ಭ್ರಷ್ಟಾಚಾರ ನಿಯಂತ್ರಿಸಲು ಬಿಜೆಪಿಗೆ ಮತ ನೀಡಿ – ಕಾರಜೋಳ

Must Read

ಸಿಂದಗಿ: ರೈತರಿಗಾಗಿ ರೈತ ಮಿತ್ರನಾಗಿ ಕೆಲಸ ಮಾಡಿದ ಮೋದಿ ಸರಕಾರ ರೈತರಿಗಾಗಿ ಕಿಸಾನ ಸಮ್ಮಾನ ಯೋಜನೆ ಮೂಲಕ ಆರು ಸಾವಿರ ರೂ. ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರ ನಿಲ್ಲಿಸಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಕ್ಷೇತ್ರದ ಮೋರಟಗಿ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಧ್ಯವರ್ತಿಗಳ ಸಹಾಯ ವಿಲ್ಲದೆ ನೇರ ಖಾತೆಗೆ ಹಣ ಹಾಕುವ ಮೂಲಕ ರೈತ ಭಾಂದವರಿಗೆ ಸಹಕಾರ ನೀಡಿದ ಮೋದಿ ಸರ್ಕಾರ ಬಿಜೆಪಿ ಸಿದ್ದಾಂತ ಭ್ರಷ್ಟಾಚಾರ ತಡೆದು ಫಲಾಭವಿಗೆ ನೇರ ಮುಟ್ಟಿಸುವ ಕೆಲಸ ಪ್ರಾಮಾಣಿಕ ಕೆಲಸ ಮಾಡಿದೆ. ಆದರೆ ಕಾಂಗ್ರೇಸ್ ಸರಕಾರ ಭ್ರಷ್ಟಾಚಾರ ಹೆಮ್ಮರದಂತೆ ಬೆಳೆಸಿ ಸರಕಾರ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಫಲಾನುಭವಿಗೆ ಕೇವಲ ಹೈದನೈದು ಪೈಸೆ ಮುಟ್ಟುವಂತ ವ್ಯವಸ್ಥೆ ಸೃಷ್ಟಿಸಿದ್ದು ಕಾಂಗ್ರೇಸ ಪಕ್ಷದ ಸಾಧನೆ. ಬಿಜೆಪಿ ಒಂದೆ ಘೋಷವಾಕ್ಯ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಿ ಭವ್ಯ ಭಾರತ ನಿರ್ಮಾಣದ ಕನಸು ನನಸಾಗಿಸುವುದು. ಅಭಿವೃದ್ದಿ ಎಂದರೆ ಬಿಜೆಪಿ ಎಂದ ಅವರು ಈ ಬಾರಿ ಒದಗಿ ಬಂದಿರುವ ಸಿಂದಗಿ ವಿಧಾನ ಸಭೆ ಉಪ ಚುನಾವಣೆಯಲ್ಲಿ ಮುಗ್ದ ಮನಸ್ಸಿನ ಸರಳ ಸ್ವಭಾವದ ರಮೇಶ ಭೂಸನೂರ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ ಎರಡು ಬಾರಿ ಮತ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ಸಿಂದಗಿ ಮತ ಕ್ಷೇತ್ರ ಅಭಿವೃದ್ದಿ ಪಡಿಸಿದ ರಮೇಶ ಭೂಸನೂರ ಅವರ  ಬಿಜೆಪಿ ಕಮಲದ ಗುರ್ತಿಗೆ ಮತಹಾಕುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಬಸಲಿಂಗಪ್ಪ ಸಾಹು ಭೋನಾಳ, ಮಾಜಿ ತಾ.ಪಂ.ಸದಸ್ಯ ಮಡಿವಾಳಪ್ಪ ಭೋನಾಳ, ನಾಗೇಶ ಶಾಬಾದಿ, ನೂರಅಹ್ಮದ ಕಣ್ಣಿ, ಶ್ರೀಮಂತ ಮಳಗಿ, ಪ್ರಧಾನಿ ಮೂಲಿಮನಿ, ರವಿ ಹೋಳಿ, ಹಳ್ಳೇಪ್ಪ ಕೇಂಭಾವಿ, ಅಮ್ಮಣ್ಣ ವಾಲಿಕಾರ, ಶರಣಗೌಡ ಮಾಲಿಪಾಟೀಲ, ಭೂತಾಳಿ ಖಾನಾಪೂರ, ಶ್ರೀಶೈಲ ಕೆರಿಗೊಂಡ, ರಾಜು ಶಿರಶ್ಯಾಡ ಸೇರಿದಂತೆ ಹಲವರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group