85 ರ ವೃದ್ಧೆಯ ಮನವೊಲಿಸಿ ವ್ಯಾಕ್ಸಿನ್ ಕೊಡಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

0
481

ಬೀದರ್ – ಕೊರೋನಾ ಲಸಿಕೆ ಬೇಡವೇ ಬೇಡವೆಂದು ಹಠ ಹಿಡಿದಿದ್ದ ೮೫ ರ ವೃದ್ಧೆಯ ಮನವೊಲಿಸಿದ ಶಾಸಕ ಬಂಡೆಪ್ಪ ಕಾಶೆಂಪೂರ ಅವರು ಆಕೆಗೆ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದಗಿದ್ದಾರೆ.

ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕಾಶೆಂಪೂರ (ಪಿ) ದೇವಸ್ಥಾನದ ಪಕ್ಕದಲ್ಲೇ ಕೊರೊನಾ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯುತ್ತಿರುವುದನ್ನು ಗಮನಿಸಿ ಮಾಜಿ ಸಚಿವ ಬಂಡೆಪ್ಪ ಖಾಶಾಂಪುರ್ ಸ್ಥಳದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಆಶಾ,ಅಂಗನವಾಡಿ ಕಾರ್ಯಕರ್ತೆಯರಿಂದ ವ್ಯಾಕ್ಸಿನೇಷನ್ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು. ಆರೋಗ್ಯ ಸಿಬ್ಬಂದಿಗಳು,ಖಾಶೆಂಪುರ್ ಗ್ರಾಮದಲ್ಲಿ ಶೇ.92% ರಷ್ಟು ವ್ಯಾಕ್ಸಿನೇಷನ್ ಪ್ರಕ್ರಿಯೆ ಮುಗಿದಿದೆ ಎಂದು ಮಾಹಿತಿ ನೀಡಿದರು.

ಆದರೆ ಅಲ್ಲಿರುವ 85 ವರ್ಷದ ಅಜ್ಜಿ ರತ್ಮಮ್ಮ ಗಂಡ ಬಸಪ್ಪ ಶಿವಗೊಂಡ ಎಂಬುವವರು ವ್ಯಾಕ್ಸಿನ್ ತೆಗೆದುಕೊಳ್ಳುತ್ತಿಲ್ಲವೆಂದು ಶಾಸಕರಿಗೆ ತಿಳಿಸಿದರು. ಅಜ್ಜಿಯ ಬಗ್ಗೆ ಮಾಹಿತಿ ಪಡೆದ ಶಾಸಕರು ಅಜ್ಜಿಯು ಗ್ರಾಮದ ಪ್ರಗತಿಪರ ರೈತ ರಾಜು ಎಂಬುವವರ ಅಜ್ಜಿ ಎಂದು ಸಿಬ್ಬಂದಿಗಳು,ಶಾಸಕರಿಗೆ ಮಾಹಿತಿ ನೀಡಿದರು.

ತಕ್ಷಣವೇ ಫೋನ್ ಮುಖಾಂತರ ಮೊಮ್ಮಗ ರಾಜುನೊಂದಿಗೆ ಮಾತನಾಡಿದ ಶಾಸಕರು ನಿಮ್ಮ ಅಜ್ಜಿಗೆ ವ್ಯಾಕ್ಸಿನ್ ಯಾಕ್ ಕೊಡಿಸಿಲ್ಲ? ಕೊಡಿಸಬೇಕಲ್ಲವೇ?ಎಂದು ಪ್ರಶ್ನಿಸುತ್ತಿದ್ದಂತೆ ಈಗಲೇ ವ್ಯಾಕ್ಸಿನ್ ಕೊಡಿಸಿ ಎಂದು ರಾಜು ಶಾಸಕರಿಗೆ ಮನವಿ ಮಾಡಿದರು.

ಅಲ್ಲೇ ಕುಳಿತಿದ ದಕ್ಷಿಣ ಅಜ್ಜಿಯ ಹತ್ತಿರ ಹೋದ ಶಾಸಕ ಬಂಡೆಪ್ಪ ಖಾಶೆಂಪುರ್,ಅಜ್ಜಿಯನ್ನು ಆತ್ಮೀಯತೆಯಿಂದ ಮಾತನಾಡಿಸಿ,ನೀನು ಯಾಕೆ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.ನನಗೆ ಆರೋಗ್ಯ ಸರಿ ಇಲ್ಲ.ಆಗಾಗ ಆಸ್ಪತ್ರೆಗೆ ಹೋಗುತ್ತಿದ್ದೇನೆ. ಕೆಮ್ಮು,ಜ್ವರ ಇದೆ ಹಾಗಾಗಿ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲವೆಂದು ಹೇಳಿದಳು. ತಕ್ಷಣವೇ ಕಮಠಾಣಾದ ವೈದ್ಯಾಧಿಕಾರಿಗಳಿಗೆ ಪೋನ್ ಮಾಡಿ ಮಾತನಾಡಿದ ಶಾಸಕರು,ಅಜ್ಜಿಗೆ ಇರುವ ಆರೋಗ್ಯದ ಸಮಸ್ಯೆ, ಹಿಮೋಗ್ಲೋಬಿನ್ ಕಡಿಮೆ ಇರುವುದನ್ನು ತಿಳಿಸಿದರು.ವ್ಯಾಕ್ಸಿನ್ ನೀಡಬಹುದೇ? ಹೇಗೆ?ಎಂದು ಪ್ರಶ್ನಿಸಿದಾಗ ನೀಡಬಹುದು, ಏನೂ ಸಮಸ್ಯೆ ಆಗೋದಿಲ್ಲವೆಂದು ವೈದ್ಯಾಧಿಕಾರಿಗಳು ಶಾಸಕರಿಗೆ ಹೇಳಿದರು. ಆದರೆ ಅಜ್ಜಿ ಮಾತ್ರ ಸುತರಾಂ ತನಗೆ ಲಸಿಕೆ ಬೇಡವೆಂದು ಹಠ ಹಿಡಿದರು. ಮತ್ತೆ ಅಜ್ಜಿಯೊಂದಿಗೆ ಮಾತನಾಡಿದ ಶಾಸಕರು ನಾನು ಪ್ರತಿ ಶನಿವಾರ ನಿಮ್ಮ ಮನೆಯ ಹತ್ತಿರವೇ ಇರುವ ಆಂಜನೇಯ ದೇವಸ್ಥಾನಕ್ಕೆ ಬರುತ್ತೇನೆ.ಬಂದಾಗಲೆಲ್ಲ ನಿನ್ನ ಆರೋಗ್ಯ ನೋಡಿಕೊಂಡು ಹೋಗುತ್ತೇನೆ ಎಂದು ಹೇಳಿ, ವ್ಯಾಕ್ಸಿನ್ ಪಡೆಯುವುದರಿಂದ ಏನು ಸಮಸ್ಯೆಯಾಗುವುದಿಲ್ಲ ಎಂದು ಹೇಳಿ ಮನವೊಲಿಸಿದರು. ಬಳಿಕ ಅಜ್ಜಿ ರತ್ಮಮ್ಮ ವ್ಯಾಕ್ಸಿನ್ ಪಡೆದುಕೊಳ್ಳಲು ಸಂತಸದಿಂದ ಒಪ್ಪಿಕೊಂಡರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