ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ-ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

ಗೋಕಾಕ: ಡಿಸೆಂಬರ್ 10 ರಂದು ಬೆಳಗಾವಿ ಜಿಲ್ಲೆಯ 2 ಸ್ಥಾನಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಜೊತೆಗೆ ನಮ್ಮ ಸಂಘಟನೆಗೆ ಸೇರಿರುವ ಅಭ್ಯರ್ಥಿಯನ್ನು ಬೆಂಬಲಿಸಿ ಅವರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಕೆಎಮ್‍ಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.

ಶುಕ್ರವಾರ ಸಂಜೆ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಿಗಳ ಸದಸ್ಯರು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಈಗಿರುವ ಮಾಹಿತಿಯಂತೆ ಬಿಜೆಪಿಯಿಂದ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡಬಹುದೆಂಬ ಲೆಕ್ಕಾಚಾರವಿದೆ. ಎಲ್ಲ ಬಿಜೆಪಿ ಮುಖಂಡರು ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜನಪರ ಹಾಗೂ ರೈತಪರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ಧವಿದೆ. ಪಂಚಾಯತ ರಾಜ್‍ಗೆ ಹೆಚ್ಚಿನ ಶಕ್ತಿಯನ್ನು ತುಂಬಲು ಈ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ನಮ್ಮ ಸಂಘಟನೆಗೆ ಸೇರಿರುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅರಭಾವಿ ಹಾಗೂ ಗೋಕಾಕ ಮತಕ್ಷೇತ್ರಗಳಲ್ಲಿ ಅಂದಾಜು 1200 ಅಧಿಕ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿದ್ದಾರೆ. ಕಳೆದ ಎರಡು ದಶಕಗಳಿಂದ ನಮಗೆ ಬೆಂಬಲಿಸಿ ಆಶೀರ್ವದಿಸುತ್ತಾ ಬಂದಿರುವ ತಮಗೆ ನಾವು ಋಣಿಯಾಗಿದ್ದು, ದೇವರ ದಯೆಯಿಂದ ನಮ್ಮ ಸಂಘಟನೆಗೆ ಸೇರಿರುವ ಇಬ್ಬರು ಅಭ್ಯರ್ಥಿಗಳು ಗೆಲ್ಲಲಿ. ನಮ್ಮ ಸಂಘಟನೆಗೆ ಹೆಚ್ಚಿನ ಶಕ್ತಿ ನೀಡಲಿ ಎಂದ ಅವರು, ಎಲ್ಲರೂ ಸಂಘಟಿತರಾಗಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಮುಖಂಡರಾದ ರಾಜೇಂದ್ರ ಸಣ್ಣಕ್ಕಿ, ಬಸಗೌಡ ಪಾಟೀಲ(ಮೆಳವಂಕಿ), ರಾಮಣ್ಣ ಮಹಾರೆಡ್ಡಿ, ಎಮ್.ಆರ್.ಭೋವಿ, ಹಣಮಂತ ತೇರದಾಳ, ಗೋವಿಂದ ಕೊಪ್ಪದ, ವಿಠ್ಠಲ ಪಾಟೀಲ, ಮುತ್ತೆಪ್ಪ ಕುಳ್ಳೂರ, ರವೀಂದ್ರ ಪರುಶೆಟ್ಟಿ, ಲಕ್ಷ್ಮಣ ಮುಸಗುಪ್ಪಿ, ಆನಂದ ಮೂಡಲಗಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Latest News

ಸತ್ಯ ಹೇಳಿದ ನಿತ್ಯ ಸ್ಮರಣೀಯ ಡಾ ಎಂ ಎಂ ಕಲಬುರ್ಗಿ ಗುರುಗಳು

ಕನ್ನಡ ಸಾರಸ್ವತಲೋಕದ ಬಹುದೊಡ್ಡ ಕೊಡುಗೆ, ಆಸ್ತಿ ವಿಮರ್ಶಕ ಸಂಶೋಧಕ ದೇಸಿ ಸಾಹಿತಿ ಚಿಂತಕ ಡಾ ಎಂ ಎಂ ಕಲಬುರ್ಗಿ ಸರ್ ಅವರು ಬದುಕಿನ ಕೊನೆವರೆಗೂ ಸತ್ಯಕ್ಕೆ...

More Articles Like This

error: Content is protected !!
Join WhatsApp Group