Homeಸುದ್ದಿಗಳುದಿ.ಮನಗೂಳಿಯವರಿಗೆ ಜೆಡಿಎಸ್ ಎಂದೂ ದ್ರೋಹ ಬಗೆದಿಲ್ಲ - ಎಚ್ ಡಿ ದೇವೇಗೌಡ

ದಿ.ಮನಗೂಳಿಯವರಿಗೆ ಜೆಡಿಎಸ್ ಎಂದೂ ದ್ರೋಹ ಬಗೆದಿಲ್ಲ – ಎಚ್ ಡಿ ದೇವೇಗೌಡ

ಸಿಂದಗಿ: ದಿ.ಎಂ.ಸಿ.ಮನಗೂಳಿ ಅವರು ನನ್ನ ಒಡನಾಡಿ ಅವರು ಪಕ್ಷಕ್ಕೆ ಸೇರಿದಾಗಿನಿಂದ ಅವರ ಉಸಿರು ಇರುವವರೆಗೂ ಮಂತ್ರಿ ಮಾಡಿದ್ದೇನೆ ಅವರಿಗೆ ದ್ರೋಹ ಬಗೆಯಲು ಹೇಗೆ ಸಾಧ್ಯ. ಅವರ ಪುತ್ರರು ಜೆಡಿಎಸ್ ಪಕ್ಷದವರ ಮೇಲೆ ಆಪಾದನೆ ಮಾಡುತ್ತಿರುವುದು ಸರಿಯೇ ಅವರಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮನಗೂಳಿ ಮನೆತನಕ್ಕೆ ಚಾಟಿ ಬೀಸಿದರು.

ಪಟ್ಟಣದ ದಿ.ಐ.ಬಿ. ಅಂಗಡಿ ಮಂಜೀಲ್‍ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರ ಜೊತೆ ಒಡನಾಟ ಹಾಗಿತ್ತು ಅಂತೆಯೇ ಅವರ ಉಸಿರು ಇರುವವರೆಗೂ ಜೆಡಿಎಸ್ ಪಕ್ಷವನ್ನು ಬಿಟ್ಟಿಲ್ಲ ವಿನಾಕಾರಣ ಎಂ.ಸಿ.ಮನಗೂಳಿ ಅವರ ಮೇಲೆ ನಾನೆಂದು ಆಪಾದನೆ ಮಾಡಲಾರೆ. ಮನಗೂಳಿ ತೀರಿಹೋದಾಗ ನಾನು ದೆಹಲಿಯಲ್ಲಿದ್ದೆ. ಆದರೂ ಕುಮಾರಸ್ವಾಮಿ ಮತ್ತು ರೇವಣ್ಣ ಬಂದು ಹೋಗಿದ್ದಾರೆ. ನಾನು ಬಂದ ನಂತರ ಪಕ್ಷ ವರಿಷ್ಠನಾಗಿ ಅವರ ಒಡನಾಡಿಯಾಗಿ ಕೆಲಸ ಮಾಡಿದ್ದೇವೆ ಎನ್ನುವ ಕಾರಣಕ್ಕೆ ಎಲ್ಲ ಶ್ರದ್ಧಾ ಕಾರ್ಯಗಳನ್ನು ಮಾಡಿದ್ದೇನೆ.

ಈ ಉಪ ಚುನಾವಣೆಗೆ 9 ಜನ ಆಕಾಂಕ್ಷಿಗಳಾಗಿದ್ದರು ಅವರೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಪ್ಪಿಗೆಯ ಮೇರೆಗೆ ಜಾತಿ ಭೇದ ಮಾಡದೇ ಎಲ್ಲ ಸಮುದಾಯಕ್ಕೆ ನ್ಯಾಯ ಕೊಡುವ ನಿಟ್ಟಿನಲ್ಲಿ ಒಬ್ಬ ವಿದ್ಯಾವಂತ ಮುಸ್ಲೀಂ ಮಹಿಳೆಗೆ ಟಿಕೇಟ ನೀಡಲು ನಿರ್ಧರಿಸಲಾಗಿದೆ ಬೇರೆ ಪಕ್ಷಗಳ ಮುಖಂಡರ ಮಾತುಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ ನನಗೆ ಯಾರ ಭಯವೂ ಇಲ್ಲ ಸ್ವತಂತ್ರವಾಗಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ ಅವರು ನಾನು ಯಾರನ್ನು ಟೀಕಿಸಲಾರೆ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲ ಕಾರ್ಯತಂತ್ರಗಳನ್ನು ರೂಪಿಸಿ ಪ್ರಚಾರ ಕಣಕ್ಕೆ ಇಳಿಯುತ್ತೇನೆ. ನಾನು ಈ ಭಾಗದಲ್ಲಿ ಏನು ಮಾಡಿಲ್ಲ ಎನ್ನುವುದನ್ನು ಜನತೆಗೆ ಕೇಳುತ್ತೇನೆ.

