ಹಸಿರಿನ ಬಾಹ್ಯ ಸೌಂದರ್ಯದಲ್ಲಿ ಅಡಗಿದೆ ನಮ್ಮ ಉಸಿರು: ಸಂಜೀವಕುಮಾರ

0
372

ಸಿಂದಗಿ: ವಿವಿಧ ಬಾಹ್ಯ ವಸ್ತುಗಳಿಂದ ಕೂಡಿರುವ ಸಂಗಮವೇ ಪರಿಸರ. ಇದರೊಂದಿಗೆ ಅನ್ಯೋನ್ಯತೆಯಿಂದ ಮಾನವನು ಜೀವಿಸುತ್ತಿದ್ದಾನೆ ಇದೆಲ್ಲರ ನಡುವೆ ಮಾನವನು ತನ್ನ ಸ್ವಾರ್ಥತೆಯಿಂದ ಈ ಸೃಷ್ಟಿಗೆ ವಕ್ರದೃಷ್ಟಿ ತೋರಿಸುತ್ತಿದ್ದಾನೆ. ಹೀಗಾಗಿ ಪರಿಸರವು ತೊಂದರೆಗೆ ಒಳಗಾಗುತ್ತಿದೆ ಎಂದು ತಾಲೂಕ ದಂಡಾಧಿಕಾರಿ ಸಂಜೀವಕುಮಾರ ದಾಸರ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದ ಆವರಣದಲ್ಲಿ ವಿಶ್ವ ಪರಿಸರ ಬಳಗದ ವತಿಯಿಂದ ಹಮ್ಮಿಕೊಂಡ 16 ನೇ ವಾರದ ಸಸಿನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಮಾತನಾಡಿ, ಇಡೀ ವಿಶ್ವದಲ್ಲಿ ಮನುಷ್ಯ ಜೀವಿ ಏಕಾಂಗಿಯಲ್ಲ ಈ ಸೃಷ್ಟಿ ಮನುಷ್ಯನ ಸ್ವತ್ತು ಅಲ್ಲವೇ ಅಲ್ಲ ಪ್ರಾಣಿ ಪಕ್ಷಿ ಕಾಡು ಮರ ಬೆಟ್ಟ-ಗುಡ್ಡ ಕಾಡು-ಮೇಡು ಬೆಟ್ಟ-ಗುಡ್ಡ ನದಿ ಹಳ್ಳ ಕೊಳ್ಳ ಸಮುದ್ರ ಸಾಗರ ಗಾಳಿ ಮಳೆ ಆಕಾಶ ಬೆಳಕು ಇವೆಲ್ಲವುಗಳ ಸಮೂಹವೇ ಪರಿಸರ ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ತನಗೆ ಸೂಕ್ತವಾದ ರೀತಿಯಲ್ಲಿ ಪರಿವರ್ತನೆ ಮಾಡಿಕೊಂಡು ಈ ಸುಂದರ ವ್ಯವಸ್ಥೆಯನ್ನು ಹಾಳು ಮಾಡಿ ತನ್ನ ಅಂತ್ಯವನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆ ಎಂದರು.

ವಿಜಯಪುರದ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ನಮ್ಮ ಭವಿಷ್ಯಕ್ಕೆ ಸ್ಫೂರ್ತಿಯಾಗಿರುವ ಪರಿಸರ ವಿನಾಶದಿಂದ ದುಷ್ಪರಿಣಾಮಗಳನ್ನು ಮನಗಂಡಿರುವ ನಾವು ಪರಿಸರ ಆಂದೋಲನವನ್ನು ಕಾಳಜಿ ಪೂರ್ವಕವಾಗಿ ಮಾಡುವ ಮೂಲಕ ಮನೆಗೊಂದು ಮರ ಊರಿಗೊಂದು ವನ ಬೆಳೆಸೋಣ ಪರಿಸರ ಪ್ರೀತಿ ಮಾಡೋಣ ಎಂದರು.

ಸಾನ್ನಿಧ್ಯ ವಹಿಸಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಪವಿತ್ರಾಜಿ ಮಾತನಾಡಿದರು.

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ಧಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಬಸವರಾಜ ಅಗಸರ ನಿರೂಪಿಸಿದರು.

ಶಿಕ್ಷಕ ಸಾಯಬಣ್ಣ ದೇವರಮನಿ ವಂದಿಸಿದರು.‌ಕಾರ್ಯಕ್ರಮದಲ್ಲಿ ಎಸ್ ಆರ್ ಪಾಟೀಲ. ಸಾಹಿತಿ ಎಂ ಆರ್ ಡೋಣಿ.ಕಾನಿಪ ಅಧ್ಯಕ್ಷ ಆನಂದ ಶಾಬಾದಿ,ಕವಿ ಕಲಾವಿದ ಗುಂಡಪ್ಪ ಕುಂಬಾರ,ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ ಕೆಂಬಾವಿ,ದೇವರಹಿಪ್ಪರಗಿ ಎನ್ ಪಿ ಎಸ್ ಸಂಘದ ಅಧ್ಯಕ್ಷ ಶಿವುಕುಮಾರ ಕಲ್ಲೂರ,ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಯು ಆಯ್ ಶೇಖ ಎಂ ಪಿ ಎಸ್ ಮುಖ್ಯೋಪಾಧ್ಯಾಯ ಶರಣಬಸವ ಲಂಗೋಟಿ ಭಾಗವಹಿಸಿದ್ದರು.