಿಕ್ಷಣ ನೀಡುತ್ತಾರೆ.

ಅದನ್ನು ತೀರಿಸಲು ದೊಡ್ಡ ಹುದ್ದೆಯ ಅಗತ್ಯವಿರುತ್ತದೆ ಭಾರತದಲ್ಲಿ ಬುದ್ದಿವಂತರಿಗೆ ಉತ್ತಮ ಕೆಲಸ ಕಾರ್ಯ ಸಿಗದ ಕಾರಣ ವಿದೇಶಿಗಳಲ್ಲಿ ಅವರನ್ನು ಗುರುತಿಸಿ ಕರೆಸಿಕೊಂಡು ತಮ್ಮ ಕೆಲಸ ಮಾಡಿಸಿಕೊಂಡು ದೇಶದ ಪ್ರಗತಿ ಕಾಣುತ್ತಾರೆ. ಈ ಕಡೆ ಸಾಲ ತೀರಿಸಲು ಬೇರೆ ದಾರಿ ಕಾಣದೆ ಪೋಷಕರೆ ಅವರನ್ನು ವಿದೇಶಕ್ಕೆ ಕಳಿಸುತ್ತಾರೆ.

ಆದರೆ, ಕೆಲವರಿಗೆ ಇದೊಂದು ಶೋಕಿಯಾಗಿದೆ. ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ಲಕ್ಷಾಂತರ ರೂ. ಕೊಟ್ಟು ವಿದೇಶದಲ್ಲಿ ವಿದ್ಯಾಭ್ಯಾಸ ಕೊಡಲು ಕಳಿಸಿ ಕೊನೆಯಲ್ಲಿ ತಿರುಗಿ ಬರದ ಮಕ್ಕಳನ್ನು ಬಿಟ್ಟು ಸಮಾಜ ಸೇವೆ ಹೆಸರಲ್ಲಿ ದೇಶದಲ್ಲಿ ದೊಡ್ಡ ವ್ಯಕ್ತಿಗಳಾದವರಿದ್ದಾರೆ ಸೇವೆಯ ಹಣವೇ ವಿದೇಶದದ್ದಾದರೆ ದೇಶ ಉದ್ದಾರ ಆಗುವುದೆ? ಹಣ, ಅಧಿಕಾರ, ಸ್ಥಾನಮಾನಕ್ಕಾಗಿ ತಮ್ಮ ಮೂಲವನ್ನು ಮರೆತು ಎಷ್ಟೋ ಮಂದಿ ವಿದೇಶದೆಡೆಗೆ ಹೋಗಿ ಅಲ್ಲಿ ತಮ್ಮ ದೇಶ ಭಾರತವೆನ್ನುವ ಸ್ವಾತಂತ್ರ್ಯವಿಲ್ಲದಿದ್ದರೂ ಇಲ್ಲಿನ ಜನ ಅವರನ್ನು ನಮ್ಮವರಿಗಿಂತ ಮೇಲಿನ ಗೌರವ ಕೊಟ್ಟರೆ ಎಲ್ಲಾ ಅದೇ ದಾರಿ ಹಿಡಿಯುತ್ತಾರೆ.

ಹೀಗಾಗಿ ದೇಶದೊಳಗೆ ಉಳಿಯುವವರು ಹಿಂದುಳಿದವರು, ಬಡವರು, ದೀನದಲಿತರು, ವಿದೇಶಿಗಳು ಆಳೋದಕ್ಕೆ ಅಧಿಕಾರ,ಹಣವಿರಬೇಕೆನ್ನುವ ಕಾರಣಕ್ಕೆ ವಿದೇಶಿಗಳ ಸಹಕಾರ,ಹಣ,ಬಂಡವಾಳ, ವ್ಯವಹಾರಕ್ಕೆ ದೇಶ ಬಳಸಿಕೊಂಡು ಜನರನ್ನು ಆಳಿದವರಲ್ಲಿ ದೇಶಭಕ್ತಿ ಯಾವ ರೂಪದಲ್ಲಿರುತ್ತದೆ?

ದೇಶ ಸ್ವಾತಂತ್ರ್ಯ ಪಡೆದು 75ವರ್ಷಗಳಾಯಿತು. ಆದರೆ ಪ್ರಜೆಗಳಿಗೆ ಯಾವ ರೀತಿಯಲ್ಲಿ ನಾವು ಸ್ವತಂತ್ರ ಜೀವನ ನಡೆಸುತ್ತಿದ್ದೇವೆನ್ನುವುದರ ಬಗ್ಗೆ ಆಧ್ಯಾತ್ಮ ಚಿಂತನೆ ನಡೆಸಲಾಗದೆ ಭೌತಿಕಾಸಕ್ತಿ ಹೆಚ್ಚಿಸಿಕೊಂಡು ಸಾಲದಲ್ಲಿ ಮುಳುಗುತ್ತಾ,ವಿದೇಶಿ ವಿಜ್ಞಾನದ ಕಡೆಗೆ ಮನಸ್ಸು ಮಾಡಿ ಒಳಗಿದ್ದ ಸತ್ಯ ಧರ್ಮದಿಂದ ದೂರವಾಗುತ್ತಾ ಕೊನೆಗೆ ಪೋಷಕರನ್ನೂ ಬಿಟ್ಟು ಹೋದರೆ ಇದೊಂದು ಸಾಧನೆ.

ಕೆಲವರಷ್ಟೇ ಕಷ್ಟಪಟ್ಟು ದೇಶ ಸೇವೆಗಾಗಿ ದುಡಿದಿದ್ದಾರೆ.ಅದರಲ್ಲಿ ಮುಖ್ಯವಾಗಿ ಸೈನಿಕರು. ಇವರಿಗೆ ದೇಶದೊಳಗೇ ನುಸುಳಿರುವ ಭ್ರಷ್ಟರನ್ನು ತಡೆಯೋ ಅಧಿಕಾರ ಇಲ್ಲದೆ. ಹೊರಗಿನಿಂದ ಬರುವ ಶತ್ರುಗಳಿಗೆ ತಮ್ಮ ಜೀವ ಕೊಟ್ಟು ದೇಶರಕ್ಷಣೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ವೀರರಿಗೂ ಇಂದಿನ ಪ್ರಜಾಪ್ರಭುತ್ವದ ಪ್ರಜೆಗೂ ಹೋಲಿಸಲಾಗದು. ಆದರೂ ದೇಶದೊಳಗೆ ಶಾಂತಿಯನ್ನು ಕಾಪಾಡುವಲ್ಲಿ ಸರ್ಕಾರ ತನ್ನ ಕೆಲಸ ಮಾಡುತ್ತಿದೆ.

ಇದನ್ನು ವಿರೋಧಿಸಿ ಕ್ರಾಂತಿಯ ದಾರಿ ಹಿಡಿಯುತ್ತಿರುವವರು ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂದು ಪ್ರಶ್ನೆ ಹಾಕಿಕೊಂಡು ಹಿಂದೆ ತಿರುಗಿ ನೋಡಿದರೆ ಉತ್ತಮ ಇದಕ್ಕೆ ಮಾಧ್ಯಮ,ಮಧ್ಯವರ್ತಿಗಳು  ಬಿಡೋದಿಲ್ಲ. ಹೀಗಾಗಿ ನಿಜವಾದ ಕ್ರಾಂತಿಕಾರರಿಗೆ ಸಹಕರಿಸುತ್ತಿರುವವರು ಯಾರು? ಭಾರತೀಯರೆ? ವಿದೇಶಿಗಳೆ? ಮಧ್ಯವರ್ತಿಗಳೆ? ನಾವ್ಯಾರು?


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group