ಸಿಂದಗಿ – ಸತತ 2 ವರ್ಷಗಳಿಂದ ಕರೋನಾ ಆವರಿಸಿ ರಾಜ್ಯದಲ್ಲಿರುವ ಎಲ್ಲ ಮಠಮಾನ್ಯಗಳು ಬೀಗ ಹಾಕಲ್ಪಟ್ಟಿದ್ದವು ಇದರಿಂದ ಭಕ್ತರಿಗೆ ಪೂಜ್ಯರ ದರ್ಶನ ಭಾಗ್ಯ ದೊರೆತಿಲ್ಲ. ಆ ಕಾರಣಕ್ಕೆ ಪೂಜ್ಯಶ್ರೀ ಚನ್ನವೀರ ಸ್ವಾಮಿಜಿ ಪ್ರತಿಷ್ಠಾನ ಸಾರಂಗಮಠದ ವತಿಯಿಂದ ಲಿಂ. ಪೂಜ್ಯಶ್ರೀ ಚನ್ನವೀರ ಶಿವಾಚಾರ್ಯರ 128ನೇ ಜನ್ಮದಿನದ ನಿಮಿತ್ತ ಯಡಿಯೂರ ತೋಂಟದ ಶ್ರೀ ಸಿದ್ದಲಿಂಗೇಶ್ವರರ ಪುರಾಣ ಪ್ರವಚನವು ನ. 15ರಿಂದ ಡಿ.6ರ ವರೆಗೆ ಸಂಜೆ 6.30 ಗಂಟೆಗೆ ನಡೆಯಲಿದ್ದು ಅಲ್ಲದೆ ನ.18 ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ನೇತ್ರ ತಪಾಸಣಾ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನ. 15ರಂದು ಪ್ರಾರಂಭಗೊಳ್ಳುವ ಪುರಾಣ ಪ್ರವಚನವನ್ನು ಜೇರಟಗಿ ವಿರಕ್ತಮಠದ ಮಹಂತ ಮಹಾಸ್ವಾಮಿಗಳು ನಡೆಸಿಕೊಡುವವರು. ಕನ್ನೋಳ್ಳಿ ಸಿದ್ದಲಿಂಗ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ. ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.
ನ.18 ರಂದು ಪದ್ಮರಾಜ ಬಿಇಡಿ ಕಾಲೇಜು ಹಾಗೂ ಜಿ.ಪಿ.ಪೋರವಾಲ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಜಯಪುರದ ಬಿ.ಎಲ್.ಡಿಈ ಖ್ಯಾತ ವೈದ್ಯಕೀಯ ಸಂಸ್ಥೆಯ ಬಿ, ಎಮ್, ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ನುರಿತ ಅನುಭವಿ ವೈದ್ಯರು ಸಕ್ಕರೆ ಕಾಯಿಲೆ ಬಿ.ಪಿ, ಹೃದಯಕ್ಕೆ ಸಂಬಂಧ ಪಟ್ಟ ಹೆಣ್ಣು ಮಕ್ಕಳಿಗೆ ಸಂಬಂಧ ಪಟ್ಟ ಕಾಯಿಲೆಗಳು, ಕಿವಿ,ಮೂಗು,ಗಂಟಲು ವೈದ್ಯರು, ಚಿಕ್ಕ ಮಕ್ಕಳ ವೈದ್ಯರು, ಚರ್ಮ ರೋಗ ವೈದ್ಯರು, ಕಣ್ಣಿಗೆ ಪೊರೆ ಬಂದವರನ್ನು ತಪಾಸಣೆ ಮಾಡಿ ಬಿ.ಎಲ್.ಡಿ ಈ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ರಕ್ತದಾನ ಜೀವದಾನ ರಕ್ತದಾನ ಮಾಡುವುದೊಂದು ಪುಣ್ಯದ ಕೆಲಸ.ರಕ್ತದಾನ ಮಾಡುವುದರಿಂದ ಅನೇಕ ಜನರಿಗೆ ಜೀವದಾನ ಮಾಡಿದಂತಾಗುತ್ತದೆ. ಅದಕ್ಕೆ 18 ರಿಂದ 55 ವಯಸ್ಸಿನವರು ಆರೋಗ್ಯವಂತರಾದ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ರಕ್ತದಾನ ಮಾಡಬಹುದು.
19 ರಂದು ಸದ್ವಿಚಾರಗೋಷ್ಠಿ-299. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಸೊನ್ನ ದಾಸೋಹಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಸಿಎಂ.ಮನಗೂಳಿ ಕಾಲೆಜಿನ ನಿವೃತ್ತ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಉಪನ್ಯಾಸ ನೀಡಲಿದ್ದಾರೆ. ನ.21 ರಂದು ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮ. ನ.25 ರಂದು ಸಿಂದಗಿಯ ಪುರದೇವತೆ ತಾಯಿ ನೀಲಗಂಗಾ ದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ
ಡಿ. 6 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವ ಮತ್ತು ಸಂಜೆ 5 ಗಂಟೆಗೆ ಕಾರ್ತಿಕೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿಯೊಂದಿಗೆ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಕಲ್ಯಾಣ ಮಹೋತ್ಸವ ಮತ್ತು ಪುರಾಣ ಮಹಾಮಂಗಲ.
ಡಿ. 7 ರಂದು ಬೆಳ್ಳಿಗೆ 11 ಗಂಟೆಗೆ ಮಹಿಳೆಯರಿಂದ ಬೆಳ್ಳಿ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ವ್ಹಿ.ಡಿ.ವಸ್ತ್ರದ, ಪ್ರಾಚಾರ್ಯ ಶರಣು ಜೋಗೂರ ಇದ್ದರು.