ಸಿಂದಗಿ: ಪಟ್ಟಣದ ಜಿ ಪಿ ಫೋರವಾಲ ಕಲಾ, ವಾಣಿಜ್ಯ ಮತ್ತು ವಿ ವಿ ಸಾಲಿಮರ ವಿಜ್ಞಾನ ಮಹಾವಿದ್ಯಾಲಯ ಹಾಗೂ ಭಾಸ್ಕರಾಚಾರ್ಯಾ ಸ್ನಾತಕೋತ್ತರ ಅಧ್ಯಯನ ಕೇಂದ್ರ , ಸಿಂದಗಿ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಬೃಹತ್ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಲಾಗಿತ್ತು.
ಪ್ರಾಚಾರ್ಯ ಪ್ರೊ. ಡಿ. ಎಂ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಆವರಿಸಿ ಜನರ ಪ್ರಾಣ ತೆಗೆದುಕೊಂಡಿದೆ ಕಾರಣ ಸಾರ್ವಜನಿಕರು ಹೆಚ್ಚು ಹೆಚ್ಚು ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ಕರೋನ ಸೋಂಕು ಹರಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಅಲ್ಲದೆ ಇತರರ ಆರೋಗ್ಯವನ್ನು ಕಾಪಾಡಲು ಸಹಕರಿಸಿದಂತಾಗುತ್ತದೆ ಎಂದರು.
ಈ ಕಾರ್ಯಕ್ರಮ ದಲ್ಲಿ NCC ಅಧಿಕಾರಿ ಪ್ರೊ. ರವಿ ಲಮಾಣಿ ಯವರು ಭಾಗವಹಿಸಿ ಮಾತನಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು ಮತ್ತು ಆರೋಗ್ಯಾಧಿಕಾರಿ ಡಾ. ಎಸ್. ಡಿ. ಕುಲಕರ್ಣಿಯವರು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ಕಾರ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳು ಸಾಕಷ್ಟು ಕಷ್ಟ ಪಟ್ಟು ಲಸಿಕೆ ಹಾಕಲು ಸಿದ್ಧತೆ ನಡೆದಿದೆ ಜಿಲ್ಲೆಯಲ್ಲಿ ಅತಿ ಹೆಚ್ಚು ಲಸಿಕೆ ಹಾಕಿಸಿಕೊಂಡಿರುವವರ ತಾಲೂಕು ಆಗಬೇಕು ಎಂದರು ಮತ್ತು ಜನರಲ್ಲಿ ಜಾಗೃತಿ ಮೂಡಿಸಿದರು.