ಸವದತ್ತಿ: ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.4 ರಲ್ಲಿ ಮೌಲನಾ ಅಬುಲ್ ಕಲಾಮ ಆಜಾದ ರವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಹಾಗೂ ವೀರವನಿತೆ ಒನಕೆ ಓಬವ್ವ ರ ಜನ್ಮದಿನವನ್ನೂ ಆಚರಿಸಲಾಯಿತು.
ಶಾಲಾ ಮಕ್ಕಳಿಗೆ ಭಾರತದ ಮೊದಲ ಶಿಕ್ಷಣ ಮಂತ್ರಿ ಹಾಗೂ ಉರ್ದು ಕವಿಯೂ ಆದ ಮೌಲಾನಾ ಅಬುಲ್ ಕಲಾಮ ಆಜಾದವರ ಬಗ್ಗೆ ಪ್ರಧಾನ ಗುರುಮಾತೆಯರಾದ ಶ್ರೀಮತಿ.ಎಲ್.ಎನ್.ಗಾಣಿಗೇರ ತಿಳಿಸಿದರು.
ವೀರವನಿತೆ ಒನಕೆ ಓಬವ್ವಳ ರೋಚಕ ಜೀವನದ ಬಗ್ಗೆ ಸಂಸ್ಕೃತ ಶಾಲೆಯ ಪ್ರಧಾನಗುರುಗಳಾದ ಶ್ರೀ. ಬಿ.ಎನ್. ಹೊಸೂರ ಮಾತನಾಡಿದರು.
ನಾಡಿನ ವೀರವನಿತೆಯರ ಬಗ್ಗೆ 7 ನೇ ವರ್ಗದ ಮಗು ಜಯತೀರ್ಥ ಹೊಸಮನಿ ಮಾತನಾಡಿದನು.
ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರ್,ಗುರುಮಾತೆಯರಾದ ಶ್ರೀಮತಿ. ಆರ್.ಹೆಚ್. ನಾಗನೂರ, ಶ್ರೀಮತಿ. ಡಿ.ಪಿ.ಪತ್ತಾರ, ಶ್ರೀಮತಿ. ಜಿ.ಎಸ್.ಹೊಸಮನಿ ಶ್ರೀಮತಿ. ವಿ.ವಿ.ಸುಬೇದಾರ, ಶ್ರೀಮತಿ. ಎಸ್.ಎಮ್. ಮಲ್ಲೂರ, ಜಗದೀಶ ಗೊರಾಬಾಳ ನಿರೂಪಿಸಿದರು. ಎಸ್.ಎಮ್.ದೀಕ್ಷಿತ್ ವಂದಿಸಿದರು.