ಸಿದ್ರಾಮಯ್ಯನವರೆ ಕಾಂಗ್ರೆಸ್ ಪಾರ್ಟಿ ಬಿಡ್ರಿ ಇಲ್ಲವಾದರೆ ಪಾರ್ಟಿ ಮುಳುಗುತ್ತದೆ – ಸಿ ಟಿ ರವಿ ಆಕ್ರೋಶ

Must Read

ಸಿಂದಗಿ: ಮುಳುಗುವ ಹಡಗಲ್ಲಿ ಕುಳಿತರೆ ಮುಳುಗ್ತಾರೆ, ಕಾಂಗ್ರೆಸ್ ಒಂದು ಮುಳುಗುವ ಹಡಗು. ಎಲ್ಲರಿಗೂ ಬುದ್ದಿ ಹೇಳುವ ಸಿದ್ದರಾಮಯ್ಯನವರೇ ಮುಳುಗೋಕು ಮುಂಚೆ ಪಾರ್ಟಿ ಬಿಡ್ರಿ. ಪಾರ್ಟಿ ಮುಳುಗುತ್ತೆ, ಬಿಟ್ಟವನು ಉಳ್ಕೊತಾನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಿದ್ರಾಮಯ್ಯ ವಿರುದ್ಧ ಹರಿಹಾಯ್ದರು.

ಪಟ್ಟಣದ ಬಿಜೆಪಿ ಅಭ್ಯರ್ಥಿ ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಒಂದು ಜಮೀನಿನಲ್ಲಿ ಉಳುಮೆ ಮಾಡಲು ಒಂದು ಎತ್ತು ಒಂದು ಕೋಣ ಕಟ್ಟಿದ್ರೆ ಎತ್ತು ಎರೆಗೆ ಕೋಣ ಕೆರೆಗೆ ಎಂದಂತೆ ಕಾಂಗ್ರೆಸ್ ಆಗಿದೆ. ಕೇಂದ್ರದಲ್ಲಿ ರಾಜ್ಯದಲ್ಲಿ ಬಿಜೆಪಿಯ ಎತ್ತು ಇದ್ದ ಹಾಗೆ, ಕಾಂಗ್ರೆಸ್ ಕೋಣ ಕಟ್ಟೋಕೆ ಆಗ್ತದಾ? ಜೆಡಿಎಸ್ ಹಸು ಕಟ್ಟೋಕೆ ಆಗ್ತದಾ? ಕೋಣ ಹಸುವಿನ ಬದಲು ಸಿಂದಗಿಯಲ್ಲಿ ಬಿಜೆಪಿಯ ಎತ್ತು ಕಟ್ಟಿ ಎಂದರು.

ಕಾಂಗ್ರೆಸ್ ನಾಯಕರು ವಾಕ್ಸಿನ್ ಮೋಸ ಎಂದು ಹೇಳಿದವರು ಸರದಿ ಸಾಲಿನಲ್ಲಿ ನಿಂತು ವ್ಯಾಕ್ಸಿನ್ ಹಾಕಿಕೊಂಡಿದ್ದಾರೆ. ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಮೂಲಕ ಬಡ ರೈತರಿಗೆ ಪಿಂಚಣಿ ಸೌಲಭ್ಯ ನೀಡಿದ್ದು ಅಪರಾಧವೇ, ಭಯೋತ್ಪಾದಕರನ್ನು ಸಾಕುವುದೇ ಕಾಂಗ್ರೆಸ್‍ನ ಚಾಳಿ. ಸೈನಿಕರು ಸತ್ತರೇ ಇವರಿಗೆ ಕರುಣೆಯಿಲ್ಲ. ರಾಜಸ್ತಾನ, ಪಂಜಾಬನಲ್ಲಿ ಆದಾನಿ, ಅಂಬಾನಿ ಕಂಪನಿಗಳಿಗೆ ಮೊದಲಿನಿಂದಲೂ ಏಜನ್ಸಿ ಕೊಟ್ಟಿದ್ದು ಕಾಂಗ್ರೆಸ್‍ನವರೆ ನಾವು ಈಗ ಬಂದಿದ್ದು ಅವರಿಗೆ ಮುಂದುವರೆಸಿದ್ದೇವೆ. ಕಾಂಗ್ರೆಸ್ ಕೇಂದ್ರ ಹಾಗೂ ಎಲ್ಲ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಸಾಲು ಸಾಲು ನಿರುದ್ಯೋಗಿಗಳಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಬಯಲು ಮುಕ್ತ ಶೌಚಾಲಯ:

ಮೋದೀಜಿ ಅವರು ಬಯಲು ಮುಕ್ತ ಶೌಚಾಲಯ ಭಾರತ ಮಾಡುವ ಕನಸ್ಸು ಕಂಡಂತೆ ರಾಜ್ಯದಲ್ಲಿ 13ಕೋಟಿ ಶೌಚಾಲಯಗಳು ನಿರ್ಮಾಣವಾಗಿವೆ ಎಂದು ವರದಿ ನೀಡಿದೆ ಆದರೆ ಗ್ರಾಪಂ ಅಧಿಕಾರಿಗಳ ಯಡವಟ್ಟಿನಿಂದ ಇನ್ನೂ ಕೆಲವು ಗ್ರಾಮಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಿಲ್ಲ. ಅದು ಮೋದಿಯವರ ಯೋಜನೆ ಅದನ್ನು ಎಲ್ಲರೂ ಮನಸ್ಥಿತಿಯಲ್ಲಿ ಪರಿವರ್ತನೆಯಾದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಒಂದೇ ಚಡ್ಡಿ ಒಳಗಿನ ದೋಸ್ತರು:

ಜಮ್ಮೀರಹ್ಮದ, ಕುಮಾರಸ್ವಾಮಿ, ಸಿದ್ದರಾಮಯ್ಯನವರು ಒಂದೇ ಚಡ್ಡಿಯೊಳಗಿನ ದೋಸ್ತರು ಅವರು ಯಾವ ಸಂದರ್ಭದಲ್ಲಿ ಎಲ್ಲಿ ಇರುತ್ತಾರೆ ಅವರಿಗೆ ಗೊತ್ತಿಲ್ಲ. ಒಬ್ಬ ರಾಜಕಾರಣಿಯ ಹಣ 5 ವರ್ಷದಲ್ಲಿ ರೂ. 380 ಕೋಟಿ ಹೆಚ್ಚಾಗಿದೆ. ಆದರೆ ಇಡೀ ದೇಶಕ್ಕೆ ಕರೋನಾ ಆವರಿಸಿ ಉತ್ಪಾದನೆಯ ಕೊರತೆಯಿಂದ ಈ ದೇಶದಲ್ಲಿ ಬೆಲೆ ಏರಿಕೆ 30ರಷ್ಟು ಆಗಿದೆ ಅದು ದೊಡ್ಡದೋ ಇವರದ್ದು ದೊಡ್ಡದೋ ರಾಜ್ಯದ ಜನತೆ ಎಲ್ಲವನ್ನು ಊಹಿಸುತ್ತಿದ್ದಾರೆ ಎಂದು ಬ್ಯಾಟ್ ಬೀಸಿದರು.

ಪತ್ರಕರ್ತರಿಗೆ ಅವಮಾನ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಕುಳಿತುಕೊಳ್ಳಲು ಕುರ್ಚಿಯಿಲ್ಲದೆ ಅವಮಾನಿಸಿ ಅಗೌರವ ತೋರಿದ್ದಾರೆ. ಇದು ಶಿಸ್ತಿನ ಸಿದ್ದಾಂತದ ಪಕ್ಷ ಎನ್ನುವುದು ಎತ್ತಿ ತೋರಿಸಿದಂತಾಗಿದೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಂಎಲ್ಸಿ ಅರುಣ ಶಹಾಪುರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಅಪ್ಪುಗೌಡ ಪಾಟೀಲ ಮನಗೂಳಿ, ರಾಜಶೇಖರ ಪೂಜಾರಿ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸುದರ್ಶನ ಜಿಂಗಾಣಿ ಸೇರಿದಂತೆ ಹಲವರು ಇದ್ದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group