ರೈಲ್ವೇ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ – ಈರಣ್ಣ ಕಡಾಡಿ

Must Read

ಬೆಳಗಾವಿ: ಬೆಳಗಾವಿ ರೇಲ್ವೆ ನಿಲ್ದಾಣದ ಆಧುನಿಕರಣ ಕಾಮಗಾರಿಗಳನ್ನು (ಸ್ಟೇಶನ ಬಿಲ್ಡಿಂಗ್, ಪ್ಲಾಟಫಾರ್ಮ್, ಫ್ಲಿಟಲೈನ್ ಮತ್ತು ಮುಖ್ಯದ್ವಾರದ ಜೊತೆಗೆ ಪರ‍್ಯಾಯ ಪ್ರವೇಶದ್ವಾರ) ೨೦೨೨ ಮಾರ್ಚ ರ ಒಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದೆಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ ಭರವಸೆ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ತಿಳಿಸಿದರು.

ಸಪ್ಟಂಬರ-೩೦ ಗುರುವಾರದಂದು ಹುಬ್ಬಳ್ಳಿಯ ನೈರುತ್ಯ ರೇಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಸಂಸದ ಈರಣ್ಣ ಕಡಾಡಿ ಯವರು ರೇಲ್ವೆ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದರು.

ಹುಬ್ಬಳ್ಳಿ-ಮೀರಜ ನಡುವೆ ನಡೆಯುತ್ತಿರುವ ‘ಡಬಲ್ ಟ್ರ್ಯಾಕ್’ ಕಾಮಗಾರಿ ಇನ್ನೂ ಸಾಕಷ್ಟು ತ್ವರಿತಗತಿಯಲ್ಲಿ ಸಾಗಬೇಕಾಗಿದ್ದು, ಶೀಘ್ರ ಅನುಷ್ಠಾನಕ್ಕಾಗಿ ಒತ್ತಾಯಿಸಿದರು.

ದಿವಂಗತ ಶ್ರೀ ಸುರೇಶ ಅಂಗಡಿಯವರ ಕನಸಾಗಿದ್ದ ಧಾರವಾಡ-ಬೆಳಗಾವಿ (ವಾಯಾ-ಕಿತ್ತೂರ) ರೈಲು ಮಾರ್ಗದ ಕಾರ್ಯಗಳ ಅಡೆತಡೆಗಳನ್ನು ಆದಷ್ಟು ಬೇಗನೆ ನಿವಾರಿಸಲು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗೀಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ, ಉಪಪ್ರಧಾನ ವ್ಯವಸ್ಥ್ಥಾಪಕರಾದ ಆಶೀಶ್ ಪಾಂಡ್ಯೆ, ರೈಲ್ವೇ ವಿಭಾಗದ ಮುಖ್ಯ ಅಭಿಯಂತರರಾದ ವಿಷ್ಣು ಭೂಷಣ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group