- Advertisement -
ವೀರ ಮರಣ
ಕಾಗಿ೯ಲ್ ಯುದ್ಧ ಸನ್ನಧ್ಧ ಸೈನಿಕ
ಗಮನಿಸಲಿಲ್ಲ
ಹೊಸ ಸಂಸಾರ
ಪುಟ್ಟ ಹಸುಳೆ
ಎಲ್ಲಕ್ಕಿಂತ ಮಿಗಿಲು
ಭಾರತಾಂಬೆಯ ಸೇವೆ
ಸದೆಬಡಿದ ಶತ್ರುಗಳ
ಹಿಂದಿನಿಂದ
ಬಡಿಯಿತು ಗುಂಡು
ತಿರುಗಿದ ಗುಂಡಿನ
ಮಳೆಗರೆದ
ಜಯ ಭಾರತ ಮಾತೆಎನುತ
ವೀರಮರಣವನಪ್ಪಿದ
ನಮನ ಒಂದೇ ಸಾಕೇ?
ಪ್ರಾಥಿ೯ಸೋಣ ;
ಅವನ ಚಿತೆಯ
ಭಸ್ಮದ ಕಣಕಣದಿ
ಹುಟ್ಟಿ ಬರಬೇಕು
ತೋರಿ ವಿರಾಟ್ ರೂಪ
- Advertisement -
ಮತ್ತೆ ಓಟ ಕಾಗಿ೯ಲ್ ಕಡೆಗೆ
ಶತ್ರುಗಳ ಮಾರಣ ಹೋಮಕೆ.
ಜಯಹಿಂದ ಜೈಭಾರತಾಂಬೆ.
ರಾಧಾಶಾಮರಾವ