ವನ್ಯಜೀವಿ ಸಪ್ತಾಹ 2021 – ಭಾರತದಲ್ಲಿ ಈ ವರ್ಷ, ಅಕ್ಟೋಬರ್ 2 ರಿಂದ 8 ರವರೆಗೆ ವನ್ಯಜೀವಿ ಸಪ್ತಾಹ ವನ್ನು ಆಚರಿಸಲಾಯಿತು, ಈ ಆಚರಣೆಯು ದೇಶದಲ್ಲಿರುವ ವೈವಿಧ್ಯಮಯ ಪ್ರಾಣಿಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಪತ್ರಿಕೆಯ ಓದುಗರಿಗೆ ಈ ವಿಶೇಷ ಲೇಖನ.
ವನ್ಯಜೀವಿ ಸಪ್ತಾಹ ದಂದು ವನ್ಯಜೀವಿಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ, ವನ್ಯಜೀವಿ ರಕ್ಷಣೆಗೆ ಕೆಲಸ ಮಾಡುವವರನ್ನು ಬೆಂಬಲಿಸೋಣ ಮತ್ತು ನಮ್ಮ ಸಾಮಾಜಿಕ ಮಾಧ್ಯಮವನ್ನು ಅದರ ಬಗ್ಗೆ ಜಾಗೃತಿ ಮೂಡಿಸಲು ಬಳಸೋಣ ಎಂದು ಪತ್ರಿಕೆ ಯ ಜೊತೆ ಮಾತಿಗೆ ಮುನ್ನುಡಿ ಬರೆದಿದ್ದರು ವನ್ಯಜೀವಿ ಛಾಯಾಗ್ರಾಹಕ ವಿನಾಯಕ್ ಗುಜ್ಜಾರ್.
ಕವಿಗಳ ಹಾಗೂ ಸಾಧಕರ ತವರೂರು ಮಲೆನಾಡು , ಮಲೆನಾಡಿನ ತೀರ್ಥಹಳ್ಳಿಯ ತುಂಗೆಯ ತಟದಲ್ಲಿ 22 ನೇ ಆಗಸ್ಟ್ 1982 ರಂದು ಶ್ರೀಮತಿ ಜ್ಯೋತಿ ಮತ್ತು ನಾಗಭೂಷಣ್ ರಾವ್ ದಂಪತಿಗಳ ಮಗನಾಗಿ ಮಳೆ ನಾಡಿನಲ್ಲಿ ಜನಿಸಿದ ವನ್ಯ ಜೀವಿ ಛಾಯಾ ಗ್ರಾಹಕ ವಿನಾಯಕ ಗುಜ್ಜಾರ್ , ಇವರು ಓದಿದ್ದು 10 ನೆ ತರಗತಿಯವರೆಗೆ ಮಾತ್ರ. ಆದರೆ ಸತತ 20 ವರುಷ ಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸುತ್ತ ಬಂದಿದ್ದು ಇವರು ಕ್ಯಾಮೆರ ಹಿಡಿದದ್ದು ಜೀವನ ನಡೆಸಲು ಆದರೆ ಈಗ ಅವರು ವನ್ಯ ಜೀವಿ ಛಾಯಾಗ್ರಹಣದ ಕಡೆ ಮುಖ ಮಾಡಿ ಅನೇಕ ರೀತಿಯ ಪ್ರಾಣಿ ಪಕ್ಷಿಗಳ ಸುಂದರ ಛಾಯಾಗ್ರಹಣ ಮಾಡಿದ್ದಾರೆ.
ಪ್ರಸುತ್ತ ತೀರ್ಥಹಳ್ಳಿಯ ಹೃದಯ ಭಾಗವಾದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಇವರ ವಿನಾಯಕ ಸ್ಟುಡಿಯೋವಿದ್ದು ಹೊಟ್ಟೆ ಪಾಡಿಗಾಗಿ ಮದುವೆ ಹಾಗು ಶುಭ ಕಾರ್ಯಕ್ರಮಗಳ ಛಾಯಾಗ್ರಹಣ ಕೈಗೊಳ್ಳುತ್ತಾರೆ.
