ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

Must Read

ನಿಪ್ಪಾಣಿ – ಗಡಿ ಪಟ್ಟಣ ನಿಪ್ಪಾಣಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದು ಅವರಿಂದ ಒಂದು ಕಿಲೋಗಿಂತ ಹೆಚ್ಚಿನ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸುಹೇಲ್ ಶಬ್ಬೀರ ದೇಸಾಯಿ ಹಾಗೂ ಹಮೀದ ಸಲೀಮ್ ಶೇಖ್ ಎಂಬಿಬ್ಬರು ಬಂಧಿತರು.

ಈ ಖದೀಮರು ಮತ್ತೆ ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಪೊಲೀಸರು ಇಬ್ಬರನ್ನೂ ಬಂಧಿಸಿ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ‌.

ಪೊಲೀಸ್ ವರಿಷ್ಠಾಧಿಕಾರಿ ಸಂಗಮೇಶ ಶಿವಯೋಗಿ, ಶಹರ ಪೊಲೀಸ್ ಠಾಣಾ ನಿರೀಕ್ಷಕರಾದ ಕೃಷ್ಣವೇಣಿ ಗುರ್ಲಹೊಸೂರ ಹಾಗೂ ಶೇಖರ ಅಸೋದೆ, ಸುದರ್ಶನ ಅಸ್ಕಿ, ಉದಯ ಕಾಂಬಳೆ, ಎಸ್ ಎಸ್ ಚಿಕ್ಕೋಡೆ, ಬಸವರಾಜ ನಾವಿ, ಪೋಪಟ್ ಐನಾಪುರೆ ಹಾಗೂ ತಹಶೀಲ್ದಾರ ಮೋಹನ ಭಸ್ಮೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group