ಕೆರೆಯಲ್ಲಿ ಈಜಲು ಹೋದ ನಾಲ್ವರು ಯುವಕರ ದಾರುಣ ಸಾವು

Must Read

ಬೀದರ – ಜಿಲ್ಲೆಯಲ್ಲಿರುವ ಪ್ರಸಿದ್ಧ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಪವಿತ್ರ ಇಸ್ಮಾಯಿಲ್ ಖಾದ್ರಿ ದರ್ಗಾಕ್ಕೆ ದರ್ಶನಕ್ಕಾಗಿ ಆಗಮಿಸಿದ ನಾಲ್ಕು ಯುವಕರು ಕೆರೆಯಲ್ಲಿ ಈಜಲು ಹೋಗಿ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ.

ಘೊಡವಾಡಿ ಗ್ರಾಮ ಅಂದರೆ ಇಡೀ ರಾಜ್ಯ ಮತ್ತು ಗಡಿ ಹೊಂದಿರುವ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಹಾಗೂ ತೆಲಂಗಾಣ ಪ್ರದೇಶದ ಗ್ರಾಮ. ಇಲ್ಲಿ ಮುಸ್ಲಿಂ ಹಾಗು ಹಿಂದು ಧರ್ಮದ ಪ್ರಸಿದ್ಧ ದೇವಸ್ಥಾನವಿದೆ. ಹುಮನಬಾದ ತಾಲೂಕಿನ ಈ ಘೋಡವಾಡಿ ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನು ತೆಲಂಗಾಣ ಹೈದ್ರಾಬಾದ್ ಮೂಲದ ಸೈಯದ್ ಅಕ್ಬರ್ ತಂದೆ ಸೈಯದ್ ಉಸ್ಮಾನ್(17), ಮಹ್ಮದ್ ಜೈವೀದಖಾನ್ ತಂದೆ ಮಹ್ಮದ್ ಸಲೀಂಖಾನ್(17), ಮಹ್ಮದ್ ಫಹತಖಾನ್ ತಂದೆ ಮಹ್ಮದ್ ಸಲೀಂಖಾನ್(15) ಮತ್ತು ಸೈಯದ್ ಜುನೈದಖಾನ್ ತಂದೆ ಸೈಯದ್ ಖಾಲೀದ್(15) ಎಂದು ಗುರುತಿಸಲಾಗಿದೆ.

ಹಿಂದೂ ಮುಸ್ಲಿಂರ ಭಾವೈಕ್ಯತೆ ಪ್ರತೀಕದ ಪವಿತ್ರ ಇಸ್ಮಾಯಿಲ್ ಖಾದ್ರಿ ದರ್ಗಾಕ್ಕೆ ದರ್ಶನಕ್ಕಾಗಿ ಆಗಮಿಸಿ, ಕೆರೆಯಲ್ಲಿ ಈಜುವಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಬಿ.ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಆರ್.ಪಾಟೀಲ ಸ್ಥಳಕ್ಕೆ ಭೇಟಿನೀಡಿ, ಮೃತರ ಶವಗಳನ್ನು ಹೊರ ತೆಗೆಸುವ ವ್ಯವಸ್ಥೆ ಮಾಡಿಸಿದರು.ಡಿವೈಎಸ್ಪಿ ಸೋಮಲಿಂಗ ಕುಂಬಾರ, ಪಿಎಸ್ಐ ರವಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group