“ಮುದ್ದು ಗಣಪನ ಹಬ್ಬಕೆ ಮುದ್ದು ಮುದ್ದು ಸಾಲುಗಳ ಕವಿತೆ. ಹೃದ್ಯ ಸ್ವರಗಳ ಭಾವಗೀತೆ. ಒಪ್ಪಿಸಿಕೊಳ್ಳಿ..”
-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಜೈ ಹೋ ಗಣೇಶ..!
ಮಾತೃಪ್ರೇಮದ ಮೇರು ನಿದರ್ಶನ
ಆದಿಪೂಜಿತ ಮುದ್ದು ಗಜಾನನ.!
ಬೇಡುವರಿಗೆ ಸಿದ್ದಿ ಬುದ್ದಿ ಪ್ರದಾಯಕ
ಸಕಲ ವಿಘ್ನ ನಿವಾರಕ ವಿನಾಯಕ.!
ರಾವಣನ ಸೋಲಿಸಿದ ಕುಶಾಗ್ರಮತಿ
ಆತ್ಮಲಿಂಗ ರಕ್ಷಿಸಿದ ಮಹಾಗಣಪತಿ.!
ಮಕ್ಕಳಿಗೆ ತಾಯ್ತಂದೆಯೇ ಬ್ರಹ್ಮಾಂಡ
ಎಂದು ನಿರೂಪಿಸಿದ ವಕ್ರತುಂಡ.!
ಜಾತಿಮತಗಳ ಮೀರಿ ಬೆಳೆದ ದೈವ
ಸರ್ವರ ಅಕ್ಕರೆಯ ಮೋದಕಪ್ರಿಯ.!
ಸ್ವಾತಂತ್ರ್ಯ ಸಂಗ್ರಾಮಕ್ಕೂ ಹರಿಕಾರ
ಒಗ್ಗಟ್ಟಿಗೆ ಸ್ಪೂರ್ತಿಯಾದ ವಿಘ್ನೇಶ್ವರ.!
ಮಾಡಿ ಮಹಾಮಾರಿ ಸೋಂಕಿನ ನಾಶ
ಮತ್ತೊಮ್ಮೆ ನಮ್ಮ ಕಾಯೋ ಗಣೇಶ.!
ಸಕಲರ ಅಭೀಷ್ಟಗಳಾಗಲಿ ಸಾಕಾರ
ಜಗದಂಗಳ ಬೆಳಗಿಬಿಡು ಲಂಬೋಧರ.!
ಎ.ಎನ್.ರಮೇಶ್. ಗುಬ್ಬಿ.
ಗಣನಾಥ
ಯಾವ ನಾಮದಲಿ ಜಪಿಸಲಿ
ನಿನ್ನ ಗಣನಾಥನೇ
ನಿನ್ನ ಧ್ಯಾನದಲಿ ಇರುವೆ
ಸಲುವೆನ್ನಾ ಗಜಮುಖನೇ ||1||
ನಿನ್ನ ಸೇವೆಯೇ ಪರಮ ಸೇವೆಯು
ತಾಯಿ ಗೌರಿಗೆ ಅಲ್ಲವೇ
ತಂದೆ ಶಿವನ ಮನವ ಗೆದ್ದ ನೀನು
ಈ ಜೀವಕ್ಕೆ ಇಂದು, ಬಂಧು ಅಲ್ಲವೇ ||2||
ನಿನ್ನ ಭಾಗ್ಯದ ಸಿರಿಯಲಿ
ಬದುಕು ಲಾವಣ್ಯವ ಮುಡಿದಿದೆ
ನಿನ್ನ ಜ್ಞಾನದ ಲೋಕದಲಿ
ವಿಶ್ವದ ಬಾಗಿಲು ತೆರೆದಿದೆ ||3||
ಏಕದಂತನೇ ಲೋಕಪೂಜಿತನೇ
ನಿನಗೆ ವಂದನೆ
ನಿನ್ನ ಕರುಣೆಯ ತೋಳಲಿ
ಸಲುವು ಎಮ್ಮನೆ ||4||
ಯೋಗೇಂದ್ರ ನಾಯ್ಕ್
GLPS ಮುಸ್ಸೇನಾಳ್
ನ್ಯಾಮತಿ
ದಾವಣಗೆರೆ
ಗಣಪ ಬಂದ ನಿಯಮ ತಂದ
ಬಂದ ಬಂದ ಗಣೇಶ ಬಂದ
ಸಂಕಷ್ಟದ ಕಾಲದಲ್ಲಿ
ಹುರುಪಿನಿಂದ ಬಂದ
ಅಲ್ಲಿ ಇಲ್ಲಿ ಕೂರಲು
ನಿಯಮ ತಂದ
ನನ್ನನ್ನು ಭೇಟಿಯಾಗಲು ಕಂಡಿಷನ್ ಅಪ್ಲೈ ಅಂದ
ಮೂರು ದಿನ ಸಮಯ ಅಂದ
ಅದ್ಧೂರಿ ತಯ್ಯಾರಿ ಮಾಡಿ ಪೂಜಿಸು ಎಂದ.
