ಮೂಡಲಗಿಯಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕರ ಕಛೇರಿ ಪ್ರಾರಂಭ

Must Read

ಮೂಡಲಗಿ : ಇಲ್ಲಿನ ತಹಶೀಲ್ದಾರರ ಕಛೇರಿ ಆವರಣದಲ್ಲಿಯ ಕಟ್ಟಡದಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕರ ಕಛೇರಿಯನ್ನು ಪೂಜೆ ಸಲ್ಲಿಸಿ ಶುಕ್ರವಾರ ಪ್ರಾರಂಭ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ ಮಾತನಾಡಿ,ಕಾರ್ಮಿಕರ ಹಿತದೃಷ್ಟಿಯಿಂದ ಕಚೇರಿ ಪ್ರಾರಂಭಿಸಲಾಗಿದ್ದು ಕುಂದು ಕೊರತೆ ನಿವಾರಿಸಿಕೊಳ್ಳಲು ಈ ಕಚೇರಿಯನ್ನು ಪ್ರಾರಂಭಿಸಲಾಗಿದೆ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕು ಎಂದರು.

ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಪೋಳ ಮಾತನಾಡಿ, ಬಹು ಬೇಡಿಕೆಯಾಗಿದ್ದ ಈ ಕಚೇರಿ ಪ್ರಾರಂಭವಾಗಿದ್ದು ಕಾರ್ಮಿಕರಿಗೆ ಖುಷಿ ನೀಡಿದೆ ತಾಲೂಕಿನ ಎಲ್ಲ ಕಾರ್ಮಿಕರ ಕೆಲಸ ಕಾರ್ಯಗಳಿಗೆ ಕಚೇರಿ ಅನುಕೂಲವಾಗಲಿದೆ ಎಂದರು.

ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ, ಉಪ ತಹಶೀಲ್ದಾರ ಎಸ್.ಎ.ಬಬಲಿ, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಈರಪ್ಪ ಢವಳೇಶ್ವರ, ಭಗವಂತ ಉಪ್ಪಾರ, ರುದ್ರಮನಿ ಹಿರೇಮಠ ಹಾಗೂ ಅನೇಕ ಕಾರ್ಮಿಕರು, ಮತ್ತಿತರರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group