ಸವದತ್ತಿ: ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕೋವಿಡ್ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.
ಕೋವಿಡ್ ಲಸಿಕೆಯನ್ನು ನ್ಯಾಯಾಲಯದ ಸಭಾಂಗಣದಲ್ಲಿ ಸಂಘಟಿಸುವ ಮೂಲಕ ಸವದತ್ತಿ ತಾಲೂಕಿನ ಆರೋಗ್ಯ ಇಲಾಖೆಯ ವರು ಎಲ್ಲರಿಗೂ ಲಸಿಕೆ ಹಾಕುವ ಮೂಲಕ ಕೋವಿಡ್ ತಡೆಗಟ್ಟಲು ಕ್ರಮಕೈಗೊಂಡಿದ್ದು ಶ್ಲಾಘನೀಯ ಕಾರ್ಯ ಎಂದು ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಶಿಧರ್ ಮುದಕನಗೌಡ್ರ ಅಭಿಪ್ರಾಯ ಪಟ್ಟರು. ಆರೋಗ್ಯ ಇಲಾಖೆ ಯ ಸೇವೆಯನ್ನು ಶ್ಲಾಘಿಸಿ ವೈದ್ಯಾಧಿಕಾರಿಗಳಾದ ಡಾ. ಮಹೇಶ ಚಿತ್ತರಗಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಹರೀಶ್ ಎಚ್. ಹಿರಿಯ ನ್ಯಾಯವಾದಿಗಳಾದ ಬಿ. ವ್ಹಿ. ಮಲಗೌಡ್ರ. ಮೋಹನ್ ಏಣಗಿ. ಬಿ. ಎಂ. ಯಲಿಗಾರ. ಎಂ. ಬಿ. ದ್ಯಾಮನಗೌಡರ. ಜಿ. ವಾಯ್. ಕರಮಲ್ಲಪ್ಪನವರ. ಸಂಗ್ರೇಶಕೊಪ್ಪ. ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸಿ. ವ್ಹಿ. ಸಂಬೈನಮಠ. ಕಾರ್ಯ ದರ್ಶಿ ಎಸ್. ಎಸ್. ಮಾನೆ ಹಾಗೂ ಪದಾಧಿಕಾರಿಗಳು ಹಾಜರಿದ್ದರು