ಸುಮಾರು 13 ವರುಷಗಳಿಂದ ವನ್ಯ ಜೀವಿಗಳ ಬಗ್ಗೆ ಒಲವು ಹಾಗು ಅವುಗಳ ಬಗ್ಗೆ ಮಾಹಿತಿ ಕಲೆ ಹಾಕಲು ಅವರಲ್ಲಿ ಚಿಗುರು ಮೂಡಿದ್ದು ವನ್ಯ ಜೀವಿಗಳ ಛಾಯಾಗ್ರಹಣ !! ಮಲೆನಾಡಿನ ಅನೇಕ ಅರಣ್ಯ ಪ್ರದೇಶದಲ್ಲಿ ಹಾಗು ನದಿ ತಟದಲ್ಲಿ ಹಾಗು ಕೆರೆ ಗಳ ಅಂಚಿನಲ್ಲಿ ಅನೇಕ ರೀತಿಯ ವನ್ಯ ಜೀವಿ ಗಳ ಮನ ಮೋಹಕ ಭಂಗಿಯನ್ನು ತಮ್ಮ ಕ್ಯಾಮೆರ ಕಣ್ಣಿನಲ್ಲಿ ಸೆರೆ ಹಿಡಿದ್ದಾರೆ.
ಶಾಲೆ ಶಿಕ್ಷಕರ ಜೊತೆ ಜೊತೆಗೆ ಮಕ್ಕಳಿಗೆ ವನ್ಯ ಜೀವಿ ಹಾಗು ಪಕ್ಷಿ ಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಶಾಲೆ ಮಕ್ಕಳಿಗೆ ಮಾಹಿತಿ ನೀಡಿ ಅವರಲ್ಲಿ ವನ್ಯ ಜೀವಿ ಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳಸುವ ಉತ್ತಮ ಕೆಲಸ ಮಾಡುತ್ತಿದ್ದಾರೆ ವಿನಾಯಕ ಗುಜ್ಜಾರ್.
ಗೇರು ಗುಡ್ಡದಲ್ಲಿ ಸೂರ್ಯಾಸ್ತ !
ಮಳೆ ಗಾಳಿ ಬಿಸಿಲ ನಡುವೆ ಇರುವ ಸುಂದರ ನಗರಿ ಮಲೆನಾಡು ಭಾಗದಲ್ಲಿ ಮುಸ್ಸಂಜೆ ಸೂರ್ಯ ಭೂಮಿಗೆ ಬೆನ್ನು ತಿರುಗಿಸಿ ಹೊರಡುವ ಸಮಯ ದಲ್ಲಿ ತೀರ್ಥಹಳ್ಳಿ ಯಿಂದ 5 ಕಿಮೀ ದೂರದಲ್ಲಿರುವ ಚಿಟ್ಟೆಬೈಲಿನ ಗೇರು ಗುಡ್ಡದಲ್ಲಿ ಮುಸ್ಸಂಜೆಯಲ್ಲಿ ಸೂರ್ಯಾಸ್ತದ ಮನ ಮೋಹಕ ದೃಶ್ಯವನ್ನು ವಿನಾಯಕ ಸೆರೆ ಹಿಡಿದ್ಧಾರೆ !!
ಗುಬ್ಬಚ್ಚಿಯ ಗೂಡು
ಪಕ್ಷಿ ಪ್ರೇಮಿ ವಿನಾಯಕ ಗುಜ್ಜಾರ್ ,ತಮ್ಮ ವಿನಾಯಕ ಸ್ಟುಡಿಯೋ ಮುಂಭಾಗದಲ್ಲಿ ರಟ್ಟಿನ ಡಬ್ಬಿ ಯಿಂದ ಗೂಡು ನಿರ್ಮಿಸಿ ಅದರ ಎದುರಿಗೆ ತೆಂಗಿನ ಕಾಯಿ ಕರಟದ ಚಿಪ್ಪಿನಲ್ಲಿ ಅಕ್ಕಿ ಯನ್ನು ಸಂಗ್ರಹಿಸಿ, ಗುಬ್ಬಚ್ಚಿ ವಾಸಿಸಲು ಅನುಕೂಲ ಮಾಡಿದ್ದಾರೆ ಅಲ್ಲಿ ತಾಯಿ ಗುಬ್ಬಿ ತನ್ನ ಮರಿಗೆ ತೆಂಗಿನ ಕಾಯಿ ಕರಟದ ಚಿಪ್ಪಿನಲ್ಲಿರುವ ಅಕ್ಕಿಯನ್ನು ತೆಗೆದು ಕೊಂಡು ಗುಟುಕು ನೀಡುವುದನ್ನು ನೋಡುತ್ತ ಇದ್ದರೆ ಮನಸ್ಸಿಗೆ ನೆಮ್ಮದಿ : ಆಹ್ಲಾದ !!