ಗುತ್ತಿಬಸವಣ್ಣ ಏತ ನೀರಾವರಿಯಿಂದ ಸಂಪೂರ್ಣ ನೀರಾವರಿ ಮಾಡಿಕೊಟ್ಟು ಈ ಭಾಗದ ರೈತರ ಬಾಳನ್ನು ಹಸನಾಗಿ ಮಾಡಿದ್ದೇನೆ. ಬಿಟ್ಟು ಹೋದ ಚಿಮ್ಮಲಗಿ ಏತನೀರಾವರಿ ಕಾಮಗಾರಿಗೆ ಹಣ ಮಂಜೂರಿಗೆ ಆದೇಶ ನೀಡಿದ್ದೇವೆ ಅದನ್ನು ಇಲ್ಲಿ ಮಾತನಾಡುವುದಿಲ್ಲ ಸಮಯಕ್ಕನುಸಾರವಾಗಿ ನಾನು ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಪ್ರಚಾರ ಸಂದರ್ಭದಲ್ಲಿ ನನ್ನ ಅವಧಿಯಲ್ಲಿನ ಎಲ್ಲ ಸಾಧನೆಗಳನ್ನು ಹಂಚಿಕೊಳ್ಳುವದರ ಮೇಲೆ ಜನ ನಮ್ಮ ಪಕ್ಷಕ್ಕೆ ಆಶೀರ್ವದಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಪುರಸಭೆಗೆ ಜೆಡಿಎಸ್ ಪಕ್ಷದಿಂದ 6 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು ಬೇರೆ ಪಕ್ಷದ ಸದಸ್ಯರ ಬಾಹ್ಯ ಬೆಂಬಲದಿಂದ ಅಧ್ಯಕ್ಷರಾಗಿದ್ದರು. ಅವರು ಜೆಡಿಎಸ್ ಪಕ್ಷವನ್ನು ತೊರೆದು ಏಕಕಾಲಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದು ಹೇಳಿಕೆ ನೀಡಿದ್ದು ಶುದ್ದ ಸುಳ್ಳು 5 ಜನ ಸದಸ್ಯರು ಅವರೇ ಬಹಿರಂಗವಾಗಿ ಹೇಳೀಕೆ ನೀಡಿ ಮಾನ ಮರ್ಯಾದೆ ಇದ್ದರೆ ಜೆಡಿಎಸ್ ಪಕ್ಷದ ಸದಸ್ಯತ್ವಕ್ಕೆ ಹಾಗೂ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಉತ್ತರ ನೀಡಿದ್ದಾರೆ. 5 ಜನ ಸದಸ್ಯರು ಜೆಡಿಎಸ್ ಪಕ್ಷದಲ್ಲಿಯೇ ಇದ್ದಾರೆ. ಪಕ್ಷ ತೊರೆದ ಡಾ ಶಾಂತವೀರ ಮನಗೂಳಿ ಅವರಿಗೆ ಪಕ್ಷದ ವತಿಯಿಂದ ನೊಟೀಸ ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಪಕ್ಷದ ವರಿಷ್ಠರು ಕ್ರಮ ಜರುಗಿಸುತ್ತಾರೆ ಎಂದು ತಿಳಿಸಿದರು.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರಿಗೆ ಜೀವಿತ ಅವಧಿಯವರೆಗೆ ಜೆಡಿಎಸ್ ಪಕ್ಷ ಮಂತ್ರಿಯನ್ನಾಗಿ ಮಾಡಿತ್ತು ಆದರೆ ಅವರ ಮಕ್ಕಳು ಸಹ ಅವರ ಉಸಿರು ಇರುವವರೆಗೂ ಪಕ್ಷವನ್ನು ಬಿಟ್ಟು ಹೋಗಬಾರದಿತ್ತು ಅವರಿಗೆ ಜನರೇ ಉತ್ತರ ನೀಡುತ್ತಾರೆ. ಪಕ್ಷದ ಅಭ್ಯರ್ಥಿ ನಾಜೀಯಾ ಅಂಗಡಿ ಗೆಲ್ಲುವ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ನಾಜೀಯ ಅಂಗಡಿ, ಮಾಜಿ ಸಚಿವ ಬಂಡೇಪ್ಪ ಕಾಶಂಪೂರ, ಬಿ.ಜಿ.ಪಾಟೀಲ ಹಲಸಂಗಿ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಮಂಗಳಾದೇವಿ ಬಿರಾದಾರ, ಕಸ್ತೂರಿಬಾಯಿ ದೊಡಮನಿ, ಗುರುರಾಜ ಪಾಟೀಲ, ಕೇದಾರಲಿಂಗಯ್ಯ ಹಿರೇಮಠ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಸಿದ್ದನಗೌಡ ಪಾಟೀಲ ಖಾನಾಪುರ, ಶಿವಣ್ಣ ಕೊಟಾರಗಸ್ತಿ ಸೇರಿದಂತೆ ಹಲವರು ಇದ್ದರು.

RELATED ARTICLES

Most Popular

error: Content is protected !!
Join WhatsApp Group