ಬಸವಕಲ್ಯಾಣ ಶಾಸಕರ ವಿರುದ್ಧ ಆನಂದ ದೇವಪ್ಪ ಆಕ್ರೋಶ

Must Read

ಬೀದರ – ಬಸವಕಲ್ಯಾಣ ತಾಲೂಕಿನಲ್ಲಿ ಮಳೆ ಬಿದ್ದು ಸಾವಿರಾರು ಹೆಕ್ಟೇರ ಹೊಲ ನೀರು ಪಾಲಾಗಿದ್ದು ಇನ್ನೊಂದು ಕಡೆ ಮಳೆಯಿಂದ ಕೆಲವು ಗ್ರಾಮಗಳ ರಸ್ತೆ ಹದಗೆಟ್ಟು ಹೋಗಿವೆ.ಬಸವಕಲ್ಯಾಣ ಶಾಸಕರು ಹಳ್ಳಿಗಳಲ್ಲಿ ಪ್ರವಾಸ ಮಾಡಿ ರೈತರ ರಸ್ತೆ ಸಮಸ್ಯೆ ಬಗೆಹರಿಸಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ನಾಯಕ ಆನಂದ ದೇವಪ್ಪ ಆಗ್ರಹಿಸಿದರು.

ಬಸವಕಲ್ಯಾಣ ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಮುಚಲಂಬ ಕಾದೇಪುರ್ ರಸ್ತೆ ಕೊಚ್ಚಿಹೋಗಿದ್ದು ಎರಡೂ ಗ್ರಾಮದ ರೈತರಿಗೆ ಹಾಗೂ ಜನರಿಗೆ ಓಡಾಡಲು ಹಾಗೂ ಹೊಲ ಗದ್ದೆಗಳಿಗೆ ಹೋಗಲು ತೊಂದರೆಯಾಗುತ್ತಿದ್ದು ಶೀಘ್ರವೇ ರಸ್ತೆ ಕಾಮಗಾರಿ ಕೈಗೊಳ್ಳಬೇಕೆಂದು ಎಐಸಿಸಿ ಸದಸ್ಯ ಆನಂದ್ ದೇವಪ್ಪ ಬಸವಕಲ್ಯಾಣ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹ ಮಾಡಿದರು.

ಇಂದು ಸ್ಥಳಕ್ಕೆ ಹಲವಾರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರೊಂದಿಗೆ ಭೆಟ್ಟಿ ನೀಡಿದ ಅವರು ಬಸವಕಲ್ಯಾಣ ಕ್ಷೇತ್ರ ದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರ ಮಾತಿನಲ್ಲಿ ಜನರನ್ನು ಮರುಳು ಮಾಡುವುದರಲ್ಲಿ ನಿಪುಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾದ ಅರ್ಜುನ್ ಕನಕ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಶಿಕಾಂತ ಗುರನ್ನ ,ರಾಜ್ಕುಮಾರ ಹೋಳ್ಕಡೇ, ಗ್ರಾಮ್ ಪಂಚಾಯತ್ ಸದಸ್ಯರಾದ ಶಿವು ಅಲ್ಲಾಪುರೇ,ಸಿದ್ದು ಪಾಟೀಲ್,ಮಲ್ಲು ದೇವಪ್ಪ,ವಿಕಾಸ್ ಹಾವಗೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group