ಭದ್ರಾ ಅಭಯಾರಣ್ಯ ಹಾಗು ಸಕ್ರೇಬೈಲು ಆನೆ ಬಿಡಾರದಲ್ಲಿ ಹಾಗು ಮಲೆನಾಡಿನ ದಟ್ಟ ಅರಣ್ಯದಲ್ಲಿ ಅನೇಕ ಬಗೆಯ ವಿಶೇಷ ಪ್ರಾಣಿ, ಪಕ್ಷಿಗಳನ್ನು ವಿನಾಯಕ್ ಗುಜ್ಜಾರ್ ಇವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.
ವಿನಾಯಕ್ ಕ್ಯಾಮೆರಾ ಹಿಡಿದು ಕಾಡಿನಲ್ಲಿ ನಿಂತರೆ ವನ್ಯ ಜೀವಿಗಳ ಛಾಯಾ ಚಿತ್ರವಿಲ್ಲದೆ ಮರಳುವುದೆ ಇಲ್ಲ !! ವನ್ಯ ಜೀವಿಗಳ ಛಾಯಾ ಚಿತ್ರ ಸೆರೆ ಸಿಗಲು ಅವರಿಗೆ ಕೆಲವು ದಿನಗಳ ಕಾಲ ಅನೇಕ ಬಾರಿ ಕಾಡಲ್ಲೆ ಉಳಿಯುವ ಸಂದರ್ಭ ಎದುರಾಗಿದೆ ಎನ್ನುತ್ತಾರೆ ವಿನಾಯಕ್ ಗುಜ್ಜಾರ್.
ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದ ಅನೇಕ ಬಗೆಯ ಪಕ್ಷಿಗಳ ಬಗ್ಗೆ ವಿನಾಯಕ್ ವಿವರಿಸುತ್ತಾ ಛಾಯಾಚಿತ್ರ ತೋರಿಸಿ ಹಕ್ಕಿಗಳ ಕಲರವ ಹಾಗು ಹೆಸರನ್ನು ಹೇಳುತ್ತಾ – ಬಾಲ ದಂಡೆ ಹಕ್ಕಿ , ಹಳದಿ ಗಂಟಲಿನ ಪಿಕಳಾರ , ಹಸಿರು ಪಾರಿವಾಳ , ನೀಲಿ ನೊಣ ಹಿಡುಕ , orrange headed Trush ಕಿತ್ತಳೆ ತಲೆಯ ಹಾಡುವ ಹಕ್ಕಿ , Indian Teator ಹಾಗು ಮಲೆನಾಡಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ತೆಗದ ಛಾಯಾಚಿತ್ರ ಗಳು ಚಂಬುಕೊಟಿಗಾ , ಚಂದ್ರ ಮುಕುಟ , ಕೋಗಿಲೆ , ಮಲೆ ಮಂಗಟ್ಟೇ , ಬೂದು ಮಂಗಟ್ಟೇ , Paid Horn Bill , ಚಿಟ್ಟು ಗಿಳಿ , Rivert Turn , Mag Pirobin , Common Loara , Singing Bird : ಹಾಡುವ ಹಕ್ಕಿ , ಕಾಜಾಣ ,Oriental White Eye , ಕಾಡು ಪಾಪ , ಚಂದ್ರ ಮುಕುಟ , ಡೇಗೆಹಕ್ಕಿ , ಕೆಂಚು ಅಳಿಲು , Malabar Squirrel , ಸೂರಕ್ಕಿ : Purple Sun Bird , Indian Silver Bill , Siberian Stone Chat , ರಾಮದಾಸ ಹದ್ದು ಹೀಗೆ ಹಲವಾರು ರೀತಿಯ ಮಾಹಿತಿಗಳ ಸಮೇತ ಪಕ್ಷಿಯ ಬಗ್ಗೆ ಅವರದೇ ಆದ ಶೈಲಿ ಯಲ್ಲಿ ವ್ಯಾಖ್ಯಾನ ಮಾಡುತ್ತಾರೆ ವಿನಾಯಕ್ !!
