spot_img
spot_img

ದೇವರು ಕಷ್ಟ ಕೊಟ್ಟು ನೆನಪಿಸುತ್ತಾನೆ….

Must Read

spot_img
- Advertisement -

ಸಂಕಟಬಂದಾಗ ವೆಂಕಟರಮಣ ಎನ್ನುತ್ತಾರೆ. ದೇವರು ಕಷ್ಟಕೊಟ್ಟು ನೆನಪಿಸುತ್ತಾನೆ. ಅಸುರರು ಸುಖ ತೋರಿಸಿ ಮರೆಯುತ್ತಾರೆ. ಅಂದರೆ ಸುಖದಲ್ಲಿದ್ದಾಗ ಜನರು ಹತ್ತಿರವಾಗುತ್ತಾರೆ.ದು:ಖದ ಸಮಯದಲ್ಲಿ ದೂರ ನಿಂತು ನೋಡುತ್ತಾರೆ. ಹೀಗಾಗಿ ಜಗತ್ತಿನಲ್ಲಿ ಹೆಚ್ಚು ಸುಖಕ್ಕಾಗಿ ಮೈಮರೆತಾಗಲೆ ದೊಡ್ಡ ಸಮಸ್ಯೆಗಳು ಎದುರಾಗೋದು. ಭಾರತದ ಪರಿಸ್ಥಿತಿಯನ್ನು ಅವಲೋಕಿಸಿದರೆ ಯಾವಾಗ ದೇಶದಲ್ಲಿ ಸಾಲ,ಬಡತನ ಹೆಚ್ಚುವುದೋ ಆಗ ಶ್ರೀಮಂತ ಜನರು ಜನರನ್ನು ಆಳಲು ಹೊರಡುತ್ತಾರೆ.

ಅವರ ಶ್ರೀಮಂತಿಕೆಯು ಬಡವರದ್ದೇ ಪಾಲಾಗಿರುವುದು ಸತ್ಯ ಆಗಿದ್ದರೂ ಅದು ಕಣ್ಣಿಗೆ ಕಾಣೋದಿಲ್ಲ. ಹೀಗಾಗಿ ಬಡವರ ಪಾಲಿಗೆ ಶ್ರೀಮಂತ ಜನರು ದೇವರಂತೆ ಕಾಣೋದು. ಕಷ್ಟಕಾಲದಲ್ಲಿ ದೇವರನ್ನು ಮೊರೆ ಹೋದಾಗ ದೇವರು ಅವರ ಪಾಲನ್ನು ಯಾರು ಇಟ್ಟುಕೊಂಡಿರುವರೋ ಅವರನ್ನು ಅವರ ಬಳಿ ಕಳಿಸಿ ಸಹಕರಿಸುತ್ತಾನೆ. ಹೀಗಾಗಿ ಪರಮಾತ್ಮ ಎಲ್ಲರೊಳಗಿದ್ದು ಅವರವರ ಪಾಲನ್ನು ಸರಿಯಾದ ಸಮಯದಲ್ಲಿ ಕೊಟ್ಟು ಸಲಹುತ್ತಾನೆಂದರು.

ಆದರೆ, ಮಾನವ ಮಾತ್ರ ಎಲ್ಲಾ ನಾನೆ ನನ್ನಿಂದಲೆ,ನನಗಾಗಿ ಎಂದು ರಾಜಕೀಯದಿಂದ ಒಬ್ಬರ ತುಳಿದು ಇನ್ನೊಬ್ಬರು ಮುಂದೆ ನಡೆದರೂ, ತುಳಿತಕ್ಕೊಳಗಾದವರು ಎದ್ದು ನಿಂತು ಮುಂದೆ ನಡೆಯೋ ಹೊತ್ತಿಗೆ ಮುಂದೆ ಹೋದವರೆ ಮರೆಯಾಗಿರುತ್ತಾರೆ.ಹೀಗೆ ಇಲ್ಲಿ ಯಾರೂ ಯಾರನ್ನೂ ಆಳೋ ಬದಲಾಗಿ ತಮ್ಮನ್ನು ತಾವು ಆಳಿಕೊಳ್ಳಲು ಬೇಕಾದ ಜ್ಞಾನ ಸಂಪಾದನೆ ಮಾಡಿದರೆ ಅದನ್ನು ಯಾರೂ ಅಪಹರಿಸಲಾಗದು.

