spot_img
spot_img

ತಿಪ್ಪಾನಾಯ್ಕ.ಎಲ್ ಅವರಿಗೆ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Must Read

spot_img
- Advertisement -

ಸವದತ್ತಿ: ತಾಲೂಕಿನ ಜನತಾ ಕಾಲನಿ ಕಗದಾಳ ಶಾಲೆಯ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್. ತಿಪ್ಪಾನಾಯ್ಕ ಅವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಇಂದು ಬೆಳಗಾವಿಯಲ್ಲಿ ನಡೆದ ಜಿಲ್ಲಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ ಡಾ.ಎ.ಬಿ.ಪುಂಡಲೀಕ, ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು ಜಯಕುಮಾರ ಹೆಬಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ, ಶಿಕ್ಷಣಾಧಿಕಾರಿಗಳಾದ ಎನ್.ಆರ್.ಪಾಟೀಲ್, ಪ್ಯಾಟಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲಿ ಶಿಕ್ಷಕರ ಕಲ್ಯಾಣ ನಿಧಿ ಮತ್ರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವತಿಯಿಂದ ನೀಡುವ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಸದರಿ ಶಿಕ್ಷಕ ರು ಕಳೆದ 14 ವರ್ಷಗಳಿಂದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರಾಗಿ ಅತ್ಯಂತ ಕ್ರಿಯಾಶೀಲವಾಗಿ ಬೋಧನೆ ಮಾಡುತ್ತ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ವಿಜ್ಞಾನ ಪ್ರಯೋಗಗಳು, ಪ್ರಾತ್ಯಕ್ಷಿಕೆಗಳು, ಯೋಜನಾಕಾರ್ಯಗಳು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೋಧನೆ ಮಾಡುತ್ತಾ ಮಕ್ಕಳಲ್ಲಿ ಸಂತಸದಾಯಕ ಕಲಿಕೆ ಉಂಟುಮಾಡುತ್ತಿದ್ದಾರೆ. ಸಮುದಾಯದೊಂದಿಗೆ ಅತ್ಯಂತ ವಿಶ್ವಾಸದಿಂದ ವರ್ತಿಸುತ್ತಾ ಶಾಲೆಗಳ ಮತ್ತು ಮಕ್ಕಳ‌ ಬೋಧನೆಗೆ ಅಗತ್ಯವಾದ ಹಲವಾರು ವಸ್ತುಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿರುತ್ತಾರೆ.

- Advertisement -

ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಪಣತೊಟ್ಟಿದ್ದಾರೆ. ಸದಭಿರುಚಿಯ ಸಿನಿಮಾ ಪ್ರದರ್ಶನಗಳನ್ನು ಏರ್ಪಡಿಸುತ್ತ ಜನಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿಸಿದ್ದಾರೆ.

2014 ರಲ್ಲಿ ಸವದತ್ತಿ ತಾಲೂಕಿನ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಯನ್ನು ತಮ್ಮದಾಗಿಸಿಕೊಂಡಿರುವ ತಿಪ್ಪಾನಾಯ್ಕರು ಶಾಸಕರಾದ ಆನಂದ ಚಂದ್ರಶೇಖರ ಮಾಮನಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಪ್ರಶಂಸನಾಪತ್ರಗಳನ್ನು ಪಡೆದಿರುತ್ತಾರೆ‌.

ಸಾಹಿತ್ಯ ಸಂಗೀತ, ಚಿತ್ರಕಲೆಗಳಲ್ಲೂ ಅಭಿರುಚಿ ಬೆಳೆಸಿಕೊಂಡಿರುವ ಇವರು ಅನೇಕ ಅಂತರ್ಜಾಲ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅತ್ಯಂತ ಆಕರ್ಷಣೀಯವಾಗಿ ಚಿತ್ರ ಬಿಡಿಸಬಲ್ಲ ಇವರು ಅನೇಕ ಸಾಹಿತ್ಯ ಪತ್ರಿಕೆಗಳಲ್ಲಿ ತಮ್ಮ ಪೇಂಟಿಂಗುಗಳು ಪ್ರಕಟಿಸಿರುವುದು ಶ್ಲಾಘನೀಯ. ಮಕ್ಕಳು ಮತ್ತು ಶಿಕ್ಷಕರಿಗಾಗಿ ‘ಲೆಟ್ಸ್ ಲರ್ನ್ ಟು ಲರ್ನ್’ ಯೂಟ್ಯೂಬ್ ಚಾನೆಲ್ ನಡೆಸು ಇವರು ಕಾಲಕಾಲಕ್ಕೆ ಅಗತ್ಯ ಮಾಹಿತಿಯುಳ್ಳ ವೀಡಿಯೋಗಳನ್ನು ಸಿದ್ಧಪಡಿಸಿ ಬಿತ್ತರಿಸುತ್ತಾರೆ. ಸಾವಿರಾರು ಜನರು ವೀಕ್ಷಣೆ ಮಾಡಿರುವುದು ಇವರ ಸಫಲತೆಗೆ ಹಿಡಿದ ಕನ್ನಡಿಯಾಗಿದೆ. ಸದರಿ ಶಿಕ್ಷಕರಿಗೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಾದ ಎಚ್. ಆರ್. ಪೆಟ್ಲೂರ್ ನಿಕಟಪೂರ್ವ ಅಧ್ಯಕ್ಷ ರಾದ ಎಸ್. ವ್ಹಿ. ಬೆಳವಡಿ.ಪ್ರಧಾನ ಕಾರ್ಯದರ್ಶಿ ಎಫ್. ಜಿ. ನವಲಗುಂದ. ಅಭಿನಂದಿಸಿದ್ದಾರೆ

- Advertisement -
- Advertisement -

Latest News

ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ....
- Advertisement -

More Articles Like This

- Advertisement -
close
error: Content is protected !!
Join WhatsApp Group