ಬೆಳಗಾವಿ: ರಾಜ್ಯ ಸಂಘದ ನಿರ್ದೇಶನದಂತೆ ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಜಿಲ್ಲಾಧ್ಯಕ್ಷರಾದ ಜಯಕುಮಾರ ಹೆಬಳಿಯವರ ನೇತೃತ್ವದಲ್ಲಿ ಉಪನಿರ್ದೇಶಕರು ಎ.ಬಿ. ಪುಂಡಲೀಕ ಅವರ ಮೂಲಕ ಶಿಕ್ಷಣ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು 100 ಮೀಟರ್ ಪಾದಯಾತ್ರೆಯಲ್ಲಿ ಬೇಡಿಕೆ ಗಳ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಗೋಣಿ ,ಜಿಲ್ಲಾ ಪದಾಧಿಕಾರಿಗಳು,ಜಿಲ್ಲಾ ನಾಮನಿರ್ದೇಶನ ಪದಾಧಿಕಾರಿಗಳು, ಏಳು ತಾಲ್ಲೂಕಿನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಚುನಾಯಿತ ಪ್ರತಿನಿಧಿಗಳು ಹಾಗೂ ನಾಮ ನಿರ್ದೇಶನ ಸದಸ್ಯರು ಹಾಗೂ ಶಿಕ್ಷಕರು ಹಾಜರಿದ್ದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ರಾಜ್ಯದಾದ್ಯಂತ ಈ ಮನವಿ ಅರ್ಪಣೆ ಜರುಗಿದ್ದು ಹೋರಾಟ ವಿವಿಧ ಹಂತಗಳಲ್ಲಿ ಜರುಗುತ್ತಿದ್ದು ಸದ್ಯ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಕ್ಕಳ ಬೋಧನೆಯಲ್ಲಿ ತೊಡಗಿರುವ ಶಿಕ್ಷಕ ಸಮುದಾಯ ಮುಂಬರುವ ದಿನಗಳಲ್ಲಿ ಹೋರಾಟ ವಿವಿಧ ರೀತಿಯಲ್ಲಿ ಮುಂದುವರೆಯುತ್ತದೆ ಎಂದು ಜಯಕುಮಾರ ಹೆಬಳಿ ಈ ಸಂದರ್ಭದಲ್ಲಿ ಹೋರಾಟ ದ ರೂಪರೇಷೆಗಳನ್ನು ತಿಳಿಸಿದರು.