ವಸೀಂ ರಿಜ್ವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದಲಿತ ಸೇನೆಯ ಮನವಿ

Must Read

ಸಿಂದಗಿ: ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಇಲ್ಲಿ ಎಲ್ಲಾ ಜಾತಿ ಜನಾಂಗದವರು ಸಹೋದರತೆಯಿಂದ ಸಹಬಾಳ್ವೆಯಿಂದ ಬದುಕುತ್ತಿದ್ದೇವೆ ಎಂದು ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್, ಎ, ಸಿಂದಗಿಕರ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸೇನೆ ಸಂಘಟನೆ ಹಾಗೂ ಮುಖಂಡರು ಸೇರಿ ಆಲಮೇಲ ತಹಶೀಲ್ದಾರ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಉತ್ತರ ಪ್ರದೇಶದ ಮಾಜಿ ಶಿಯಾ ವಕ್ಫ್ ಬೋರ್ಡ ಚೇರ್ಮನ್ ವಸಿಂ ಎಂಬ ಅವಿವೇಕಿ ತಾನು ಬರೆದಿರುವ ‘ಮಹ್ಮದ ಎಂಬ ಪುಸ್ತಕದಲ್ಲಿ ಅಧ್ಯಯನ ಮಾಡದೇನೆ ಪ್ರವಾದಿಯವರಿಗೆ ನಿಂದನೆ ಮಾಡಿ ಆಕ್ಷೇಪಾರ್ಹ ಪದಗಳನ್ನು ಬರೆದಿದ್ದಾನೆ. ಇದರಿಂದ ದೇಶದಲ್ಲಿರುವ ಪ್ರವಾದಿಯವರ ಅನುಯಾಯಿಗಳಿಗೆ ಹಾಗೂ ಮುಸ್ಲಿಂ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗಿದೆ. ಆದ್ದರಿಂದ ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಿದೆ.

ವಸೀಂ ರಿಜ್ವಿ ವಿರುದ್ಧ ದೇಶವ್ಯಾಪಿ ಹೋರಾಟಗಳು ಪ್ರಕರಣಗಳು ದಾಖಲಾಗುತ್ತಿದ್ದರು ಸರಕಾರ ಇನ್ನೂವರೆಗೂ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಈ ಪುಸ್ತಕವನ್ನು ನಿಷೇಧಿಸಿ ವಸೀಂ ರಿಜ್ವಿ ಯ ಮೇಲೆ ಐ.ಪಿ.ಸಿ ಸೆಕ್ಷನ್ 153, 295, 504 & 505(1)(ಅ) ಅಡಿಯಲ್ಲಿ ಸರಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಿ “ಮಹ್ಮದ ಎಂಬ ಪುಸ್ತಕವನ್ನು ನಿಷೇಧಿಸಬೇಕೆಂದು ದಲಿತ ಸೇನೆಯ ವತಿಯಿಂದ ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ಕಾನೂನು ಕ್ರಮ ಜರುಗಿಸುವಲ್ಲಿ ವಿಳಂಬ ಮಾಡಿದರೆ ಇಡೀ ದೇಶದಾದ್ಯಂತ “ದಲಿತ ಸೇನೆ” ವತಿಯಿಂದ ಬೀದಿಗಿಳಿದು ಹೋರಾಟ ಮಾಡವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೋರಾಟ ಉದ್ದೇಶಿಸಿ ಎಂ,ಕೆ, ಬಿರಾದಾರ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟಿರುವ ಭರವಸೆ  ಯಾವುದೇ ಈಡೇರಿಸಲು ಆಗಿರುವುದಿಲ್ಲ ಹಾಗಾಗಿ ಜನರ ದಿಕ್ಕು ತಪ್ಪಿಸುವ ಸಲುವಾಗಿ ಇಂಥ ವಸಿಮ್ ರಿಜ್ವಿ ಮುಖಾಂತರ ಧರ್ಮ ಧರ್ಮಗಳ ಮಧ್ಯೆ ಶಾಂತಿಭಂಗ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲೂಕ ದಲಿತ ಸೇನೆ ಅಧ್ಯಕ್ಷ ಬಾಲಕೃಷ್ಣ ಚಲವಾದಿ ಮಾತನಾಡಿ, ಪ್ರವಾದಿಗಳಿಗೆ ನಿಂದನೆ ಮಾಡಿರುವುದು ಇದು ಅಕ್ಷಮ್ಯ ಅಪರಾಧ ಕೇವಲ ಮುಸಲ್ಮಾನರಿಗೆ ಅಲ್ಲ ಪ್ರವಾದಿಗಳು ಜಗತ್ತಿಗೆ ಶಾಂತಿಯುತವಾಗಿ ಭೂಮಿ ಮೇಲೆ ಬಂದವರು ಹಾಗಾಗಿ ಈ ಹೇಳಿಕೆಯನ್ನು ದಲಿತ ಸೇನೆ ವತಿಯಿಂದ ಉಗ್ರವಾಗಿ ಖಂಡಿಸುತ್ತದೆ ಎಂದರು.

ಈ ಸಂರ್ದಭದಲ್ಲಿ ರಜತ ತಾಂಬೆ, ಏಕನಾಥ ಕಟ್ಟಿಮನಿ, ಮಂಜುನಾಥ ನಾಯ್ಕೋಡಿ, ಸಲೀಮ್ ಜಮಾದಾರ, ಸದ್ದಾಮ ಆಲಗೂರ, ಮಹ್ಮದ ಬಾಗವಾನ, ಜಾಫರ ಇನಾಮದಾರ, ಅಬ್ದುಲ್‍ರಜಾಕ ದುದನಿ, ಅಬುಬಕರ ಡೋಣಿ, ಅಲ್ತಾಫ ಮರ್ತೂರ, ಅಲ್ಲಾಬಕ್ಷ ಆಳಂದ, ಭೀಮು ವಾಲೀಕಾರ, ಮೈಹಿಬೂಬ ಆಳಂದ, ಅಸ್ಪಾಕ ಮಕಾನದಾರ ಸೇರಿದಂತಹ ಅನೇಕರು ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group