100 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಿ ದಾಖಲೆ ಬರೆದ ಭಾರತ

Must Read

ಮೂಡಲಗಿ – ಹೆಮ್ಮೆಯ,ಜನ ಮೆಚ್ಚಿದ ಪ್ರಧಾನ ಮಂತ್ರಿಗಳು ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಬಿಜೆಪಿ ಅರಬಾಂವಿ ಮಂಡಲ ಯುವ ಮೋರ್ಚಾ ವತಿಯಿಂದ ಮೂಡಲಗಿ ಕರುನಾಡು ಸೈನಿಕ ಕೇಂದ್ರದಲ್ಲಿ ಒಂದು ನೂರು ಯುವಕರು 100 ಸಂಖ್ಯೆಯ ಆಕಾರದಲ್ಲಿ ಒಂದೇ ತರದ ಟಿ ಶರ್ಟ್ ಹಾಕಿಕೊಂಡು ವಿಶೇಷವಾಗಿ ಧನ್ಯವಾದ ತಿಳಿಸಿದರು.

ಅರಬಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ, ಬಿಜೆಪಿ ಯುರ್ವಮೋರ್ಚಾ ಪದಾಧಿಕಾರಿಗಳ ಸಂಘಟನೆಯ ಈ ಕಾರ್ಯ ನಿಜವಾಗಲು ಶ್ಲಾಘನೀವಾಗಿದೆ. ಅರಭಾಂವಿ ಶಾಸಕರು ಹಾಗೂ ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.

ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ ಮಾತನಾಡಿ, ವಿಶ್ವದಲ್ಲಿ ಭಾರತ ದೇಶ ದಾಖಲೆ ರೂಪದಲ್ಲಿ ವ್ಯಾಕ್ಸಿನ್ ನೀಡುತ್ತಿದೆ ನರೇಂದ್ರ ಮೋದಿ ಸರ್ಕಾರದ ಸಾಧನೆ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಅರಬಾಂವಿ ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ದುರದುಂಡಿ ಮಾತನಾಡಿ, ದೇಶಕ್ಕೆ ಅಂಟಿದ ಮಹಾಮಾರಿ ಕರೋನಾ ಓಡಿಸಲು ನರೇಂದ್ರ ಮೋದಿಯವರು ವ್ಯಾಕ್ಸಿನ್ ಎಂಬ ರಾಮಬಾಣ ತಯಾರಿಸಿ ಇಡಿ ವಿಶ್ವಕ್ಕೆ ಮಾದರಿ ಆಗಿದ್ದಾರೆ ಎಂದು ನುಡಿದರು. ಯುವಮೋರ್ಚಾ ಅಧ್ಯಕ್ಷ ಪ್ರಮೋದ್ ನುಗ್ಗಾನಟ್ಟಿ , ಕರುನಾಡ ಸೈನಿಕ ಕೆಂದ್ರದ ಅಧ್ಯಕ್ಷೆ ಸವಿತಾ ತುಕ್ಕನ್ನವರ, BJYM ಜಿಲ್ಲಾ ಪದಾಧಿಕಾರಿಗಳು ಗುರು ಹಿರೇಮಠ, ದುಂಡಪ್ಪ ನಂದಗಾವಿ, ಜಿಲ್ಲಾ SC ಮೋರ್ಚಾ ಪ್ರದಾನ ಕಾರ್ಯದರ್ಶಿ ಈರಪ್ಪ ಡವಳೇಶ್ವರ, ಚೇತನ ನಿಶಾನಿಮಠ,BJYM ಮಂಡಲ ಪ್ರಧಾನ ಕಾರ್ಯದರ್ಶಿ ಕೆದಾರಿ ಭಸ್ಮೆ, ಮದನ ದಾನನ್ನವರ, ಸಾವಂತ ಪಟಗುಂದಿ, ಆನಂದ ಮುಡಲಗಿ, ಶ್ರೀಶೈಲ ನಾಂವಿ ಮತ್ತು ಪ್ರಮುಖ ಪದಾಧಿಕಾರಿಗಳು ಕಾರ್ಯಕರ್ತರು ಸಂಘಟಕರು ಉಪಸ್ಥಿತರಿದ್ದರು. ಮಾಜಿ ಸೈನಿಕರಾದ ಶಂಕರ ತುಕ್ಕಣ್ಣವರ ಸ್ವಾಗತಿಸಿ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group