ಪುನೀತ್ ರಾಜಕುಮಾರ ನಿಧನಕ್ಕೆ ಸಂಸದ ಕಡಾಡಿ ಸಂತಾಪ

Must Read

ಮೂಡಲಗಿ: ಓರ್ವ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಉತ್ತಮ ನಟನನ್ನು ನಾಡು ಕಳೆದುಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಸಂತಾಪ ವ್ಯಕ್ತಪಡಿಸಿದರು.

ಶುಕ್ರವಾರ ಅ.29 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪುನೀತ ರಾಜಕುಮಾರ ಬಾಲಪ್ರತಿಭೆಯಾಗಿ ಗುರುತಿಸಿಕೊಂಡು ಕನ್ನಡ ನಾಡು, ನುಡಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅದ್ಭುತವಾದ ನಟ ಬಾರದ ಲೋಕಕ್ಕೆ ಹೋಗಿರುವುದು ನೋವಿನ ಸಂಗತಿ ಅವರ ಹೆಸರು ಚಿರಸ್ಥಾಯಿ ಆಗಿದೆ ಎಂದರು.

ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ, ಆ ಎರಡು ಕಣ್ಣುಗಳು ಬೇರೆಯವರ ಅಂಧಕಾರವನ್ನು ಹೋಗಲಾಡಿಸಿ ಪ್ರಪಂಚ ನೋಡುವ ಭಾಗ್ಯವನ್ನು ಕರುಣಿಸಿದ ನಟ ಪುನಿತ್ ರಾಜ್‌ಕುಮಾರ್ ಅವರಿಗೆ ಹೃದಯಪೂರ್ವಕ ನಮನಗಳು ಎಂದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group