೫ ಲಕ್ಷದ ಕನ್ನಡಕ ಸಾಬೀತಾದರೆ ರಾಜಕೀಯ ಸನ್ಯಾಸ – ರಾಜಶೇಖರ ಪಾಟೀಲ

Must Read

ಬೀದರ – ನಾನು ತೊಡುವ ಕನ್ನಡಕ ೫ ಲಕ್ಷ ರೂ. ಎಂಬುದನ್ನು ಸಚಿವ ಭಗವಂತ ಖೂಬಾ ಸಾಬೀತು ಮಾಡಿದರೆ ನಾನು ರಾಜಕೀಯ ಬಿಡುತ್ತೇನೆ ಒಂದು ವೇಳೆ ಅದು ಸುಳ್ಳಾದರೆ ಖೂಬಾ ಅವರು ಜುಬ್ಬಾ ತೊಟ್ಟುಕೊಂಡು ಆರಾಮಾಗಿ ಮನೆಯಲ್ಲಿ ಇರಲಿ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಸವಾಲು ಹಾಕಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು ತಮ್ಮ ಕನ್ನಡಕವನ್ನು ಪ್ರದರ್ಶಿಸಿ, ಈ ಕನ್ನಡಕ ಯುಬಿ ಸಿಟಿಯಲ್ಲಿ ಕೊಂಡಿದ್ದು. ೫೦ ಸಾವಿರ ಬೆಲೆ ಬಾಳುತ್ತದೆ ಅಲ್ಲದೆ ನನ್ನ ಮಗಳು ನನಗೆ ಗಿಫ್ಟ್ ಕೊಟ್ಟಿದ್ದು. ಇದು ೫ ಲಕ್ಷದ್ದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಇಲ್ಲಿ ಬಿಹಾರ, ಉತ್ತರ ಪ್ರದೇಶ ರಾಜಕೀಯ ನಡೆದಿದೆ ಹಮ್ ದೇಖೆಂಗೆ, ತುಮ್ ದೇಖೆಂಗೆ…ಇದು ನಡೆಯಬಾರದು ಎಂದರು.

ಭಗವಂತ ಖೂಬಾ ಅವರೇ ಬೀದರ ಜಿಲ್ಲೆಗೆ ಪ್ರಥಮವಾಗಿ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ ಅದರ ಘನತೆಯನ್ನು ಉಳಿಸಿಕೊಳ್ಳಿ. ನಾವು ಯಾವುದೇ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಪಾಟೀಲ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group