ಪ್ರಶಸ್ತಿ ಪುರಸ್ಕೃತ
ಪೋಟೋ ಹಂಟರ್ಸ ಇಂಟರ್ ನ್ಯಾಷನಲ್ ಸರಕ್ಯುಟ್ 2019 ಇದರಲ್ಲಿ ನಾನು ತೆಗೆದ 3 ಚಿತ್ರ ಆಯ್ಕೆಯಾಗಿದೆ ಅದರಲ್ಲಿ 1 ಚಿತ್ರ ಛೇರ್ ಮನ್ ಛಾಯ್ಸಗೆ ಹುಪೋ ಮರಿಯ ಆರೈಕೆ ಚಿತ್ರ ಆಯ್ಕೆ ಯಾಗಿ ಪ್ರಶಸ್ತಿ ಲಭಿಸಿದೆ ಎಂದು ಅವರು ವಿವರಿಸುತ್ತಾರೆ.
ಒಟ್ಟು 9 ಪದಕಗಳು ಇವರ ವನ್ಯ ಜೀವಿಗಳ ಛಾಯಾ ಗ್ರಹಣ ಕ್ಕೆ ಲಭಿಸಿದ್ದು ಅದರಲ್ಲಿ 5 ಬಂಗಾರದ ಪದಕಗಳು ಸಂದಿವೆ ಉಳಿದವು – bronze 2.chairman choise – ಮತ್ತು 2fip gold, jps gold, ifs gold ಪದಕಗಳು ಲಭಿಸಿವೆ ಎನ್ನುತ್ತಾರೆ ವಿನಾಯಕ್ ಗುಜ್ಜಾರ್.
“ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರ ಛಾಯಾ ಚಿತ್ರ ಗಳೆ ವನ್ಯಜೀವಿ ಛಾಯಾಗ್ರಹಣ ಮಾಡಲು ಸ್ಪೂರ್ತಿ ” ಎನ್ನುವುದು ವಿನಾಯಕ ಅವರು ವಿನಯಪೂರ್ವಕವಾಗಿ Times of ಕರ್ನಾಟಕಕ್ಕೆ ಹೇಳಿದ ಮಾತು.
ವಿನಾಯಕ್ ಗುಜ್ಜಾರ್ ತಮ್ಮ ಕ್ಯಾಮೆರಾದ ಕಣ್ಣಿನಲ್ಲಿ ತಾಯಿ – ಮಕ್ಕಳ ಅನು ಬಾಂಧವ್ಯದ ಭಾವನಾತ್ಮಕ ಚಿತ್ರ ಸೆರೆ ಹಿಡಿದಿದ್ದಾರೆ ., ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಛಾಯಾ ಚಿತ್ರ ಗಳನ್ನು ನೋಡಿ ಬೆಳೆದ ಇವರು ಸುಂದರ ಛಾಯಾ ಚಿತ್ರ ಸೆರೆಹಿಡಿಯಲೂ ಅವರೇ ಸ್ಪೂರ್ತಿ ಎನ್ನುತ್ತಾರೆ .
ಚಂದ್ರ ಮುಕುಟ (ಹಕ್ಕಿ ) ಪಕ್ಷಿ ಯ ಛಾಯಾ ಚಿತ್ರ ವನ್ನು ಸೆರೆ ಹಿಡಿಯಲು ಬೆಳಿಗ್ಗೆ 6 ರಿಂದ 11 ರತನಕ ಮಂಡ ಗದ್ದೆ ಯ ಹಳ್ಳಿ ಯ ಬಳಿ ತಪ್ಪಿಸಿಗೆ ಕುಳಿತು ತಾಯಿ ಮತ್ತು ಮರಿ ಯ
ಬಾಂಧವ್ಯದ ಚಿತ್ರ ಸೆರೆಹಿಡಿದ್ಧಾರೆ ಮಲೆನಾಡಿನ ವೃತ್ತಿ ನಿರತ ಹಾಗು ವನ್ಯ ಜೀವಿ ಛಾಯಾ ಗ್ರಾಹಕ ವಿನಾಯಕ್ ಗುಜ್ಜಾರ್.
ಮಲೆನಾಡ ಮಡಿಲಲ್ಲಿ ಸದಾ ಕ್ರಿಯಾಶೀಲರಾಗಿರುವ ವನ್ಯ ಜೀವಿ ಛಾಯಾ ಗ್ರಾಹಕ ವಿನಾಯಕರವರ ಕ್ಯಾಮೆರ ಕಣ್ಣಿನಲ್ಲಿ ಇನ್ನೂ ಹೆಚ್ಚಿನ ಅದ್ಭುತ ಛಾಯಾಚಿತ್ರ ಹೊರ ಹೊಮ್ಮಲಿ ಎಂದು ಆಶಿಸೋಣ.
ಸಂದರ್ಶನ ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