- Advertisement -

ಪರಮಾತ್ಮ ಇರೋದು ಜ್ಞಾನದಲ್ಲಿ. ಸತ್ಯ,ಧರ್ಮದಲ್ಲಿ ಹೀಗಾಗಿ ಹಿಂದೆ ಮಹಾತ್ಮರುಗಳು ಅವರ ಧರ್ಮ ಬಿಡದೆ ತಮ್ಮ ಕರ್ಮಕ್ಕೆ ಬೆಲೆಕೊಟ್ಟು ಸತ್ಯದ ದಾರಿ ಹಿಡಿದಿದ್ದರು. ಕಾಲಬದಲಾಗಿದೆ ಸತ್ಯ ತಿಳಿಯದೆ ಅಸತ್ಯದಿಂದ ಮುಂದೆ ನಡೆದವರಿಗೆ ಸಮಸ್ಯೆಗಳಿದ್ದರೂ ಅದನ್ನು ಹಣದಿಂದ ಪರಿಹರಿಸಿಕೊಳ್ಳಲು ಸರ್ಕಾರದ ವಶವಾಗುತ್ತಿದ್ದಾರೆ. ಆದರೆ ಇಲ್ಲಿ ಸರ್ಕಾರವೆ ಪ್ರಜಾಪ್ರಭುತ್ವದ ವಶದಲ್ಲಿರುವಾಗ ಯಾರ ಋಣ ಯಾರಿಗೆ ತೀರಿಸಲು ಸಾಧ್ಯವಿದೆ?ಯಾರೇ ಆಗಿರಲಿ ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂದರೆ ಋಣವಿರಬೇಕಂತೆ, ಅಂದರೆ ಭೂಮಿ ಋಣ ತೀರಿಸಲು ಜೀವ ಎಷ್ಟೋ ಜನ್ಮಗಳನ್ನು ಎತ್ತಿದರೂ ಸಾತ್ವಿಕ ಜ್ಞಾನವಿಲ್ಲವಾದರೆ ಕಷ್ಟ.

ಹೀಗಾಗಿ ಹಿಂದೆ ಎಷ್ಟೋ ತಪಸ್ವಿಗಳು ಆಹಾರ,ನೀರು,ಗಾಳಿಯನ್ನೂ ಸೇವಿಸದೆ ಕಠಿಣ ತಪ್ಪಸ್ಸಿನಿಂದ ಮೋಕ್ಷ ಪಡೆದಿದ್ದರು. ಆತ್ಮಕ್ಕೆ ಮುಕ್ತಿ ಸಿಗಬೇಕಾದರೆ ಭೂಮಿಯ ಋಣ ತೀರಬೇಕು. ಭೂಮಿ ಋಣ ತೀರಿಸಲು ಭೂ ಸೇವೆಯನ್ನು ನಿಸ್ವಾರ್ಥ, ನಿರಹಂಕಾರದಿಂದ ಮಾಡಬೇಕು. ಸ್ವತಂತ್ರ ಜ್ಞಾನ, ಸ್ವಾಭಿಮಾನ, ಸ್ವಾವಲಂಬನೆ ಯ ಜೀವನಕ್ಕೆ ಜ್ಞಾನ ಇರಬೇಕು. ಜ್ಞಾನದಿಂದ ಸತ್ಯ ಬೆಳೆಯಬೇಕು. ಸತ್ಯವೇ ದೇವರಾಗಬೇಕು. ಸತ್ಯದಲ್ಲಿ ನಡೆಯದಿದ್ದರೆ ಪರಮಾತ್ಮನು ಮೆಚ್ಚುವುದಿಲ್ಲ. ಪರಮಾತ್ಮನಿಂದ ದೂರ ಹೋದಂತೆಲ್ಲಾ ಕಷ್ಟ ನಷ್ಟ ಹೆಚ್ಚುತ್ತದೆ.

