- Advertisement -
ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದು ಬೆಂಗಳೂರು ಮಹಾನಗರ ಪಾಲಿಕೆ ೧೦ ದಿನಗಳ ಗಣೇಶೋತ್ಸವಕ್ಕೆ ಪರವಾನಿಗೆ ನೀಡಿ ಕೈ ತೊಳೆದುಕೊಂಡಿದೆ.
ಯಾರಿಗೂ, ಯಾವುದಕ್ಕೂ ಇಲ್ಲದ ನಿಬಂಧನೆಗಳು, ರೂಲ್ಸ್ ಗಳು ಗಣೇಶ ಹಬ್ಬಕ್ಕೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ ಹಿಂದೂ ಪರ ಸಂಘಟನೆಗಳು ಬಿಬಿಎಂಪಿ ಕಚೇರಿ ಎದುರು ಬೃಹತ್ ಪ್ರಮಾಣದ ಗಣೇಶ ಮೂರ್ತಿಗಳನ್ನೇ ತಂದು ಇಟ್ಟು ಪ್ರತಿಭಟನೆ ನಡೆಸಿದರು.
ಕೇವಲ ನಾಲ್ಕು ಅಡಿ ಗಣಪನನ್ನು ಕೂರಿಸಬೇಕು, ಐದು ದಿನ ಮಾತ್ರ ಕೂರಿಸಬೇಕು, ಮನೆಯಲ್ಲಿ ಕೂಡಾ ಎರಡು ಅಡಿಗಿಂತ ಎತ್ತರದ ಗಣಪ ಇರಬಾರದು ಎಂಬ ಸರ್ಕಾರಿ ನಿಯಮಗಳನ್ನು ಪ್ರಶ್ನಿಸಿದ ಹಿಂದೂಪರ ಸಂಘಟನೆಗಳು ಬಿಬಿಎಂಪಿ ಕಚೇರಿಯ ಎದುರು ಉಗ್ರ ಪ್ರತಿಭಟನೆ ನಡೆಸಿದವು.
- Advertisement -
ಆಗ ಈ ಪ್ರತಿಭಟನೆಗೆ ಮಣಿದ ಬಿಬಿಎಂಪಿ ಆಯುಕ್ತರು ಹತ್ತು ದಿನಗಳವರೆಗೆ ಗಣೇಶ ಕೂರಿಸಲು ಅನುಮತಿ ನೀಡಿದರು.