ಹಾನಗಲ್: ಐತಿಹಾಸಿಕವಾಗಿ ಹಾಗೂ ಪಾರಂಪರ್ಯವಾಗಿ ತನ್ನದೇ ಆದ ಇತಿಹಾಸ ಹೊಂದಿದ ನಗರ ಹಾನಗಲ್. ಇಲ್ಲಿ ಇತ್ತೀಚೆಗೆ ನಡೆದ ೮೪ನೇ ನಾಡ ಹಬ್ಬದ ಎರಡನೇ ಗೋಷ್ಠಿಯನ್ನು ಶ್ರೀಮತಿ ಶಿವಗಂಗಕ್ಕ ಪಟ್ಟಣ ಉದ್ಘಾಟಿಸಿ, ಮಹಿಳೆಯರು ಸ್ವಾವಲಂಬನೆಯ ದೃಷ್ಟಿಕೋನವನ್ನು ಹೊಂದಿರುವ ಜವಾಬ್ದಾರಿಯುತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾನಗಲ್ಲಿನ ಹಿರಿಯ ಕವಯಿತ್ರಿ ಶ್ರೀಮತಿ ಪಾರ್ವತಿ ಕಾಶೀಕರ್ ಮಾತನಾಡಿ, ಮಹಿಳೆ ತ್ಯಾಗಮಯಿ, ಮಮತಾಮಯಿ ಜೊತೆಗೆ ದುರ್ಗಿಯ ಅವತಾರ ಕೂಡ ಹೌದು.ಸಾಮಾಜಿಕವಾಗಿ ಸಂಸಾರವನ್ನು ಸರಿದೂಗಿಸಲು ಅವಳ ಶ್ರಮ ಅಪಾರ ಎಂದರು.
ಇದೇ ಗೋಷ್ಠಿಯಲ್ಲಿ ಸಾಹಿತಿ ಶ್ರೀಮತಿ ಯಮುನಾ ಕೋಣೆಸರ ಭಾರತೀಯ ಮಹಿಳೆ ಮತ್ತು ಸಂಸ್ಕ್ರತಿ ಕುರಿತು ಉಪನ್ಯಾಸ ನೀಡಿದರು.
ಭಾರತೀಯ ಪರಂಪರೆ ಮತ್ತು ಮಹಿಳೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.ಮತ್ತೊಬ್ಬ ಉಪನ್ಯಾಸಕಿ ಶ್ರೀಮತಿ ದೀಪಾ ಗೋನಾಳ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಮಹಿಳೆಯರು ಯಾವ ಸ್ಥಾನದಲ್ಲಿದ್ದರೆಂದು ಮಹಿಳಾ ಸಾಧಕಿಯರ ಮೇಲೆ ಬೆಳಕು ಚೆಲ್ಲಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಅನಿತಾ ಹೊಸಮನಿ,ಸಿಸ್ಟರ್ ಸೆವ್ರಿನ್ ವೇಗಸ್,ಶ್ರೀಮತಿ ಮಧುಮತಿ ಪೂಜಾರ,ಶ್ರೀಮತಿ ವಿಜಯಲಕ್ಷ್ಮಿ ಗುಡುಗುಡಿ,ಶ್ರೀಮತಿ ಅಕ್ಕಮ್ಮ ಪೂಜಾರ,ಶ್ರೀಮತಿ ಶಾರದಾ ಉದಾಸಿ,ಶ್ರೀಮತಿ ಶಾಂತಕ್ಕ ಹೊಳಲದ,ಶ್ರೀಮತಿ ರಾಜೇಶ್ವರಿ ಕಾಮನ ಹಳ್ಳಿ,ಶ್ರೀಮತಿ ಪುಷ್ಪಾ ಬಸ್ತಿ ಹಾಗೂ ಶ್ರೀಮತಿ ವಾರುಣಿ ದೇಶಪಾಂಡೆ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಎನ್ ಐ ಕೋಮಾರ ಹಾಗೂ ಜಗದೀಶ್ ಮಡಿವಾಳರ ತಂಡಗಳು ಪ್ರಾರ್ಥನೆ ಸಲ್ಲಿಸಿದರು.ಕಾರ್ಯಕ್ರಮದ ಅತಿಥಿಗಳನ್ನು ಶ್ರೀಮತಿ ವೀಣಾ ಗುಡಿ ಸ್ವಾಗತಿಸಿದರು.ನಾಡ ಹಬ್ಬದ ಆಶಯ ನುಡಿಗಳಿಗೆ ಶ್ರೀಮತಿ ಲೀಲಾವತಿ ಗುಡಿ ಧ್ವನಿ ನೀಡಿದರು. ಶ್ರೀಮತಿ ರೇಖಾ ಶೆಟ್ಟರ ನಿರೂಪಿಸಿದರೆ ಶ್ರೀಮತಿ ಅಕ್ಕಮ್ಮ ಸುಗಾವಿ ವಂದಿಸಿದರು.