“ನಲಿ ಕಲಿ ಶಿಕ್ಷಕರ ಸಭೆ”

Must Read

ಸಿಂದಗಿ; ಕೊವಿಡ್19 ರಿಂದ ನಲಿಕಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಗ ಕುಂಠಿತವಾಗಿದೆ ಆದರಿಂದ ವಿದ್ಯಾರ್ಥಿಗಳಿಗೆ ನಲಿ ಕಲಿ ಪದ್ದತಿ ಮೂಲಕ ಅವರಿಗೆ ದೈನಂದಿನ ಚಟುವಟಿಕೆ ಮುಖಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಬೇಕು ಎಂದು

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.

ಪಟ್ಟಣ ಬಿ ಆರ್ ಸಿ ಕೇಂದ್ರದಲ್ಲಿ ತಾಲೂಕಿನ ನಲಿ ಕಲಿ ಶಿಕ್ಷಕರಿಗೆ ಒಂದು ದಿನ ಸಮಾಲೋಚನ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಲಿ ಕಲಿ ಪದ್ದತಿ ಮುಖಾಂತರವಾಗಿ ಶಿಕ್ಷಣ ಕೊಡುವದರಿಂದ ಕಲಿಕೆಯಲ್ಲಿ ವಿದ್ಯಾರ್ಥಿಯು ಹಿಂದೆ ಬೀಳದೆ ಉತ್ತಮ ಶಿಕ್ಷಣ ಪಡೆಯುತ್ತದೆ ಎಂದರು.

ನಲಿ ಕಲಿ ಸಂಯೋಜಕಿ ಶ್ರೀಮತಿ ಶ್ರೀದೇವಿ ರೆಬಿನಾಳ ಹಾಗೂ ಕನ್ನೋಳ್ಳಿ ವಲಯದ ಸಿ ಆರ್ ಪಿ ಭೀಮನಗೌಡ ಬಿರಾದಾರ ಮಾತನಾಡಿ ವಿದ್ಯಾರ್ಥಿಗಳಿಗೆ ಪಾಲಕರ ಸಹಕಾರ ಮೂಲಕ ತಂತ್ರ ಜ್ಞಾನ ಬಳಸಿಕೊಂಡು ನಲಿ ಕಲಿ ಪದ್ದತಿ ಮೂಲಕ ಅವರಿಗೆ ಶಿಕ್ಷಣ ಕೊಡಬೇಕು ಎಂದರು.

ತರಬೇತಿ ದಾರ ಜಗದೀಶ ಪಾಟೀಲ ನಲಿ ಕಲಿ ವಿದ್ಯಾರ್ಥಿಗಳಿಗೆ ಯಾವ ಪ್ರಕಾರವಾಗಿ ಶಿಕ್ಷಣ ಕೊಡಬೇಕು ಎಂದು ನಲಿ ಕಲಿ ಕಲಿಸುವ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಬಿ ಆರ್ ಪಿ ಎಂ ಎಂ ದೊಡಮನಿ,ರೇಖಾ ಬಿಜ್ಜರಗಿ, ಅನಸೂಯಾ ರಾಯನಗೌಡ, ಬಸವರಾಜ ಸೋಮಪೂರ,ಬಸವರಾಜ ಅಗಸರ,ನಿಂಗನಗೌಡ ಪಾಟೀಲ,ಎಸ್ ಜಿ ಹಿರೇಮಠ,ಶರಣಗೌಡ ಜೇವರಗಿ, ಸುಮಂಗಲಾ ಕೆಂಭಾವಿ,ಸವಿತಾ ಕೆಂಭಾವಿ, ಮಾದೇವಿ ಬಾಗಿ, ಅನೀಲಕುಮಾರ ಚೊರಗಸ್ತಿ,ಯು.ಐ.ಶೇಖ, ಈರಮ್ಮ ಮುತ್ತಿನಪೆಂಟಿನಮಠ,ಎಂ ಬಿ ಕೋರವಾರ,ಆಲಮೇಲ ಸರ್,ಸಿದ್ದಮ್ಮ ಪಾಟೀಲ,ಸುರೇಖಾ ಪೂಜಾರ,ಬಸಮ್ಮಬಜಂತ್ರಿ ಹಾಗೂ ತಾಲೂಕಿನ ವಿವಿಧ ನಲಿಕಲಿ ಶಿಕ್ಷಕರು ಭಾಗವಹಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group