ಮೂಡಲಗಿ: ಪ್ರತಿಯೊಂದು ಜೀವಿಗೆ ಬದುಕಲು ಆಧಾರವಾಗಿರುವುದೆ ಆಹಾರ. ಮಕ್ಕಳ ಆರೋಗ್ಯ ಮತ್ತು ಬದುಕಿನ ಭವಿಷ್ಯದಲ್ಲಿ ನಿಜವಾದ ನಗೆ ಬರುವುದಕ್ಕೆ ಚೈತನ್ಯ ವಸ್ತು ಆಹಾರ. ಬಿಸಿ ಊಟದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಚಿಕ್ಕೋಡಿ ಡಯಟ್ ಪ್ರಾಚಾರ್ಯ ಮೋಹನ ಜೀರಗಾಳ ಹೇಳಿದರು.
ಅವರು ಪಟ್ಟಣದ ಕೆ.ಎಚ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಯಲ್ಲಿ ಸರಕಾರ ಜಾರಿಗೆ ತಂದಿರುವ ಪ್ರಸಕ್ತ ಸಾಲಿನ ಅಕ್ಷರದಾಸೋಹದ ಮದ್ಯಾಹ್ನದ ಬಿಸಿ ಊಟದ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕೆ.ಎಸ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಗೆ ಶೀಘ್ರದಲ್ಲಿಯೇ ಸುಮಾರು 20 ಗಣಕಯಂತ್ರಗಳನ್ನು ನೀಡುವುದಾಗಿ ಹೇಳಿದರು.
ಮೂಡಲಗಿ ತಹಶೀಲ್ದಾರ ಡಿ.ಜೆ.ಮಹಾತ ಮಾತನಾಡಿ, ಸರಕಾರ ಜಾರಿಗೆ ತಂದಿರುವ ಅಕ್ಷರದಾಸೋಹ ಮತ್ತು ಕ್ಷೀರ ಭಾಗ್ಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಭೂದಾನಿ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಕೆ.ಸೋನವಾಲ್ಕರ ವಹಿಸಿದ್ದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಇಒ ಅಜೀತ ಮನ್ನಿಕೇರಿ,ದೈಹಿಕ ಶಿಕ್ಷಣಾಧಿಕಾರಿ ಜುನೇದ ಪಟೇಲ, ಪುರಸಭೆ ಸದಸ್ಯ ಎ.ಐ.ಡಾಂಗೆ, ಶಾಲಾ ಮುಖ್ಯೋಪಾಧ್ಯಾಯ ಎಮ್.ಎಮ್.ದಬಾಡಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಅಲ್ತಾಪ್ ಹವಾಲ್ದಾರ, ಅನ್ವರ ನದಾಫ್, ಪ್ರಕಾಶ ಮುಗಳಖೋಡ ಮತ್ತಿತರರು ಇದ್ದರು. ಶಿಕ್ಷಕ ಎ.ಆರ್.ಕುರಬರ ಸ್ವಾಗತಿಸಿ ನಿರೂಪಿಸಿದರು.