ರಮೇಶ ಭೂಸನೂರ ಗೆಲುವಿಗೆ ತಳವಾರ ಸಮುದಾಯ ಕಾರಣ

Must Read

ಸಿಂದಗಿ: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ರಮೇಶ ಭೂಸನೂರವರು ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ತಳವಾರ ಪರಿವಾರ ಸಮಾಜ ಪ್ರಮುಖ ಪಾತ್ರ ವಹಿಸಿದೆಯೆಂದು ಹೇಳಿ ತಳವಾರ ಪರಿವಾರ ಸಮಾಜದ ಜಿಲ್ಲಾಧ್ಯಕ್ಷರಾದ  ಶರಣಪ್ಪ ಕಣಮೇಶ್ವರ ಅಭಿನಂದನೆ ಸಲ್ಲಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಮಾಜದ ಮುಖಂಡರು, ಪ್ರಧಾನಿ ನರೇಂದ್ರ ಮೋದಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಜೊತೆಗೆ ಎಲ್ಲಾ ಮಂತ್ರಿಮಂಡಲದ ಸಚಿವರಿಗೆ, ಶಾಸಕರಿಗೆ, ಎಂಎಲ್ಸಿ ಗಳಿಗೆ ಹಾಗೂ ತಳವಾರ ಸಮಾಜದ ಎಲ್ಲಾ ಮುಖಂಡರಿಗೆ, ತಳವಾರ ಸಮಾಜದ ಎಸ್‍ಟಿ ಸರ್ಟಿಫಿಕೇಟ್ ನೀಡುವ ನಿರ್ಣಯಕ್ಕೆ ಸರಕಾರ ತೆಗೆದುಕೊಂಡ ನಿರ್ಧಾರಕ್ಕೆ ಸಮಾಜದ 30 ಸಾವಿರ ಮತದಾರರು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿಯಾಗಿ ಗೆಲುವಿನಲ್ಲಿ ಸಹಕರಿಸಿದ್ದಕ್ಕಾಗಿ ಸಮಾಜದ ಮತಬಾಂಧವರಿಗೆ ವಿಶೇಷವಾಗಿ ಅಭಿನಂದನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ  ಗುರು ತಳವಾರ, ಶ್ರೀಶೈಲ ಬುಯ್ಯಾರ,  ಮಹಾಂತೇಶ ನಾಯ್ಕಡಿ, ಈರಣ್ಣ ಕುರಿ, ಭೀಮರಾಯ ಸುಣಗಾರ,  ಚಂದ್ರಶೇಖರ ಕೋಟಾರಗಸ್ತಿ,  ಸಂಗು ಬಿರಾದಾರ,  ಶಿವು ಗುರಕಾರ,  ವಿಠಲ ಯರಗಲ್,  ರವಿ ವಾಲಿಕಾರ ಸೇರಿದಂತೆ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group