ಸಮನ್ವಯ ಸಂಭ್ರಮ ಕೈಪಿಡಿ ವಿತರಣೆ

0
590

ಬೆಂಗಳೂರು: ಬೆಳಗಾವಿ ಜಿಲ್ಲೆಯ ಡೈಟ್ ವತಿಯಿಂದ ಪ್ರಾಚಾರ್ಯರಾದ ಎಂ. ಎಂ. ಸಿಂಧೂರ ಹಾಗೂ ಉಪನಿರ್ದೇಶಕ ರಾದ ಡಾ. ಎ. ಬಿ. ಪುಂಡಲೀಕ ಇವರ ಮಾರ್ಗ ದರ್ಶನ ಹಾಗೂ ನೇತೃತ್ವದಲ್ಲಿ ಮತ್ತು ಸಮನ್ವಯ ಶಿಕ್ಷಣ ಜಿಲ್ಲಾ ನೋಡಲ್ ಅಧಿಕಾರಿ ಬಸವರಾಜ ಕುಸುಗಲ್.ಡಿ.ವೈ.ಪಿ.ಸಿ (ಆರ್. ಎಂ. ಎಸ್. ಎ) ಯ ಬಸವರಾಜ ಮಿಲ್ಲಾನಟ್ಟಿ. ಡಿ. ವೈ. ಪಿ. ಸಿ (ಎಸ್. ಎಸ್. ಕೆ) ಯ ಕೆ. ಎಸ್. ನಂದೇರ ರವರ ಸಲಹೆ ಯೊಂದಿಗೆ ಹಾಗೂ ಎ. ಪಿ. ಸಿ ಯವರಾದ ರವಿ ಮೆಳವಂಕಿ,ಸಲೀಂ ನದಾಫ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಮತ್ತು ಕ್ಷೇತ್ರ ಸಮನ್ವಯಾಧಿಗಳು ಸಹಕಾರದೊಂದಿಗೆ ಜಿಲ್ಲೆಯ ಎಲ್ಲಾ ಬಿ. ಐ. ಇ. ಆರ್. ಟಿ. ಗಳು ಸೇರಿ ಸಿದ್ಧಪಡಿಸಿದ ಖಾನಾಪುರ ತಾಲೂಕಿನ ವಿಠ್ಠಲ ಹಲಗೇಕರ ಮಹಾಲಕ್ಷ್ಮಿ ಗ್ರುಪ್ ಆಪ್ ಟೋಪಿನಕಟ್ಟಿ ಇವರ ಮುದ್ರಣ ಸಹಾಯ ಸಹಕಾರ ದೊಂದಿಗೆ “ಸಮನ್ವಯ ಶಿಕ್ಷಣ ಸಂಭ್ರಮ” ವಿಕಲಚೇತನರ ಕೈಪಿಡಿಯನ್ನು ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಜರುಗಿದ ವಸತಿ ಸಹಿತ ತರಬೇತಿ ಕಾರ್ಯಾಗಾರದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ತರಬೇತಿ ಸಂಯೋಜನಾಧಿಕಾರಿಗಳಾದ ಲಕ್ಷ್ಮೀ ಲಾಳಿಯವರಿಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬಿ. ಐ. ಇ. ಆರ್. ಟಿ ಶಂಕರ. ಎನ್. ಕಮ್ಮಾರ ಸವದತ್ತಿ ತಾಲೂಕಿನ ವೈ. ಬಿ. ಕಡಕೋಳ ಇವರು ಕೈಪಿಡಿಯನ್ನು ನೀಡುವ ಮೂಲಕ ಪ್ರಚುರ ಪಡಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಕೆ. ಎಮ್. ಗದಗೇರಿ(ಹುಬ್ಬಳ್ಳಿ) ಹೊನ್ನಮ್ಮ (ಮೈಸೂರು) ಎಸ್. ಬಿ. ಗೌಡ. (ರಾಮನಗರ) ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬಿ. ಐ. ಇ. ಆರ್. ಟಿ ಗಳಾದ ಸಂಗಮೇಶ ಕೊಂತಿ.ಶಿವಾನಂದ ಹುಲಗಬಾಳಿ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.