spot_img
spot_img

ಶರಣರ ಬದುಕು ನಮಗೆ ಆದರ್ಶ

Must Read

spot_img

ಸಿಂದಗಿ: ಶರಣರ ಬದುಕಿನ ಜೀವನ ನಮಗೆ ಆದರ್ಶ ಎಂದು ಶ್ರೀಶೈಲಪ್ಪಗೌಡ ಪಾಟೀಲ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭಧ್ರೇಶ್ವರ ಜಾತ್ರಾ ವೈಭವ ನಿಮಿತ್ತ ಹಮ್ಮಿಕೊಂಡ ತಿಂಥಣಿ ಮೌನೇಶ್ವರ ಚರಿತಾಮೃತ ಮಹಾ ಪುರಾಣ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.

ದಿನ ನಿತ್ಯದ ಬದುಕಿನ ಹೋರಾಟದಲ್ಲಿ ಮನಸ್ಸಿಗೆ ಆಗುವ ನೋವುಗಳಿಗೆ ದಿವ್ಯ ಔಷಧಿ ಶರಣರ ಚರಿತ್ರೆ ಎಂದ ಅವರು ಶರಣರು ದಾರ್ಶನಿಕರು ಸಂತರ ಬದುಕನ್ನು ಆದರ್ಶವಾಗಿ ಇಟ್ಟು ಕೊಂಡು ಅವರ ದಾರಿಯಲ್ಲಿ ಸಾಗುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವ ಹೊಣೆ ಹಿರಿಯರದ್ದು ಯಥಾ ರಾಜ ತಥಾ ಪ್ರಜೆ ಅನ್ನುವಂತೆ ಹಿರಿಯರು ರಾಜರಿದ್ದಂತೆ ಕಿರಿಯರು ಪ್ರಜೆಗಳಿದ್ದಂತೆ ರಾಜನಾದವನು ಪ್ರಜೆಗಳ ರಕ್ಷಣೆಯ ಜೊತೆಯಲ್ಲಿ ಅವರ ಬದುಕಿಗೆ ಬೆಳಕಾಗ ಬೇಕು ಹಾಗೆ ಮಾನವ ಬದುಕಿನ ಬೆಳಕು ಪುರಾಣ ಪ್ರವಚನ ಶರಣರ ಸಾಹಿತ್ಯ ಜೀವನದಲ್ಲಿ ಅಳವಡಿಸಿ ಕೊಂಡು ಸಾರ್ಥಕ ಬದುಕಿನತ್ತ ಸಾಗೋಣ ಎಂದು ಹೇಳಿದರು.

ಜೇರಟಗಿ ಶ್ರೀಮಹಾಂತ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು ಏಕದಂಡಗಿ ಶ್ರೀ ಕಾಳಹಸ್ತೇಂದ್ರ ಸಾಮೀಜಿ ಶಾಹಾಪೂರ ಪ್ರವಚನ ಹೇಳಿದರು ಭೂತಾಳಿ ಖಾನಾಪೂರ ನಿರೂಪಿಸಿದರು ಸಿದ್ದಣ್ಣಸಾಹು ಮಸಳಿ ಅಶೋಕ ಪ್ರಸಾದ ತಿವಾರಿ ಮಲ್ಲಣ್ಣಸಾಹು ಮಂದೇವಾಲಿ ಗುರುಪಾದ ನೇಲ್ಲಗಿ ನಿಂಗನಗೌಡ ಪಾಟೀಲ ಅಣವೀರಪ್ಪ ಪತ್ತಾರ ಈರಣ್ಣ ಯರಗಲ್ಲ ಪ್ರಕಾಶ ಅಡಗಲ್ಲ ಈರಣ್ಣ ಬಳಗುಂಪಿ ಶ್ರೀಶೈಲ ಅಣಬಸ್ಟಿ ಹರೀಶ ಗಡಗಿ ಇತರರು ಇದ್ದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!