ಎಷ್ಟೊಂದು ಕಠಿಣ ಇವರದು ಎಂದ
ಜನರಿಗಿಲ್ಲದ ನಿಯಮ ನನಗೇಕೆ ಎಂದ
ವರ್ಷ ವರ್ಷ ಬರ್ತೀನಿ ಸಂತೋಷವೆಂದ
ಕೊರೋನಾ ಇದೆಯಂಥ ಎಚ್ಚರಿಕೆ ಅಂದ.
ಹಾಡು ಪಾಡು ನೃತ್ಯ ಈ ಸಲ ಇಲ್ಲಂದ.
ಓಣಿಗೊಂದರಂತೆ ನನ್ನ ಭಜಿಸಿ ಪೂಜಿಸಿ ವಿಸರ್ಜಿಸಿ ಸಿಟ್ಟಾಗಿ ಮುಂದಿನ ವರ್ಷ ಬರ್ತೀನಿ ಕೊರೋನಾ ಓಡಿಸಿ ಎಂದ.
ಗಣೇಶ
ನಿನ್ನ
ಮಹಿಮೆ
ಅಪಾರ
ಜಗತ್ತಿನಾದ್ಯಂತ
ಪ್ರಚಾರ
ಪ್ರಥಮ
ಪೂಜಿತ
ನೀನು
ಸರ್ವರಿಗೂ
ಸಾಕಾರ.
ನಿನ್ನ ನೆನೆಯಲು
ಶುಭವಾಗಲು
ದಿನವೂ
ನಿನ್ನ ಭಕ್ತಿಯ
ಸ್ವೀಕಾರ.
ಗಣೇಶ ಹಬ್ಬದ ಪ್ರಯುಕ್ತ ಗಣೆಶನಿಗೆ ನುಡಿ ನಮನ
ಹೈಕುಗಳು
೧
ಗಣೇಶ ಬಂದ
ಪ್ರತಿ ವರುಷದಂತೆ
ವಿಘ್ನ ಹೋಗಲಿ.
೨
ಏಕದಂತನೆ
ಏಕತೆ ರೂಪ ತಂದೆ
ಎಲ್ಲರೂ ಒಂದೆ.
೩
ಸಂಕಷ್ಟ ಕಾಲ
ಸರಳವಾಗಿ ಹಬ್ಬ
ಪ್ರತಿಷ್ಠಾಪನೆ.
೪
ಗಣ ನಾಯಕ
ವಿಶ್ವ ಅಧಿನಾಯಕ
ಹಲವು ರೂಪ.
೫
ನಮ್ಮ ಉತ್ಸಾಹ
ಗಣೇಶ ಮಹೋತ್ಸವ
ಎಲ್ಲರೂ ಭಾಗಿ.
ಕುಂತ ಗಣಪ
ಭರ್ಜರಿ ಮಹೋತ್ಸವ
ವಿಘ್ನವಿಲ್ಲದೆ.
ದರ್ಶನ ಕೊಟ್ಟ
ಹೊರಟನು ಗಣಪ
ಸಂಜೆಯೊತ್ತಿಗೆ.
ಗಣ ನಾಯಕ
ತಿಂದನ್ನೊಂದು ಮೋದಕ
ವಿಘ್ನನಾಶಕ.
ಶ್ರೀಕಾಂತಯ್ಯ ಮಠ