ಹೀಗಾಗಿ ಸಂಕಟ ಬಂದಾಗಲೇ ವೆಂಕಟರಮಣನ ನೆನಪಾಗೋದು. ದೇವರ ನಾಮ ಹಲವು. ದೇವನೊಬ್ಬನೆ ಹಾಗೆ ದೇಶ ಒಂದೆ ಎನ್ನುವ ಸತ್ಯ ತಿಳಿದವರಿಗಷ್ಟೆ ದೇಶದ ಪರಿಸ್ಥಿತಿಗೆ ಕಾರಣ ಮತ್ತು ಪರಿಹಾರವನ್ನು ಆಧ್ಯಾತ್ಮದ ಪ್ರಕಾರ ತಿಳಿಯಬಹುದು. ಇದನ್ನು ಅರ್ಥ ಮಾಡಿಸುವುದು ಕಷ್ಟ. ಹೀಗಾಗಿ ಸಂಕಷ್ಟಗಳು ಬೆಳೆಯುತ್ತಲೇ ಇರುತ್ತದೆ. ಹಿಂದೆ ತಿರುಗಿ ಬರೋದನ್ನು ಕಲಿಯಬೇಕಷ್ಟೆ.

- Advertisement -

ಒಳಗಿನ ಪರಮಾತ್ಮನ ಮರೆತು ಹೊರಗಿನ ಪರಕೀಯರನ್ನು ಆಶ್ರಯಿಸಿದರೆ ಸಮಸ್ಯೆಗಳಿಗೆ ಪರಿಹಾರ ತಾತ್ಕಾಲಿಕವಾಗಿ ಸಿಕ್ಕರೂ ಶಾಶ್ವತ ದು:ಖ ಜೀವ ಅನುಭವಿಸಲೇ ಬೇಕು.ಮಾನವ ಸಂಘಜೀವಿ. ಈ ಸಂಘಟನೆಯ ಉದ್ದೇಶ ಜೀವನ ನಡೆಸೋದಾಗಬೇಕು. ಜೀವಿಗಳ ವನ  ಜೀವನವಾದರೆ ಎಲ್ಲರಿಗೂ ಜೀವಿಸುವ ಅಧಿಕಾರ ಸ್ವಾತಂತ್ರ್ಯ ವಿದೆ. ಆದರೆ, ಕಾಲಮಾನದ ಬದಲಾವಣೆಯ ಹೊಡೆತಕ್ಕೆ ಸಿಕ್ಕಿದ ಮನುಕುಲದ ಧರ್ಮ ಸಂಕಟಕ್ಕೆ ಪರಿಹಾರ ಧರ್ಮದ ಕಡೆ ನಡೆಯೋದಷ್ಟೆ. ಪ್ರಜಾಧರ್ಮ ದೇಶದ ಪರ ನಿಲ್ಲಲು ಶಿಕ್ಷಣದ ಬದಲಾವಣೆ ಅನಿವಾರ್ಯ.

ಇದನ್ನು ಎಷ್ಟೋ ವರ್ಷಗಳಿಂದಲೂ ಜ್ಞಾನಿಗಳಾದವರು ಹೇಳಿಕೊಂಡು ಬಂದಿದ್ದರೂ ಒಳಗೆಳೆದುಕೊಂಡ ವಿಶೇಷಜ್ಞಾನಕ್ಕೆ ಈ ಸಾಮಾನ್ಯಜ್ಞಾನ ಅರ್ಥ ವಾಗದಿದ್ದರೂ ಈಗಿನ ಪರಿಸ್ಥಿತಿಗೆ ಇದು ಅಗತ್ಯವೆನಿಸುತ್ತಿದೆ.. ದೇವರನ್ನು ಎಷ್ಟು ಬೇಡಿದರೂ ಜ್ಞಾನ ಸಿಗೋದಿಲ್ಲ. ಜ್ಞಾನವನ್ನು ನಾವೇ ಬೆಳೆಸಿಕೊಂಡು ನಡೆಯಲು ದೇವರ ಸಹಕಾರವಿದೆ. ಸಂಕಟಕ್ಕೆ ಆತ್ಮವಂಚನೆಯೂ‌ ಒಂದು ಪ್ರಮುಖ ಕಾರಣ. ನಮ್ಮ ಜ್ಞಾನವನ್ನು ಬಿಟ್ಟು ಪರರ ಹಿಂದೆ ಮಕ್ಕಳು ನಡೆದರೆ ಅನುಭವದಲ್ಲಿ ವ್ಯತ್ಯಾಸವಾಗಿ ಬೇರೆ ಬೇರೆ ಚಿಂತನೆ ನಡೆಸುತ್ತಾ ಬೇರೆ ಬೇರೆ ಆದಾಗ ಒಂದು ಮಾಡಲು ದೇವರಿಗೂ ಕಷ್ಟ.


ಶ್ರೀಮತಿ ಅರುಣ ಉದಯಭಾಸ್ಕರ,ಬೆಂಗಳೂರು

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group