“ಉಲ್ಟಾ ಚೋರ್ ಕೊತವಾಲ ಕೊ ಡಾಂಟಾ” ಭಗವಂತ ಖೊಬಾ ವಿರುದ್ಧ ಈಶ್ವರ ಖಂಡ್ರೆ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕೆಪಿಸಿಸಿ ರಾಜ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ಮಧ್ಯೆ ವಾಕ್ಸಮರ ಮುಂದುವರೆದಿದೆ.

ನಾನು ಒಬ್ಬ ಶಾಸಕ ನನಗೇ ಮತಗಟ್ಟೆಗೆ ಬಂದರೆ ನೋಡಿ ಎಂದು ಧಮಕಿ ಹಾಕಿದ್ದಾರೆ. ಒಬ್ಬ ಶಾಸಕ ನಿಗೆ ಈ ರೀತಿ ಆದರೆ ಸಾರ್ವಜನಿಕರ ಗತಿ ಏನು ಎಂದು ಪ್ರಶ್ನೆ ಮಾಡಿರುವ ಖಂಡ್ರೆ ಜಿಲ್ಲಾ ಚುನಾವಣೆ ಅಧಿಕಾರಿಗಳು ಖೂಬಾ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.

ಬೀದರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ತಮ್ಮ ಕರ್ತವ್ಯ ವನ್ನು ಮರೆತು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಜಿಲ್ಲೆಯಲ್ಲೆ ಕಾಲಹರಣ ಮಾಡುತಿರುವುದಲ್ಲದೆ ಶಾಂತಿಯುತವಾದ ಬೀದರದಲ್ಲಿ ಯುಪಿ ಬಿಹಾರ ರಾಜ್ಯಗಳ ಹಾಗೆ ಗೂಂಡಾ ಪ್ರವೃತ್ತಿ ಬಿತ್ತುತಿದ್ದಾರೆ. ಆದರೆ ಚುನಾವಣೆಯಲ್ಲಿ ಏನಾದರು ಅಹಿತ ಘಟನೆ ನಡೆದರೆ ಕಾಂಗ್ರೆಸ್ ಪಕ್ಷವೆ ಕಾರಣ ಎಂದು ಹೇಳುತಿರುವದನ್ನು ಖಂಡಿಸಿದ ಈಶ್ವರ ಖಂಡ್ರೆ ಉಲ್ಟಾ ಚೋರ್ ಕೋತವಾಲ ಕೊ ಡಾಂಟಾ ಎಂದಂತೆ ಆಯಿತು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಭೀಮ್ ರಾವ್ ಪಾಟೀಲ, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ರಹಿಂ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ,ಚಂದ್ರಶೇಖರ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group