ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವು

Must Read

ಬೀದರ – ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ(ಬಿ) ಗ್ರಾಮದಲ್ಲಿ ಬುಧವಾರ ಸೋಯಾ ರಾಶಿ ಮಾಡುವ ಸಂದರ್ಭದಲ್ಲಿ, ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.

ವರವಟ್ಟಿ (ಬಿ) ಗ್ರಾಮದ ರೈತ ಮಹಿಳೆಯೊಬ್ಬರು ತನ್ನ ಎರಡು ಎಕರೆ ಹೊಲದಲ್ಲಿ ಬೆಳೆದ ಸೊಯಾ ರಾಶಿಯನ್ನು ಯಂತ್ರಕ್ಕೆ ಹಾಕುವ ಸಂದರ್ಭದಲ್ಲಿ ಅವಳ ಸೀರೆ ಸೆರಗು ಜೊತೆಗೆ ತಲೆಗೆ ಕಟ್ಟಿಕೊಂಡ ಬಟ್ಟೆ ರಾಶಿ ಯಂತ್ರಕ್ಕೆ ಸಿಲುಕಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಗ್ರಾಮದ ಸಂಗೀತಾ ಶ್ರೀಹರಿ ಬಿರಾದಾರ (32) ಮೃತಪಟ್ಟ ರೈತ ಮಹಿಳೆಯಾಗಿದ್ದಾಳೆ.

ಘಟನಾ ಸ್ಥಳಕ್ಕೆ ಉಪ ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಯನ್ನು ವೀಕ್ಷಿಸಲು ಬಂದ ಗ್ರಾಮದ ಹೆಣುಮಕ್ಕಳು ಆಕ್ರಂದನ ಮುಗಿಲು ಮುಟ್ಟಿತ್ತು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group