Homeಕವನಶ್ರೀಕಾಂತಯ್ಯ ಮಠ ಚುಟುಕುಗಳು

ಶ್ರೀಕಾಂತಯ್ಯ ಮಠ ಚುಟುಕುಗಳು

ಕೈ ಹಿಡಿಯುತ್ತೇನೆ ಕೊನೆಯವರೆಗೂ

ಅದೆ ‌ನೆನಪಿತ್ತು
ಕೈ ಬಿಟ್ಟು ಹೋದಾಗ
ನಿನ್ನದೆ ನೆನಪು ಕಾಡುತಿತ್ತು.


ಮಾತು ಹೇಳುವಾಗ
ಬಹಳ ಚಂದ
ಅದೆ ಮಾತು ನಡೆಯದಿದ್ದಾಗ
ಏನೈತೆ ಜೀವನದಾಗ
ಬದ್ನೆಕಾಯಿ ಅಂದ !


ರತ್ನ

ನನ್ನ ಒಡಲ ಮುತ್ತು ನೀನು
ನನ್ನ ಒಡಲಾಳದ ರತ್ನ ನೀನು
ಪ್ರಯತ್ನ ಪಟ್ಟೆ ಹೇಳಲು
ಕಪ್ಪೆ ಚಿಪ್ಪಿನೊಳಗಿದ್ದೆ
ಬಿಡಿಸಲು ಆಗಲಿಲ್ಲ
ಈ ಬಂಧನ ಆಗಲಿಲ್ಲ.


ಹೆಜ್ಜೆ

ಅವಳು ಹೆಜ್ಜೆ ಹೆಜ್ಜೆ ಇಟ್ಟಾಗಲೂ ಒಂದೊಂದು ಮಾತು ಹೇಳುತ್ತಿದ್ದೆ
ನಾ ನಿನ್ನ ಬಿಡಲಾರೆ ಎಂದು
ಈಗ ಆ ಹೆಜ್ಜೆಗಳೆ ಇಲ್ಲ
ಹೇಳಲು ಆ ಮಾತು ಮತ್ತೆ ಮತ್ತೆ ಹೇಳಲು


ಮೌನ

ಮಾತು ಮೌನವಾಗಿದ್ದು
ಏನೊಂದು ಕೇಳಲೊಲ್ಲದು
ಮಾತು ಹೇಳುವಾಗ
ಕೇಳಿದ್ದು ಹೇಳಲ್ಲೊಲ್ಲದು ಮತ್ತದೆ ಮೌನ


ಪ್ರಾಣ

ಕಣ್ಣು ಅರಿಯದಿದ್ದರೂ
ಕರುಳು ಅರಿಯುತ್ತೆ
ಹೌದು…!
ತಾಯಿ ಗರ್ಭದಲ್ಲಿ ಪ್ರಾಣ ಪ್ರತಿಷ್ಠಾಪನ ಆಗಿರುತ್ತೆ.


ವಿನಾಕಾರಣ

ಕಂಡಿದ್ದು
ಬೇಕು
ಹೇಗಾದರೂ
ಇರಲಿ
ಏನಾದರೂ
ಆಗಲಿ
ವಿನಾಕಾರಣ
ಇಲ್ಲದ ಜಂಜಾಟಕ್ಕೆ
ಸಂಕಟ ಬಂದಾಗ ವೆಂಕಟರಮಣ.


ತೈಲ

ಎಂದಿನಂತೆ
ಏರಿಕೆ
ಪೆಟ್ರೋಲ್
ಡಿಸೇಲ್
ಆದ್ರೂ
ದಿನ ದಿನಕ್ಕೆ
ಖಾಲಿ
ಫುಲ್
ಸೇಲ್.


ಇರಲಿ ಬಿಡಪ್ಪ

ಏರಿಕೆಯ
ಬಿಸಿ
ತಟ್ಟಿದೆ
ಇರಲಿ
ಬಿಡಪ್ಪ
ದಿನಾ
ಇದ್ದದ್ದೆ
ಟ್ಯಾಂಕ್
ತುಂಬಿಸಿ
ಬಿಡಪ್ಪಾ


ಖಾಲಿ

ಹೌದು ಹೌದು
ಸಾಕಾಯ್ತು
ಹೇಳಿದ್ದೆ ಹೇಳಿದ್ದು
ರೀ ರೇಷನ್ ಖಾಲಿಯಾಗಿದೆ
ಹೌದು..! ಹೌದು..!
ನಾ ಯಾರಿಗೆ ಹೇಳಲಿ
ಜೇಬು ಖಾಲಿಯಾಗಿದ್ದು.


ಖರೆ

ಕರೆ ಬಂತು
ಕನಸ್ಸಿನಲ್ಲಿ
ಖರೆ ಅಂತು
ಮನಸ್ಸಿನಲ್ಲಿ
ಎದ್ದು ಕೂತೆ
ಹಾಸಿಗೆಯಲ್ಲಿ
ನಿದ್ದೆ ಹೋಯ್ತು
ರಾತ್ರಿಯಲ್ಲಿ.


ಗೋಳು

ನಿತ್ಯ ಅದೆ
ಗೋಳು
ಹೌದು
ಅದಕ್ಕೆ ಬಾಳು
ಕೂತು ಅಳು
ಕೇಳ್ತಾರ ಯಾರು
ದಿನಾ ಇದ್ದದ್ದೆ
ಏನು ಹೇಳು
ಅಲ್ಲ ಹೇಳು
ಮತ್ತೇನು ಹೇಳು
ಏನಿಲ್ಲ ಹೇಳು
ಯಾಕೆ ಹೇಳು
ಹೇಗೆ ಹೇಳು
ಹೌದಲ್ಲ
ಇನ್ನೊಂದು ಹೇಳು
ಹೀಗೆ ಬದುಕು
ಮತ್ತ್ಯಾಕೆ ಅಂತಿದಿ
ಇದೆ ಗೋಳು.


ಗಂಡ ಹೆಂಡತಿ ಮಕ್ಕಳು

ಗಂಡನಿಗೆ ಗಂಡು ಬೇಕು
ಹೆಂಡತಿಗೆ ಹೆಣ್ಣು ಬೇಕು
ಇಬ್ಬರ ನಡುವೆ ಮಕ್ಕಳು ಬೇಕು
ಹುಟ್ಟಿದ ಮೇಲೆ ಯಾರ ಗೆಲುವು ಯಾರ ಸೋಲು
ಪೈಪೋಟಿ ಇಬ್ಬರ ನಡುವೆ
ಮಕ್ಕಳೆ ದೇವರು ಅರಿತಿರಬೇಕು.
ಗಂಡಾಗಲಿ ಹೆಣ್ಣಾಗಲಿ
ಬಂದದ್ದು ಪಡೆಯಬೇಕು
ಹೆಣ್ಣಾದರೆ ಆರತಿ ಗಂಡಾದರೆ ಕೀರ್ತಿ
ವಿಖ್ಯಾತಿ ಆಗಬೇಕು
ನಮ್ಮ ಆಶಯ ಇದಾಗಿರಬೇಕು.


ಶ್ರೀಕಾಂತಯ್ಯ ಮಠ

RELATED ARTICLES

Most Popular

error: Content is protected !!
Join WhatsApp Group