- Advertisement -
ನಿಪ್ಪಾಣಿ – ಗಡಿ ಪಟ್ಟಣ ನಿಪ್ಪಾಣಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದು ಅವರಿಂದ ಒಂದು ಕಿಲೋಗಿಂತ ಹೆಚ್ಚಿನ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸುಹೇಲ್ ಶಬ್ಬೀರ ದೇಸಾಯಿ ಹಾಗೂ ಹಮೀದ ಸಲೀಮ್ ಶೇಖ್ ಎಂಬಿಬ್ಬರು ಬಂಧಿತರು.
ಈ ಖದೀಮರು ಮತ್ತೆ ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಪೊಲೀಸರು ಇಬ್ಬರನ್ನೂ ಬಂಧಿಸಿ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.
- Advertisement -
ಪೊಲೀಸ್ ವರಿಷ್ಠಾಧಿಕಾರಿ ಸಂಗಮೇಶ ಶಿವಯೋಗಿ, ಶಹರ ಪೊಲೀಸ್ ಠಾಣಾ ನಿರೀಕ್ಷಕರಾದ ಕೃಷ್ಣವೇಣಿ ಗುರ್ಲಹೊಸೂರ ಹಾಗೂ ಶೇಖರ ಅಸೋದೆ, ಸುದರ್ಶನ ಅಸ್ಕಿ, ಉದಯ ಕಾಂಬಳೆ, ಎಸ್ ಎಸ್ ಚಿಕ್ಕೋಡೆ, ಬಸವರಾಜ ನಾವಿ, ಪೋಪಟ್ ಐನಾಪುರೆ ಹಾಗೂ ತಹಶೀಲ್ದಾರ ಮೋಹನ ಭಸ್ಮೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.