spot_img
spot_img

ಮುಕ್ತ ಕಬಡ್ಡಿ ಪಂದ್ಯಾವಳಿ ಮಹಾರಾಷ್ಟ್ರದ ಶಿವ ಶಾಹು ತಂಡ ಪ್ರಥಮ

Must Read

spot_img
- Advertisement -

ಮೂಡಲಗಿ – ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶ್ರೀ ಗಜಾನನ ಉತ್ಸವ ನಿಮಿತ್ತವಾಗಿ ಏರ್ಪಡಿಸಿದ ಪುರುಷರ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಗ್ರಾಮದ ಬಾಲಚಂದ್ರ ಬಯಲು ರಂಗಮಂದಿರದ ಆವರಣದಲ್ಲಿ ಜರುಗಿದವು.

ಪಂದ್ಯಾವಳಿಯ ಸಮಾರಂಭವನ್ನು ಶಾಸಕ ಹಾಗೂ ಕೆಎಂಎಫ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಕಾರ್ಯದರ್ಶಿಯಾದ ದಾಸಪ್ಪ ನಾಯಕ್ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದರು.

ಹಿಡಕಲ್ ಡ್ಯಾಂ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಯಲ್ಲಪ್ಪ ಬಿ.ಪಾಟೀಲ್ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿ ಕೊಂಡು ಸದೃಢರಾಗಬೇಕೆಂದು ಹೇಳಿದರು.

- Advertisement -

ಕ್ರೀಡಾಕೂಟದ ಮೈದಾನ ಪೂಜೆಯನ್ನು ಎಸ್.ಎಸ್.ಪಾಟೀಲ ನೆರವೇರಿಸಿದರು, ಶಂಕರಗೌಡ ದುಂ.ಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ ಮಾಜಿ ಸದಸ್ಯ ಭೀಮಶಿ ಮುಗದುಮ್ಮ ಟಾಸ್ ಮಾಡಿ ಪಂದ್ಯಾವಳಿಗೆ ಚಾಲನೆ ನೀಡಿದರು ಅತಿಥಿಗಳಾಗಿ ಹಣಮಂತ ತೇರದಾಳ ಮತ್ತಿತರರು ಭಾಗವಹಿಸಿದ್ದರು.

ಪಂದ್ಯಾವಳಿಗಳಲ್ಲಿ ಸುಮಾರು 40 ತಂಡಗಳು ಭಾಗವಹಿಸಿದ್ದರು

ಬಹುಮಾನ ವಿತರಣೆ: ಹೊನಲು ಬೆಳಕಿನಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಾರಾಷ್ತ್ರದ ಸಡೋಲಿ ಶಿವ ಶಾಹು ಕಬಡ್ಡಿ ತಂಡ(ಪ್ರಥಮ), ಅರಳಿಮಟ್ಟಿಯ ಬಸವೇಶ್ವರ ತಂಡ (ದ್ವಿತೀಯ), ನಾಗನೂರ ಮಹಾಲಕ್ಷ್ಮೀ ತಂಡ(ತೃತೀಯ), ಚಿಂಚಲಿ ಅಕಾಡೆಮಿ ತಂಡ(ಚತುರ್ಥ)ಸ್ಥಾನವನ್ನು ಪಡೆದುಕೊಂಡರು.

- Advertisement -

ಪಂದ್ಯಾವಳಿಯ ನಿರ್ಣಾಯಕರಾಗಿ ಪಿ.ಎನ್.ಆಳಗೂರ್, ಕೆ.ಎಚ್.ಪಾಟೀಲ, ಮೆಕ್ಕಲಮರಡಿ, ಎಂ.ಕೆ.ಪೂಜೇರಿ, ಹಣಮಂತ ಮದಗನ್ನವರ, ಡೊಳ್ಳಿ ಕಾರ್ಯ ನಿರ್ವಹಿಸಿದರು, ಬಹುಮಾನ ವಿತರಣೆಯಲ್ಲಿ ಕೆ.ಜಿ.ಮುಧೋಳ, ಗ್ರಾ.ಪಂ ಅಧ್ಯಕ್ಷ ಬಿ.ಆರ್.ಸಾಯನ್ನವರ, ಎಸ್.ಎಂ.ಜುಂಜರವಾಡ, ಕೆ.ಬಿ.ಮುಧೋಳ, ಎಸ್.ವಾಯ್.ಜುಂಜರವಾಡ, ಸಿ.ಎಂ.ಕುಡಚಿ, ಮಾರುತಿ ಮದಲಮಟ್ಟಿ, ಯುವಕ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ, ಗ್ರಾ.ಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸಂಘಟಕರು, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು. ಸಿ.ಎಂ.ಉಗಾರ ನಿರೂಪಿಸಿದರು, ಮಾಂತೇಶ ಯರಗಟ್ಟಿ ವಂದಿಸಿದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group