ಸವದತ್ತಿ – ಪಟ್ಟಣದ ಕಟ್ಟಿಓಣಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರರ ಜಯಂತಿಯನ್ನು ಆಚರಿಸಲಾಯಿತು ಮುಂಜಾನೆ ವೀರಭದ್ರೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ. ರುದ್ರಾಭಿಷೇಕ ಪುಷ್ಪಾರ್ಪಣೆ ಮಹಾ ಮಂಗಳಾರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ವೀರಸಂಗಯ್ಯ ಸಾಲಿ ಮತ್ತು ರುದ್ರಯ್ಯ ಸಾಲಿ ಮತ್ತು ಶಿವಕುಮಾರ ಅಬ್ಬಿತೇರಿಮಠರವರು ನಡೆಯಿಸಿಕೊಟ್ಟರು. ನಂತರ ತೊಟ್ಟಿಲೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಮುಕ್ತಾಯಕ್ಕನ ಬಳಗದವರು ಮತ್ತು ಜ್ಞಾನಗಂಗಾ ಅಕ್ಕನ ಬಳಗದ ಸದಸ್ಯರು ನಡೆಯಿಸಿಕೊಟ್ಟರು.
ನಂತರ ವೀರಭದ್ರೇಶ್ವರ ಯುವಕ ಮಂಡಳ ಕಟ್ಟಿ ಓಣಿಯ ಸದಸ್ಯರು ಪಲ್ಲಕ್ಕಿ ಉತ್ಸವ ನಡೆಯಿಸಿಕೊಟ್ಟರು ಸ್ಥಳೀಯ ಪುರವಂತರು ಪುರವಂತರ ಕಾರ್ಯಕ್ರಮ ನಡೆಯಿಸಿಕೊಟ್ಟರು.
ಜಯಂತಿ ಉತ್ಸವದಲ್ಲಿ ದೇವಸ್ಥಾನದ ಸದ್ಭಕ್ತ ಮಂಡಳಿ ಸದಸ್ಯರಾದ ಈರಯ್ಯ ಕಾಂತೀಮಠ, ಪ್ರವೀಣ ಪಟ್ಟಣಶೇಟ್ಟಿ,ಮಂಜುನಾಥ ಯಾಳಗಿ,ಈಶ್ವರ ಮಡಿವಾಳರ,ದುಂಡಯ್ಯ ರಾಮರಡಿಮಠ,ಸಂತೋಷ ಅಂಬ್ಲಿ, ಜಂಗಮ ಸಮಾಜದ ಅಧ್ಯಕ್ಷ ಆಯ್ ಪಿ ಪಾಟೀಲ,ಶಿಂಗಣ್ಣಾ ಚಿನಿವಾಲರ,ಬಾಬಣ್ಣ ಶೇಟ್ಟರ,ಶಿವಯೋಗಿ ಅತ್ತಿಗೇರಿ,ಬಸವರಾಜ ಮಡಿವಾಳರ, ರಮೇಶ ಪಟ್ಟಣಶೆಟ್ಟಿ,ಈರಣ್ಣಾ ಸುಬೇದಾರ,ರಮೇಶ ಪಟ್ಟಣಶೆಟ್ಟಿ, ಅಶೋಕ ವಾಲಿ ಉಪಸ್ಥಿತರಿದ್ದರು.